ರಾಜಕೀಯ ನಿರುದ್ಯೋಗಿ ರಾಹುಲ್ ಗಾಂಧಿ ವೀರ ಸಾವರ್ಕರ್ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ : ಬಿಜೆಪಿ

New Delhi : ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದ ರಾಜಕೀಯ ನಿರುದ್ಯೋಗಿ ಅವರು ವೀರ ಸಾವರ್ಕರ್(Veera Savarkar) ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಬಿಜೆಪಿ(BJP) ರಾಹುಲ್ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿದೆ.

ಸಾವರ್ಕರ್ ಧೀರತೆಗೆ ಬೆರಗಾಗಿ ಸ್ವತಃ ಇಂದಿರಾ ಗಾಂಧಿ(Indira Gandhi) ಅವರೇ “ಭಾರತದ ವೀರ ಸುಪುತ್ರ” ಎಂದು ಸಂಬೋಧಿಸಿ ವೀರ ಸಾವರ್ಕರ್ ಜನ್ಮ ಶತಮಾನೋತ್ಸವ ಆಚರಣೆಗೆ ಸಹಕರಿಸಿದ್ದರು. ಸಾವರ್ಕರ್ ಕುರಿತಾಗಿ ಅಂಚೆ ಚೀಟಿ ಬಿಡುಗಡೆ ಮಾಡಿ, ಸಾಕ್ಷ್ಯಚಿತ್ರ ನಿರ್ಮಿಸಲು ಆದೇಶ ನೀಡಿದ್ದರು.

ಸಾವರ್ಕರ್ ಟ್ರಸ್ಟ್ಗೆ11 ಸಾವಿರ ದೇಣಿಗೆ ಕೂಡಾ ನೀಡಿದ್ದರು. ನೆಹರೂ ಬ್ರಿಟೀಷರಿಗೆ ಬರೆದ ಕ್ಷಮಾಪಣಾ ಪತ್ರದ ಬಗ್ಗೆ ರಾಹುಲ್ ಗಾಂಧಿ(Rahul Gandhi) ಮೌನವೇಕೆ? ಎಂದು ಪ್ರಶ್ನಿಸಿದೆ. ಕೇವಲ ಎರಡು ವರ್ಷದ ಶಿಕ್ಷೆಯನ್ನೇ ತಡೆದುಕೊಳ್ಳಲಾರದ ಕುಟುಂಬದವರು ಸ್ವಾತಂತ್ರ್ಯದ ಹೆಗ್ಗುರುತು, ಕಠಿಣಾತಿಕಠಿಣ ಶಿಕ್ಷೆ ಎದುರಿಸಿದ ಸಾವರ್ಕರ್ ಅವರ ವೀರತ್ವದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ.

https://youtu.be/T4JXaKRwUF4 ಚುನಾವಣೆ ಹತ್ತಿರ ಬರ್ತಿದ್ದಂಗೇ ಎಲ್ಲೆಲ್ಲೂ ಕಾಮಗಾರಿ, ಗುದ್ದಲಿ ಪೂಜೆ!

ಸಾವರ್ಕರ್ – ಅಂಡಮಾನ್ ಜೈಲು, 50 ವರ್ಷ ಜೀವಾವಧಿ ಶಿಕ್ಷೆ, ಹೆಗಲಲ್ಲಿ ಗಾಣ, ಏಕಾಂತ ವಾಸ, ಕಳಪೆ ಆಹಾರ ಪೂರೈಕೆ. ನೆಹರೂ – ಪಂಜಾಬಿನ ನಭಾ ಜೈಲಿನಲ್ಲಿ ಕೇವಲ 2 ವರ್ಷ ಶಿಕ್ಷೆ. ಜೈಲಿನೊಳಗೆ ಸಕಲ ವ್ಯವಸ್ಥೆ. 2 ವರ್ಷದ ಶಿಕ್ಷೆ ಕ್ಷಮಾಪಣಾ ಪತ್ರದ ಮೂಲಕ ಕೆಲವೇ ದಿನದಲ್ಲಿ ಅಂತ್ಯ.

ನೆಹರೂ ಪರಾಕ್ರಮಿಯೇ? ಕಠಿಣಾತಿ ಕಠಿಣ ಶಿಕ್ಷೆ ಎದುರಿಸಿದ ಸಾವರ್ಕರ್ ವೀರನಲ್ಲ ಎಂದಾದರೆ, ಅಪ್ರಬುದ್ಧ ನಡೆಗಳಿಂದ ನ್ಯಾಯಾಲಯದಿಂದ ಆಗಾಗ್ಗೆ ಛೀಮಾರಿ ಹಾಕಿಸಿಕೊಂಡು ಕ್ಷಮೆ ಕೇಳುವ ರಾಹುಲ್ ಗಾಂಧಿ ಏನು? ಎಂದು ಟೀಕಿಸಿದೆ. ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ದವು ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ,

ನಲವತ್ತು ವರ್ಷಗಳ ಭರ್ತಿ ರಾಜಕೀಯದ ನಂತರ ಮುಸ್ಸಂಜೆಯಲ್ಲಿರುವ ಬದಾಮಿ ಶಾಸಕರಾದ ಸಿದ್ದರಾಮಯ್ಯನವರಿಗೆ ಇಂಥ ಅವಮಾನ ಇದೇ ಮೊದಲು. 75 ವರ್ಷದ ಅಪ್ಪನಿಗೆ 42 ವರ್ಷದ ಮಗ ಯತೀಂದ್ರ ಬುದ್ಧಿವಾದ ಹೇಳುವುದಕ್ಕಿಂತ ಇನ್ನೇನು ಬೇಕು? ಸಿದ್ದರಾಮಯ್ಯನವರಿಗೆ ರಾಜಕೀಯ ಸಂನ್ಯಾಸವೇ ಸೂಕ್ತ.

ಹುರುಳಿಲ್ಲದ ನಿಮ್ಮ ಆರೋಪ ಕೆಸುವಿನ ಎಲೆ ಮೇಲೆ ಬಿದ್ದ ನೀರಿನಂತೆ. ಬೇಗ ಜಾರಿ ಹೋಗುತ್ತದೆ. ಕಾಂಗ್ರೆಸ್ ಮತ್ತು ಕಂಪನಿಯದ್ದು ದಿನಕ್ಕೊಂದು ನಾಟಕ ಎಂದು ಜನತೆಗೆ ಚೆನ್ನಾಗಿ ಅರಿವಾಗಿದೆ. ನೀವು ಏನೇ ಕಸರತ್ತು ಮಾಡಿದರೂ ಮುಖ್ಯಮಂತ್ರಿಯೂ ಆಗುವುದಿಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಇಲ್ಲ.

ಇದನ್ನೂ ಓದಿ : https://vijayatimes.com/train-hits-calf-suffers-dent/

ದೇಶದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ(Atal Bihari Vajpayee) ಅವರನ್ನು ಸೋಲಿಸುವ ಏಕಮಾತ್ರ ಕಾರಣಕ್ಕಾಗಿ ಬ್ಯಾಲೇಟ್ ಪೇಪರ್ ಬಣ್ಣ ಬದಲಿಸಿ, ಜನರ ಹಾದಿ ತಪ್ಪಿಸಿ ವಾಮಮಾರ್ಗದಲ್ಲಿ ಕಾಂಗ್ರೆಸ್ ಸೋಲಿಸಿತ್ತು.

ಮಾನ್ಯ ಸಿದ್ದರಾಮಯ್ಯನವರೇ, ಈ ಚುನಾವಣಾ ಅಕ್ರಮದ ಬಗ್ಗೆ ತಿಳಿದಿದೆಯೇ? ಚುನಾವಣಾ ಅಕ್ರಮವೆಸಗಿ ಆರು ವರ್ಷ ಅಲಹಾಬಾದ್ ಹೈಕೋಟ್ನಿನಿಂದ ಇಂದಿರಾ ಗಾಂಧಿ ಶಿಕ್ಷೆಗೆ ಒಳಪಟ್ಟಿದ್ದರು. ಚುನಾವಣಾ ಅಕ್ರಮವೆಸಗಿ ದೇಶದ ಮೇಲೆ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿತ್ತು.

ಇದನ್ನೂ ಓದಿ : https://vijayatimes.com/complaint-registered-against-rahul/

ಮಾನ್ಯ ಸಿದ್ದರಾಮಯ್ಯ ಅವರೇ, ಈ ಚುನಾವಣಾ ಅಕ್ರಮಗಳನ್ನು ನೀವು ಎಂದಾದರೂ ಪ್ರಶ್ನಿಸಿದ್ದೀರಾ? ಎಂದು ಲೇವಡಿ ಮಾಡಿದೆ.

Exit mobile version