ಬ್ಲಿಂಕಿಟ್ಗೆ ನಡುಕ; ಮುಂದುವರೆದ ಡೆಲಿವರಿ ಬಾಯ್ಸ್ ಮುಷ್ಕರ

New Delhi: ಜೊಮಾಟೊ ಒಡೆತನದ ಇ–ಕಾಮರ್ಸ್ ಹೋಮ್ ಡೆಲಿವರಿ ಪ್ಲಾಟ್ಫಾರ್ಮ್ ಆಗಿರುವ ಬ್ಲಿಂಕಿಟ್ಗೆ (Blinkit) ಈಗ ಡೆಲಿವರಿ ಬಾಯ್ಗಳ ಸ್ಟ್ರೈಕ್ನ(Strike) ಬಿಸಿ ತಾಕಿದೆ. ಡೆಲಿವರಿ ಶುಲ್ಕವನ್ನು ಕಡಿಮೆಗೊಳಿಸಿದಕ್ಕಾಗಿ (Blinkit delivery boys) ಕಳೆದ ಮೂರ್ನಾಲ್ಕು ದಿನಗಳಿಂದ (Blinkit delivery boys strike) ಡೆಲಿವರಿ ಬಾಯ್ಸ್ ಮುಷ್ಕರ ನಡೆಸುತ್ತಿರುವ

ಪರಿಣಾಮವಾಗಿ ದೆಹಲಿ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬ್ಲಿಂಕಿಟ್ನ 100ಕ್ಕೂ ಹೆಚ್ಚು ಡಾರ್ಕ್ ಸ್ಟೋರ್ಗಳ (Dark Stores) ಆನ್ಲೈನ್ ಸೇವೆ ಬಂದ್ ಆಗಿವೆ ಹಾಗೂ ಆನ್ಲೈನ್ ಡೆಲಿವರಿ ಸೇವೆ ಬಹುತೇಕವಾಗಿ ಸ್ಥಗಿತಗೊಂಡಿದೆ.


ಬೆಂಗಳೂರು ಸೇರಿದಂತೆ ದೇಶದಾದ್ಯಂತ ಸುಮಾರು 400 ಡಾರ್ಕ್ ಸ್ಟೋರ್ಗಳನ್ನು (Dark Stores) ಬ್ಲಿಂಕಿಟ್ ಹೊಂದಿದೆ.

ಇದರಲ್ಲಿ ಸರಿ ಸುಮಾರು 200 ಸ್ಟೋರ್‍ಗಳು ದೆಹಲಿ,ನೋಯ್ಡಾ(Noida) , ಘಾಜಿಯಾಬಾದ್, ಫರೀದಾಬಾದ್ನಲ್ಲೇ ಇವೆ.

ಈಗ ಅರ್ಧದಷ್ಟು ಸ್ಟೋರ್ಗಳು ಡೆಲಿವರಿ ಬಾಯ್ಗಳಿಲ್ಲದೇ ಆನ್ಲೈನ್ ಡೆಲಿವರಿ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಿವೆ.

ಬ್ಲಿಂಕಿಟ್ ಡೆಲಿವರಿ ಬಾಯ್ಗಳ ಮುಷ್ಕರಕ್ಕೆ ಕಾರಣ ಏನು?
ಬಹಳ ಶೀಘ್ರ ಸಮಯದಲ್ಲಿ ಬ್ಲಿಂಕಿಟ್ ಡೆಲಿವರಿ ಸೇವೆಗೆ ಹೆಸರಾದ ಇ–ಕಾಮರ್ಸ್ (E-Commerce) ಕಂಪನಿ ಎಂದೇ ಹೇಳಬಹುದು. ಏಕೆಂದರೆ ಇದು 10 ನಿಮಿಷದಲ್ಲಿ ಡೆಲಿವರಿ ಒದಗಿಸುತ್ತದೆ.

ಡೆಲಿವರಿ ಹುಡುಗರಿಗೆ ಜೊಮಾಟೊ(Zomato) , ಸ್ವಿಗ್ಗಿ, ಡುಂಜೋ, ಝೆಪ್ಟೋ ಇತ್ಯಾದಿ ಸಂಸ್ಥೆಗಳಿಗಿಂತ ಬ್ಲಿಂಕಿಟ್ನಲ್ಲಿ ಅತಿ ಹೆಚ್ಚು ಹಣ ಸಿಗುತ್ತಿತ್ತು.

ಈ ಹಿಂದೆ ಹುಡುಗರು ಪ್ರತೀ ಡೆಲಿವರಿಗೆ 50 ರೂ ಹಣವನ್ನು ಶುಲ್ಕವಾಗಿ ಪಡೆಯುತ್ತಿದ್ದರು. ಆದರೆ ಈಗ ಬ್ಲಿಂಕಿಟ್ ಹೊಸ ಶುಲ್ಕ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಈ ಹಿಂದೆ 50 ರೂ ಡೆಲಿವರಿ ಫೀಸ್ ಪಡೆಯುತ್ತಿದ್ದ ಹುಡುಗರು ಈ ಹೊಸ ತರಹದ ಶುಲ್ಕ ವ್ಯವಸ್ಥೆಯಲ್ಲಿ ಕೇವಲ 15 ರೂ ಪಡೆಯಲಿದ್ದಾರೆ.

ಹಾಗೂ ಅದರಲ್ಲಿ ಡೆಲಿವರಿ ಮಾಡಲಾಗುವ ಸ್ಥಳ ಎಷ್ಟು ದೂರ ಇದೆ ಎನ್ನುವುದರ ಮೇಲೆ ಶುಲ್ಕ ನಿರ್ಧರಿಸಲಾಗುತ್ತದೆ. ಇದರಿಂದ ದೆಹಲಿ ಹಾಗೂ ಸುತ್ತಮುತ್ತಲಿನ ಬಹುತೇಕ ಎಲ್ಲಾ ಡೆಲಿವರಿ ಬಾಯ್ಗಳನ್ನು ರೊಚ್ಚಿಗೆಬ್ಬಿಸಿದೆ.

ಹೊಸ ಶುಲ್ಕ ವ್ಯವಸ್ಥೆ ನಿಲ್ಲಿಸಿ, ಹಳೆಯದನ್ನೇ ಮುಂದುವರಿಸುವವರೆಗೂ ತಾವು ಮತ್ತೆ ಡೆಲಿವರಿ ಸೇವೆಗೆ ಬರುವುದಿಲ್ಲ ಎಂದು ಹುಡುಗರು ಕೆಲಸ ನಿಲ್ಲಿಸಿ ಮುಷ್ಕರ ಹೂಡಿದ್ದಾರೆ.


ಬ್ಲಿಂಕಿಟ್ನಲ್ಲಿ ಫಾಸ್ಟ್ ಡೆಲಿವರಿ ಹೇಗೆ ಮಾಡುತ್ತಿದೆ?
ಬೇರೆ ಯಾವದೇ ಆನ್‌ಲೈನ್‌ (Online) ಡೆಲಿವರಿ ಸಂಸ್ಥೆಗಳಿಗಿಂತ ಬ್ಲಿಂಕಿಟ್ನಲ್ಲಿ ಕೆಲವೇ ನಿಮಿಷಗಳಲ್ಲಿ ಮನೆಗೆ ಸಾಮಾನುಗಳನ್ನು ತಲುಪಿಸಲು ವಿಶೇಷ ವ್ಯವಸ್ಥೆ ಹೊಂದಿದೆ.

ನಗರದ ಜನಸಂದಣಿ ಪ್ರದೇಶಗಳಲ್ಲಿ ಬಹಳ ಹೆಚ್ಚು ಡಾರ್ಕ್ ಸ್ಟೋರ್ಗಳನ್ನು ತೆರೆಯಲಾಗಿದೆ.ಇದರಲ್ಲಿ ಪ್ರತಿಯೊಂದು ಡಾರ್ಕ್ ಸ್ಟೋರ್ಗಳಿಗೂ ನಿರ್ದಿಷ್ಟ ಡೆಲಿವರಿ (Blinkit delivery boys strike) ಹುಡುಗರನ್ನು ನೇಮಿಸಲಾಗಿದೆ.

ಈ ಹುಡುಗರು ನಿರ್ದಿಷ್ಟ ಡಾರ್ಕ್ ಸ್ಟೋರ್ಗಾಗಿಯೇ ಕೆಲಸ ಮಾಡುತ್ತಾರೆ. ಇವರು 2-3 ಕಿಮೀ ದೂರದ ಸ್ಥಳಗಳಿಗೆ ಡೆಲಿವರಿ ಸೇವೆ ನೀಡುತ್ತಾರೆ. ಆದ್ದರಿಂದ ತ್ವರಿತವಾಗಿ ಸರಕುಗಳನ್ನು ಡೆಲಿವರಿ ಮಾಡಲು ಸಾಧ್ಯವಾಗುತ್ತದೆ.

ಬ್ಲಿಂಕಿಟ್ನ ಕ್ಯಾಷ್ ಆನ್ ಡೆಲಿವರಿ ಸಮಸ್ಯೆ
ಇದರಲ್ಲಿ ಯಾವದೇ ಡೆಲಿವರಿ ಬಾಯ್ ಕ್ಯಾಷ್ ಆನ್ ಡೆಲಿವರಿ (Cash on Delivery) ಆರ್ಡರ್ನಿಂದ ಒಬ್ಬ 500 ರೂಗಿಂತ ಹೆಚ್ಚು ನಗದನ್ನು ಇಟ್ಟುಕೊಳ್ಳುವಂತಿಲ್ಲ. ಆದರೂ 500 ರೂ ಸಂಗ್ರಹವಾದರೆ ಕೂಡಲೇ ಅದನ್ನು ಆ್ಯಪ್ ಮೂಲಕ ಬ್ಲಿಂಕಿಟ್ಗೆ ರವಾನೆ ಮಾಡಲೇಬೇಕಾಗುತ್ತದೆ.

ಒಂದು ವೇಳೆ ಅವರ ಬ್ಯಾಂಕ್ ಖಾತೆಯಲ್ಲಿ ಹಣ ಇದ್ದರೆ ಈ ಕೆಲಸವನ್ನು ಸುಲಭವಾಗಿ ಮಾಡಬಹುದು.

ಇಲ್ಲದಿದ್ದರೆ ಮತ್ತೆ ಬ್ಯಾಂಕಿಗೆ ಹೋಗಿ ಅಲ್ಲಿ ಡೆಪಾಸಿಟ್ ಮಾಡಿ ಆ ಬಳಿಕ ಆನ್ಲೈನ್ನಲ್ಲಿ ಟ್ರಾನ್ಸ್ಫರ್ ಮಾಡಬೇಕಾಗುತ್ತದೆ..

ಬ್ಯಾಂಕಿಗೆ ಹೋದರೆ ಬಹಳಷ್ಟು ಸಮಯ ವ್ಯಯವಾಗುತ್ತದೆ ಹೀಗಾಗಿ, ಡೆಲಿವರಿ ಹುಡುಗರು ಯಾವುದಾದರೂ ಅಂಗಡಿಗೆ ಹೋಗಿ ಅಲ್ಲಿ ಅವರಿಗೆ ಕ್ಯಾಷ್ ಕೊಟ್ಟು ಅವರಿಂದ ಆನ್ಲೈನ್ ಟ್ರಾನ್ಸ್ಫರ್ ಮಾಡಿಸಿಕೊಳ್ಳುತ್ತಾರೆ.

ಆದರೆ ಇದಕ್ಕೆ ಆ ಅಂಗಡಿಯವರು ಶೇ. 10ರಷ್ಟು ಶುಲ್ಕ ಚಾರ್ಜ್ (Charge) ಮಾಡುತ್ತಾರಂತೆ. ಹಾಗಾಗಿ,

ಈ ಡೆಲಿವರಿ ಹುಡುಗರಿಗೆ ಕ್ಯಾಷ್ ಆನ್ ಡೆಲಿವರಿ ಸೇವೆಗಳ ಆರ್ಡರ್ಗಳಿಂದ ಶೇ. 10ರಷ್ಟು ಹಣ ವ್ಯಯವಾಗುತ್ತದೆ ಎಂದು ಹೇಳಲಾಗಿದೆ.

Exit mobile version