ಯಡಿಯೂರಪ್ಪ ರಾಜಕೀಯ ವಿದಾಯ: ಬಿಜೆಪಿ ಲಿಂಗಾಯತ ಮತಬ್ಯಾಂಕ್‌ ಬೀಳುತ್ತಾ ಭಾರೀ ಏಟು ?

Bangalore: ಕರ್ನಾಟಕದ ರಾಜಕೀಯದಲ್ಲಿ ಲಿಂಗಾಯತ ಮತಬ್ಯಾಂಕ್‌ ಅತ್ಯಂತ ಪ್ರಮುಖ ಪಾತ್ರ ವಹಿಸುವ ಮೂಲಕ, ಅನೇಕ ದಶಕಗಳಿಂದ ರಾಜ್ಯ ರಾಜಕೀಯದಲ್ಲಿ ತನ್ನದೇ (bsy retirement affects bjp) ಆದ ಪ್ರಾಬಲ್ಯ ಹೊಂದಿದೆ.

ರಾಜ್ಯದ ಜನಸಂಖ್ಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ(Lingayath) ಸಮುದಾಯ ರಾಜಕೀಯ ಮತ ಬ್ಯಾಂಕ್‌ದೃಷ್ಟಿಯಿಂದ ರಾಜಕೀಯ ಪಕ್ಷಗಳಿಗೆ ಲಿಂಗಾಯತ ಸಮುದಾಯದ ಬೆಂಬಲ ಅಗತ್ಯ.

ಈ ನಿಟ್ಟಿನಲ್ಲೇ ಕರ್ನಾಟಕದಲ್ಲಿ ಅನೇಕ ವರ್ಷಗಳಿಂದ ರಾಜಕೀಯ ತಂತ್ರಗಾರಿಕೆ ರೂಪುಗೊಳ್ಳುತ್ತಿದೆ.

ಉತ್ತರ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕಾದರೆ, ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದ ಬೆಂಬಲ ಅತ್ಯಗತ್ಯ.

ಹೀಗಾಗಿಯೇ ಕಾಂಗ್ರೆಸ್‌ ಮತ್ತು ಬಿಜೆಪಿ(BJP) ಪಕ್ಷಗಳು ಲಿಂಗಾಯತ ಮತಬ್ಯಾಂಕ್‌ ಸೆಳೆಯಲು ನಿರಂತರ ಪ್ರಯತ್ನ ನಡೆಸುತ್ತಿವೆ.

ರಾಜ್ಯದಲ್ಲಿ ಲಿಂಗಾಯತ ಮತಬ್ಯಾಂಕ್‌ ಕಾಲಘಟ್ಟಕ್ಕೆ ಅನುಗುಣವಾಗಿ ತನ್ನ ನಿಷ್ಠೆಯನ್ನು ಬದಲಿಸಿರುವುದನ್ನು ಕಾಣಬಹುದು.

ಈ ಹಿಂದೆ ಎಸ್.ನಿಜಲಿಂಗಪ್ಪ(S.Nijalingappa) ಅವರು ಮುಖ್ಯಮಂತ್ರಿಯಾಗಿದ್ದಾಗ ಲಿಂಗಾಯತ ಸಮುದಾಯ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲವಾಗಿತ್ತು.

ತದನಂತರ ವಿರೇಂದ್ರ ಪಾಟೀಲ್‌ ಅವರು ಮುಖ್ಯಮಂತ್ರಿಯಾದ ನಂತರ ಲಿಂಗಾಯತ (bsy retirement affects bjp) ಸಮುದಾಯ ಕಾಂಗ್ರೆಸ್‌ ಪಕ್ಷದೊಂದಿಗೆಯೇ ಗುರುತಿಸಿಕೊಂಡಿತು.

ಆದರೆ ಕಾಂಗ್ರೆಸ್‌ ಪಕ್ಷದ ಒಳ ರಾಜಕೀಯದಿಂದ ಅನಿವಾರ್ಯವಾಗಿ ಮುಖ್ಯಮಂತ್ರಿ ಸ್ಥಾನದಿಂದ ವಿರೇಂದ್ರ ಪಾಟೀಲರನ್ನು (Virendra Patil) ಕಾಂಗ್ರೆಸ್‌ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಪರಿಣಾಮ,

ಇಡೀ ಲಿಂಗಾಯತ ಸಮುದಾಯ ಕಾಂಗ್ರೆಸ್‌ ಪಕ್ಷದೊಂದಿಗೆ ಮುನಿಸಿಕೊಂಡಿತು. ವಿರೇಂದ್ರ ಪಾಟೀಲರ ನಂತರ ಇಂದಿನವರೆಗೂ ಲಿಂಗಾಯತ ಸಮುದಾಯ ಕಾಂಗ್ರೆಸ್‌ ಪಕ್ಷದೊಂದಿಗೆ ಅಂತರ ಕಾಯ್ದುಕೊಂಡೆ ಬಂದಿದೆ.

ವಿರೇಂದ್ರ ಪಾಟೀಲರ ನಂತರ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ (B.S.Yeddyurappa)ನಿಧಾನವಾಗಿ ಲಿಂಗಾಯತ ಸಮುದಾಯದ ಮೇಲೆ ಹಿಡಿತ ಸಾಧಿಸಿದ ಪರಿಣಾಮ, ಲಿಂಗಾಯತ ಸಮುದಾಯ ಬಿಜೆಪಿ ಬೆಂಬಲಕ್ಕೆ ನಿಂತಿತು.

ಅದರ ಪರಿಣಾಮವಾಗಿಯೇ ಕರ್ನಾಟಕದಲ್ಲಿ ಬಿಜೆಪಿ ಪ್ರಬಲ ನೆಲೆ ಕಂಡುಕೊಂಡಿತು.

2006ರ ವೇಳೆಗೆ ಅಧಿಕಾರ ಹಿಡಿಯುವ ಮಟ್ಟಕ್ಕೂ ಬಿಜೆಪಿ (BJP) ಬೆಳೆಯಿತು. ಬಿ.ಎಸ್.ಯಡಿಯೂರಪ್ಪ ಲಿಂಗಾಯತ ನಾಯಕನಾಗಿ ಗುರುತಿಸಿಕೊಂಡ ನಂತರ ಬಿಜೆಪಿಯೇ ಮುಂದಿನ ಒಂದು ದಶಕಗಳ ಕಾಲ, ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯಿತು.


ಆದರೆ ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಅಧಿಕಾರದಿಂದ ದೂರವಿಡಲಾಗಿದೆ.

ಹೀಗಾಗಿಯೇ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯ ಯಾವ ಪಕ್ಷಕ್ಕೆ ಬೆಂಬಲವಾಗಿ ನಿಲ್ಲಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಸುಮಾರು ಎರಡು ದಶಕಗಳ ಕಾಲ ಬಿ.ಎಸ್.ಯಡಿಯೂರಪ್ಪ ಲಿಂಗಾಯತ ನಾಯಕರಾಗಿ, ಬಿಜೆಪಿ ಪಕ್ಷಕ್ಕೆ ಶಕ್ತಿಯಾಗಿದ್ದರು.

ಆದರೆ ಲಿಂಗಾಯತ ಶಕ್ತಿಯಾಗಿದ್ದ ಯಡಿಯೂರಪ್ಪ ಅವರಿಲ್ಲದ ಬಿಜೆಪಿ ಲಿಂಗಾಯತ ಸಮುದಾಯದ ವಿಶ್ವಾಸ ಗಳಿಸಲಿದೆಯೇ.? ಎಂಬ ಪ್ರಶ್ನೆಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಸಿಗಲಿದೆ.

-ಮಹೇಶ್.ಪಿ.ಎಚ್

Exit mobile version