ಕಾಂಗ್ರೆಸ್‌ ತೊರೆದ ಬಿಜೆಪಿ ನಾಯಕರನ್ನುʼವೇಶ್ಯೆʼ ಎಂದ ಬಿ.ಕೆ.ಹರಿಪ್ರಸಾದ್‌ ವಿರುದ್ದ ಬಿಜೆಪಿ ವಾಗ್ದಾಳಿ

Bengaluru : 2019 ರಲ್ಲಿ ಕಾಂಗ್ರೆಸ್ ತೊರೆದಿದ್ದಕ್ಕಾಗಿ ಬಿಜೆಪಿ ನಾಯಕರನ್ನು “ವೇಶ್ಯೆ” ಎಂದು ಸಚಿವ ಆನಂದ್ ಸಿಂಗ್(Anand singh) ವಿರುದ್ಧ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್(BK Hariprasad prostitutes statement) ನೀಡಿರುವ ವಿವಾದಾತ್ಮಕ ಹೇಳಿಕೆಯ ವಿರುದ್ದ ಅನೇಕ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಹೇಳಿಕೆಯ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj bommai) ಅವರು,

2019 ರಲ್ಲಿ ಕಾಂಗ್ರೆಸ್ ತೊರೆದಿದ್ದಕ್ಕಾಗಿ ಬಿಜೆಪಿ ನಾಯಕರನ್ನು “ವೇಶ್ಯೆ” ಎಂದು ಕಾಂಗ್ರೆಸ್ ನಾಯಕ ಹೋಲಿಸಿದ್ದಾರೆ. ಇಂತಹ ಕೀಳು, ಅಗ್ಗದ ಹೇಳಿಕೆಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಹರಿಪ್ರಸಾದ್‌ವಿರುದ್ದ ಕಿಡಿಕಾರಿರುವ ಸಚಿವ ಬಿ.ಸಿ.ಪಾಟೀಲ್‌(BK Hariprasad prostitutes statement) ಅವರು, “ಹರಿಪ್ರಸಾದ್‌ ಅವರು ಚುನಾವಣೆ ಮೂಲಕ ಗೆದ್ದು ಬಂದಿಲ್ಲ. ಹಿಂಬಾಗಿಲಿನ ಮೂಲಕ ಬಂದಿದ್ದಾರೆ.

ಹೀಗಾಗಿ ಅವರನ್ನು ನಾನು “ಪಿಂಪ್‌” ಎನ್ನಬಹುದೇ..? ನಾನು ಜನರಿಂದಲೇ ನಾಲ್ಕು ಚುನಾವಣೆಗಳನ್ನು ಗೆದ್ದಿದ್ದೇನೆ. ಆದರೆ ಹರಿಪ್ರಸಾದ್‌ಯಾವುದೇ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿಲ್ಲ” ಎಂದು ಟೀಕಿಸಿದ್ದಾರೆ.

ಇನ್ನು ಹರಿಪ್ರಸಾದ್‌ ಹೇಳಿಕೆಯನ್ನು ಖಂಡಿಸಿ ಟ್ವೀಟ್‌(tweet) ಮಾಡಿರುವ ರಾಜ್ಯ ಬಿಜೆಪಿ,

ಬೇರೆ ಪಕ್ಷದಿಂದ ಬಂದವರು ವೇಶ್ಯೆಯರು ಎನ್ನುವ ಮೂಲಕ ಸಿದ್ದರಾಮಯ್ಯ(Siddaramaiah) ವಿರುದ್ಧದ ತಮ್ಮ ಅಸಮಾಧಾನವನ್ನು ಬಿ.ಕೆ.ಹರಿಪ್ರಸಾದ್‌ ಹೊರಹಾಕಿರುವುದು ಅಚ್ಚರಿ ತಂದಿಲ್ಲ.

ಒಂದೆಡೆ ಮಹಿಳೆಯರನ್ನು ಗೃಹಲಕ್ಷ್ಮೀ ಎನ್ನುತ್ತಾ ಮತ್ತೊಂದೆಡೆ ತುಚ್ಛವಾಗಿ ಮಾತನಾಡುವ ಕಾಂಗ್ರೆಸ್‌ಪಕ್ಷದ ನಿಜಬಣ್ಣ ಹರಿಪ್ರಸಾದ್‌ ಮೂಲಕ ಕಣ್ಣಿಗೆ ರಾಚುತ್ತಿದೆ ಎಂದು ಟೀಕಿಸಿದೆ.

ಇದನ್ನೂ ಓದಿ: https://vijayatimes.com/highest-road-accidents-state/

ವಿಜಯನಗರದ(Vijayanagara) ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿ.ಕೆ.ಹರಿಪ್ರಸಾದ್, “ಆಹಾರಕ್ಕಾಗಿ ತನ್ನ ದೇಹವನ್ನು ಮಾರಿಕೊಳ್ಳುವ ಮಹಿಳೆಯನ್ನು ನಾವು ವೇಶ್ಯೆ ಎಂದು ಕರೆಯುತ್ತೇವೆ.

ತಮ್ಮನ್ನು ತಾವು ಮಾರಿಕೊಂಡ ಶಾಸಕರನ್ನು ನೀವು ಏನೆಂದು ಕರೆಯುತ್ತೀರಿ ಎಂಬುದನ್ನು ನಾನು ನಿಮಗೆ ಬಿಡುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದೀಗ ಅವರ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಸ್ವಾಭಿಮಾನ,ಆತ್ಮಗೌರವದಿಂದ ಬದುಕುವ ಮಹಿಳೆಯರು ಹಾಗೂ ಲೈಂಗಿಕ ಕಾರ್ಯಕರ್ತ ಸಮುದಾಯದ ಬಗ್ಗೆ ಅಪಾರ ಗೌರವವಿದೆ.

ಹೊಸಪೇಟೆಯ ನನ್ನ ಭಾಷಣದಲ್ಲಿನ ಲೈಂಗಿಕ ಕಾರ್ಯಕರ್ತರ ಉಲ್ಲೇಖವನ್ನು ತಪ್ಪಾಗಿ ಅರ್ಥೈಸಿ ಅನಗತ್ಯ ವಿವಾದ ಮಾಡಲಾಗುತ್ತಿದೆ. ದುರುದ್ದೇಶಪೂರಿತವಲ್ಲದ ನನ್ನ ಮಾತಿನಿಂದ ಲೈಂಗಿಕ ಕಾರ್ಯಕರ್ತ ಸಮುದಾಯಕ್ಕೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ತಿಳಿಸಿದ್ದಾರೆ.

Exit mobile version