ತಮಿಳುನಾಡಿನ ಕಡೆಗೆ ಹೋಗುವ ಬಸ್ ಸೌಲಭ್ಯ ರದ್ದು, ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹಿಂದಕ್ಕೆ ಕರೆಸಿಕೊಂಡ ತಮಿಳುನಾಡು ಸರ್ಕಾರ

Bengaluru: ಇಂದು (ಸೆ. 26) ರಂದು ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್ ಮಾಡಲಾಗಿದ್ದು, ಅದರಿಂದಾಗಿ (Bus services cancel to TN) ಬೆಂಗಳೂರಿನಿಂದ ತಮಿಳುನಾಡಿನ

(Tamil Nadu) ಕಡೆಗೆ ಹೋಗುವ ಬಸ್ ಸೌಲಭ್ಯವು ರದ್ದಾಗಿದೆ. ತಮಿಳುನಾಡು ಸರ್ಕಾರ ತನ್ನ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ. ಖಾಸಗಿ ಬಸ್ಸುಗಳು ಬಂದ್ ಹಿನ್ನೆಲೆಯಲ್ಲಿ

ಸ್ಥಗಿತವಾಗಿವೆ. ಕೆಎಸ್ ಆರ್ ಟಿಸಿಯಿಂದ (KSRTC) ತಮಿಳುನಾಡಿನ ಕಡೆಗೆ ಹೋಗುವ ಬಸ್ಸುಗಳು ಒಂದೆರಡು ಇದ್ದಾವಾದರೂ ಅವುಗಳಲ್ಲಿ ಜನರಿಲ್ಲ!

ಬಂದ್ ಗೆ ನಿಧಾನವಾಗಿ ಕಾವೇರುವ ಲಕ್ಷಣಗಳು ಕಾಣುತ್ತಿದ್ದು, ಮೆಜೆಸ್ಟಿಕ್ (Majestic) ಮುಂತಾದ ಕಡೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರ ಯಥಾವತ್ತಾಗಿದೆ. ಆಟೋಗಳು, ಕ್ಯಾಬ್ ಗಳು

(Cab) ಎಂದಿನಂತೆ ಸಂಚರಿಸುತ್ತಿವೆ. ಆದರೆ ತಮಿಳುನಾಡಿನ ಕಡೆಗೆ ಹೋಗುವ ಬಸ್ಸುಗಳ ಸಂಚಾರ ಬೆಳಗ್ಗೆ ಸ್ತಬ್ದವಾಗಿದೆ.

ಮೈಸೂರು ರಸ್ತೆಯ ಸ್ಯಾಟಲೈಟ್ (Satellite) ಬಸ್ ಸ್ಟ್ಯಾಂಡಿನಲ್ಲಿ ಹಾಗೂ ಶಾಂತಿನಗರ ಬಸ್ ಸ್ಟ್ಯಾಂಡಿನಲ್ಲಿ ಬೆಂಗಳೂರಿನಿಂದ ತಮಿಳುನಾಡು ಕಡೆಗೆ ಹೋಗುವ ಬಸ್ಸುಗಳು ಅಧಿಕವಾಗಿ ಕಾಣಸಿಗುವುದು

ಈ ಬಸ್ ಸ್ಟ್ಯಾಂಡ್ ಗಳಲ್ಲಿ(Bus Stand) ತಮಿಳುನಾಡು ಸರ್ಕಾರಿ ಸಾರಿಗೆ ಸಂಸ್ಥೆಗಳ ಬಸ್ಸುಗಳು ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವು.

ತಮಿಳುನಾಡು ಸರ್ಕಾರ ಸೆ. 25ರ ಮಧ್ಯರಾತ್ರಿಯಿಂದಲೇ ಬೆಂಗಳೂರು ಬಂದ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ತನ್ನ ಬಸ್ಸುಗಳನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ. ಮೈಸೂರಿನ ಸ್ಯಾಟಲೈಟ್ ಬಸ್ ನಿಲ್ದಾಣ

ಹಾಗೂ ಶಾಂತಿನಗರ ಬಸ್ (Bus services cancel to TN) ನಿಲ್ದಾಣವು ಬಿಕೋ ಎನ್ನುತ್ತಿವೆ.

ಖಾಸಗಿ ಸಾರಿಗೆ ಒಕ್ಕೂಟವೂ ಬಂದ್ ಗೆ ಬೆಂಬಲ ಘೋಷಿಸಿರುವುದರಿಂದ ಶಾಂತಿನಗರ(Shantinagara), ಹಲಸೂರು, ಹಾಗೂ ಮೈಸೂರು ರಸ್ತೆಗಳಲ್ಲಿ ಕಾಣಸಿಗುತ್ತಿದ್ದ ಬೆಂಗಳೂರಿನಿಂದ ತಮಿಳುನಾಡಿನ

ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸುಗಳೂ ಸಹ ಸ್ಥಗಿತಗೊಂಡಿವೆ. ತಮಿಳುನಾಡಿನ ಖಾಸಗಿ ಬಸ್ಸುಗಳೂ ಸಹ ಬೆಂಗಳೂರಿನಿಂದ ಮಾಯವಾಗಿರುವುದು ತಮಿಳುನಾಡಿನ ಕಡೆಗಿನ ಬಸ್ ಸಂಪರ್ಕ

ಬಹುತೇಕ ಬಂದ್ ಆಗಿದೆ.

ತಮಿಳುನಾಡಿನ ಕಡೆಗೆ ಹೋಗುವ ಕೆಎಸ್ಆರ್ ಟಿಸಿ ಬಸ್ಸುಗಳ ಸಂಚಾರವನ್ನು ಚಾಲ್ತಿಯಲ್ಲಿಟ್ಟುಕೊಂಡಿದ್ದು, ಆದರೆ ಹೆಚ್ಚಿನ ಬಸ್ಸುಗಳಿಲ್ಲ. ಕೇವಲ ಬೆರಳೆಣಿಕೆಯಷ್ಟು ಬಸ್ಸುಗಳನ್ನು ಬಿಡಲಾಗಿದ್ದು,

ಅವುಗಳಲ್ಲಿ ಜನರಿಲ್ಲ. ಮೊದಲೇ ಬಂದ್ ವಾತಾವರಣ ಇರುವುದರಿಂದ ಬಸ್ಸುಗಳಿಗೆ ಕಲ್ಲು ತೂರಾಟ ಮತ್ತಿತರ ಸಮಸ್ಯೆಗಳಾಗಬಹುದು ಎಂದು ಹೆದರಿ, ಜನರು ಬಂದಿಲ್ಲ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ತಮಿಳುನಾಡು ಕಡೆಗೆ ಹೋಗುವವರು ಅತ್ತಿಬೆಲೆಯವರೆಗೆ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಸಿ ಅಲ್ಲಿಂದ ತಮಿಳುನಾಡಿನ ಹೊಸೂರಿನ ಕಡೆಗೆ ಹೋಗಲು ಇರುವ ಖಾಸಗಿ ಸಾರಿಗೆ

ಸೌಕರ್ಯಗಳಿದ್ದರೆ ಅವುಗಳನ್ನು ಬಳಸಿಕೊಂಡು ಪ್ರಯಾಣಿಸಬಹುದಾಗಿದೆ. ಇನ್ನು, ಓಲಾ(Ola), ಉಬರ್ ನಂಥ (Uber) ಖಾಸಗಿ ಕ್ಯಾಬ್ ಗಳ ಸೇವೆಯು ಎಂದಿನಂತೆ ಲಭ್ಯವಿದ್ದು, ಅವುಗಳಲ್ಲಿ ತೆರಳಲು

ಇಚ್ಛಿಸುವವರು ಕರ್ನಾಟಕ – ತಮಿಳುನಾಡು ಗಡಿಯವರೆಗೆ ಸಂಚರಿಸಬಹುದಾಗಿದೆ.

ಇದನ್ನು ಓದಿ: ಈ 5 ಕನ್ನಡ ಚಿತ್ರಗಳ ಒಟ್ಟು ಕಲೆಕ್ಷನ್ ಒಂದು ತಮಿಳು ಚಿತ್ರದ ಕಲೆಕ್ಷನ್ಗೆ ಸಮ ; ಸತ್ಯ ಬಿಚ್ಚಿಟ್ಟ ನಿರ್ದೇಶಕ ಶಶಾಂಕ್..!

Exit mobile version