ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಶುಭ ಸೂಚನೆ ವ್ಯಕ್ತವಾಗುತ್ತಿದೆ : ಸಿ.ಟಿ ರವಿ

Congress

Bengaluru : 50 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿರುವ ಕಾಂಗ್ರೆಸ್ಪಕ್ಷದ (Congress) ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ (Mallikarjuna Kharghe) ಸೋನಿಯಾ ಗಾಂಧಿ (Sonia Gandhi) ಸೇರಿದಂತೆ,

ಇಡೀ ಗಾಂಧಿ ಕುಟುಂಬದ ಮರ್ಜಿಗೆ ಒಳಗಾಗುವ ಪರಿಸ್ಥಿತಿ ಬರಬಾರದಿತ್ತು ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಲೇವಡಿ ಮಾಡಿದ್ದಾರೆ.

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿರುವ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರು ಸಾರ್ವಜನಿಕ ಜೀವನಕ್ಕೆ (BJP Will lead in karnataka if?) ಕಾಲಿಟ್ಟಾಗ ಸೋನಿಯಾ ಗಾಂಧಿ ಭಾರತದಲ್ಲೇ ಇರಲಿಲ್ಲ.

ಅಂತಹ ಹಿರಿಯರಾದ ಖರ್ಗೆ ಅವರು, ಸೋನಿಯಾ ಗಾಂಧಿ ಮರ್ಜಿಗೆ ಒಳಗಾಗುವ ಪರಿಸ್ಥಿತಿ ಬರಬಾರದಿತ್ತು.

ಇದನ್ನೂ ಓದಿ : https://vijayatimes.com/health-facts-of-winter-melon/

50 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ಕಳೆದಿರುವ ಮಲ್ಲಿಕಾರ್ಜುನ ಖರ್ಗೆ (BJP Will lead in karnataka if?) ಅವರಿಗೆ ಒಂದು ಕುಟುಂಬದ ಮರ್ಜಿಯಂತೆ ನಡೆದುಕೊಳ್ಳುವ ದುರ್ದೈವ ಬರಬಾರದಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಕಾಂಗ್ರೆಸ್ಪಕ್ಷಕ್ಕೆ ಬಡತನ ಮತ್ತು ಅಸಮಾನತೆಯ ಕುರಿತು ಮಾತನಾಡುವ ನೈತಿಕತೆಯಿಲ್ಲ.

ಸ್ವಾತಂತ್ರ್ಯ ನಂತರ 55 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ಪಕ್ಷ ಇಂದಿಗೂ ಕೂಡಾ ಬಡತನದ ಬಗ್ಗೆಯೇ ಮಾತನಾಡುತ್ತಿದೆ. ಜವಾಹರಲಾಲ ನೆಹರೂ, ಇಂದಿರಾ ಗಾಂಧಿ,

https://youtu.be/70hWl3opi18

ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಎಲ್ಲರೂ ಅಧಿಕಾರ ಅನುಭವಿಸಿದ್ದಾರೆ. ಆದರೆ ಇಂದಿಗೂ ಗಾಂಧಿ ಕುಟುಂಬ ಬಡತನದ ಬಗ್ಗೆಯೇ ಮಾತನಾಡುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ : https://vijayatimes.com/i-became-youth-being-with-rahul-gandhi/

ಇದೇ ವೇಳೆ ಭಾರತ್ಜೋಡೋ ಯಾತ್ರೆಯನ್ನು ಟೀಕಿಸಿದ ಅವರು, ರಾಹುಲ್ ಗಾಂಧಿ ಹೋದ ಎಲ್ಲಾ ಕಡೆಯಲ್ಲಿ ಕಾಂಗ್ರೆಸ್ ಸೋತಿದೆ.

ಹಾಗಾಗಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಶುಭ ಸೂಚನೆ ವ್ಯಕ್ತವಾಗುತ್ತಿದೆ. ರಾಹುಲ್ ಗಾಂಧಿ ಪ್ರಚಾರ ಮಾಡಿದಷ್ಟು ಬಿಜೆಪಿಗೆ ಲಾಭ ಎಂದು ವ್ಯಂಗ್ಯವಾಡಿದರು.
Exit mobile version