ನವದೆಹಲಿ : ಪ್ರಮುಖ ಟೆಕ್ ಶಿಕ್ಷಣ ಕಂಪನಿಯಾದ ಬೈಜೂಸ್(Byjus lays off employees) 1,000 ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಿದೆ. ಇದು ಕಾರ್ಪೊರೇಟ್ ಪುನರ್ರಚನಾ ಪ್ರಕ್ರಿಯೆಯ ಭಾಗವಾಗಿದೆ
ಎಂದು ಕಂಪನಿ ಸೋಮವಾರ ಹೇಳಿದೆ. 22 ಶತಕೋಟಿ ಮೌಲ್ಯವನ್ನು ಹೊಂದಿದ್ದ ಈ ಬೈಜೂಸ್ ಕಂಪನಿಯು ತನಗೆ ಸಾಲ ನೀಡಿದ ಅಮೆರಿಕ (America) ಕಂಪನಿಯೊಂದಿಗೆ ಕಾನೂನು ಹೋರಾಟ ನಡೆಸುತ್ತಿದೆ
ಇದೀಗ ಅದರ ಬೆನ್ನಲ್ಲೇ ಸಿಬ್ಬಂದಿ ಕಡಿತವನ್ನು (Byjus lays off employees) ಕೈಗೊಂಡಿದೆ.

ಪ್ರಸ್ತುತ ಕಂಪನಿಯಲ್ಲಿ 50,000 ಉದ್ಯೋಗಿಗಳು ಉಳಿದಿದ್ದಾರೆ.ಬೈಜೂಸ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯಲ್ಲಿರುವ ನೌಕರರಲ್ಲಿ ಶೇ.5ರಷ್ಟು ಸಿಬ್ಬಂದಿಯನ್ನು ತೆಗೆದು ಹಾಕುವುದಾಗಿ ಘೋಷಿಸಿತ್ತು.
ಇದರ ಆಧಾರದ ಮೇಲೆ ಕಂಪನಿಯು 2,500 ಜನರನ್ನು ವಜಾಗೊಳಿಸಲು ಯೋಜಿಸಿದೆ. ಇದಕ್ಕೂ ಮೊದಲು ಫೆಬ್ರವರಿ ಆರಂಭದಲ್ಲಿ, ಬೈಜೂಸ್ 1,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತು.ಗೂಗಲ್
(Google) ನಂತರ, ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದ ಕಂಪನಿ ಅಂದರೆ ಅದು ಬೈಜೂಸ್ ಆಗಿದೆ.
ಇದನ್ನೂ ಓದಿ : ಅಕ್ಕಿ ಪಾಲಿಟಿಕ್ಸ್: ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ನಿರಾಕರಣೆ : ಅಕ್ಕಿಗಾಗಿ ಅನ್ಯ ರಾಜ್ಯಗಳ ಮೊರೆ
ಅಕ್ಟೋಬರ್ 2022 ರಿಂದ, ಈ ಎಜುಟೆಕ್ ಕಂಪನಿಯು (Edutech Company) ಸಿಬ್ಬಂದಿಯನ್ನು ವಜಾಗೊಳಿಸಲು ಪ್ರಾರಂಭಿಸಿದೆ. 50,000 ಉದ್ಯೋಗಿಗಳನ್ನು ಹೊಂದಿರುವ ಬೈಜೂಸ್ ಕಂಪನಿಯು ಅಕ್ಟೋಬರ್‌ನಲ್ಲಿ
2,500 ಜನರನ್ನು ವಜಾಗೊಳಿಸಿತ್ತು. ನಾಲ್ಕು ತಿಂಗಳ ನಂತರ, ಫೆಬ್ರವರಿಯಲ್ಲಿ, ಕನಿಷ್ಠ 1,000 ಜನರನ್ನು ಮತ್ತೆ ವಜಾಗೊಳಿಸಲಾಯಿತು. ಇದೀಗ ಮತ್ತೆ ಇನ್ನೂ 1,000 ಉದ್ಯೋಗಿಗಳನ್ನು
ವಜಾಗೊಳಿಸಿದ್ದಾರೆ ಎಂದು ವರದಿಯಾಗಿದೆ. ಸಂಸ್ಥೆಯಲ್ಲಿ ಕೆಲವು ಹಿರಿಯ ಜನರ ಮೇಲೆ ಈ ವಜಾ ಪ್ರಕ್ರಿಯೆಯು ಪರಿಣಾಮ ಬೀರಿದೆ ಎಂದು ತಿಳಿದು ಬಂದಿದೆ.

ಜೂನ್‌ನಲ್ಲಿ(June) ನೂರಾರು ಉದ್ಯೋಗಗಳನ್ನು ಕಡಿತಗೊಳಿಸಿದ ನಂತರ ಅಕ್ಟೋಬರ್‌ನಲ್ಲಿ(October) ಅದು ತನ್ನ ಉದ್ಯೋಗಿಗಳ ಶೇಕಡಾ 5 ರಷ್ಟು ವಜಾಗೊಳಿಸಿತ್ತು.ನಂತರ ಎಲ್ಲಾ ಹಂತಗಳಲ್ಲಿ ನೇಮಕ
ಮಾಡಿಕೊಳ್ಳುವುದನ್ನು ಮುಂದುವರಿಸುವುದಾಗಿ ಬೈಜೂಸ್ ಭರವಸೆ ನೀಡಿತ್ತು ಅಷ್ಟೇ ಅಲ್ಲದೆ 10,000 ಹೆಚ್ಚಿನ ಶಿಕ್ಷಕರನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಮುಂಬರುವ ವರ್ಷದಲ್ಲಿ ಹೊಂದಿದೆ ಎಂದು ಕೂಡ ಹೇಳಿಕೊಂಡಿತ್ತು.
ಇದನ್ನೂ ಓದಿ : ರಾಜ್ಯದಲ್ಲಿ ಆನ್‌ಲೈನ್ ವಂಚನೆ ಜಾಲವಾದ ಪಿಂಕ್ ವಾಟ್ಸ್ಆ್ಯಪ್ ಬಗ್ಗೆ ಪೊಲೀಸ್ ಇಲಾಖೆ ಎಚ್ಚರಿಕೆ
ವಜಾಗೊಳಿಸಿದ ನಂತರ , ಬೈಜೂಸ್ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೈಜು ರವೀಂದ್ರನ್(Byju Ravindran) ಅವರು ಕಂಪನಿಯು ಯಾರನ್ನೂ ವಜಾಗೊಳಿಸುವುದಿಲ್ಲ ಎಂದು ಆಂತರಿಕ
ಇಮೇಲ್‌ನಲ್ಲಿ(Email) ಉಳಿದ ಉದ್ಯೋಗಿಗಳಿಗೆ ಭರವಸೆ ನೀಡಿದರು.
ಭಾರತದ ಸ್ಟಾರ್ಟಪ್ ಕಂಪೆನಿಗಳ ಪೈಕಿ ಅತಿಹೆಚ್ಚು ನಷ್ಟ ಅನುಭವಿಸಿದ ಕಂಪನಿ ಎಂದು ಬೈಜೂಸ್ಎನಿಸಿಕೊಂಡಿತ್ತು. ಕಂಪನಿಯ ಆದಾಯವೂ ಶೇ.3.3ರಷ್ಟು ಕುಸಿದಿದೆ. ಕಂಪನಿಯ ಫಲಿತಾಂಶ ಸುಮಾರು
18 ತಿಂಗಳು ವಿಳಂಬವಾಗಿ ಪ್ರಕಟಗೊಂಡಿತ್ತು. ಬೈಜೂಸ್ ಜಾಹೀರಾತು ಮತ್ತು ಮಾರ್ಕೆಟಿಂಗ್ ವಿಭಾಗಕ್ಕಾಗಿ 21ನೇ ಹಣಕಾಸು ವರ್ಷದಲ್ಲಿ 2,500 ಕೋಟಿ ರೂ.ಗಿಂತಲೂ ಹೆಚ್ಚು ಹಣ ವ್ಯಯಿಸಿತ್ತು. ಸುಮಾರು
330 ಕೋಟಿ ರೂ. ಹಣವನ್ನು ಫಿಫಾ ವಿಶ್ವಕಪ್ಗೆ (FIFA World cup) ನೀಡಿ ಅಧಿಕೃತ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಭಾರತ ಕ್ರಿಕೆಟ್ (Cricket) ತಂಡದ ಪ್ರಾಯೋಜಕತ್ವವನ್ನೂ ಕೂಡ 2019ರಲ್ಲಿ ವಹಿಸಿಕೊಂಡಿತ್ತು
ರಶ್ಮಿತಾ ಅನೀಶ್