2021 ರಲ್ಲಿ 19,400ಕ್ಕೂ ಹೆಚ್ಚು ರಸ್ತೆ ಅಪಘಾತ; ಶಾಕಿಂಗ್ ವರದಿ ನೀಡಿದ ಸಚಿವಾಲಯ

New Delhi : 2021 ರಲ್ಲಿ 19,478 ರಸ್ತೆ ಅಪಘಾತಗಳು ಅತಿಯಾದ ವೇಗ, ಓವರ್ (Centre Government Report) ಟೇಕ್ ಅಥವಾ ದಿಕ್ಕನ್ನು ತಪ್ಪಾಗಿ ನಿರ್ಣಯಿಸುವುದರಿಂದ ಚಾಲಕನ,

ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದ್ದು, 9,150 ಜನರು ಸಾವನ್ನಪ್ಪಿದ್ದಾರೆ ಮತ್ತು 19,077 ಜನರು ಗಾಯಗೊಂಡಿದ್ದಾರೆ,

ಎಂದು ಸಚಿವಾಲಯ ಬಿಡುಗಡೆ ಮಾಡಿದ ವರದಿ ಉಲ್ಲೇಖಿಸಿ ಪ್ರಕಟಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು (MORTH), ‘ಭಾರತದಲ್ಲಿ ರಸ್ತೆ ಅಪಘಾತಗಳು 2021’ ಎಂಬ ಶೀರ್ಷಿಕೆಯ ಅಡಿಯಲ್ಲಿ ವರದಿಯನ್ನು ಪ್ರಕಟಿಸಿದೆ.

ಒಟ್ಟು ರಾಷ್ಟ್ರೀಯ ಮಟ್ಟದ ಡೇಟಾದಲ್ಲಿ ಅಪಘಾತ ಅಥವಾ ಅಪಘಾತದ ಸ್ವರೂಪವು 2020ಕ್ಕೆ ಹೋಲಿಸಿದರೆ 2021 ರಲ್ಲಿ ಏರಿಕೆಯನ್ನು (Centre Government Report) ತೋರಿಸಿದೆ ಎಂದು ಹೇಳಿದೆ. ಇದೇ ರೀತಿಯ ಅಪಘಾತಗಳ ಸರಣಿ ಪಟ್ಟಿಗೆ

ಶುಕ್ರವಾರ ಮುಂಜಾನೆ ದೆಹಲಿ (Delhi) – ಡೆಹ್ರಾಡೂನ್ (Dehradun) ಹೆದ್ದಾರಿಯಲ್ಲಿ ತಮ್ಮ ಬೆಂಜ಼್ (Benz) ಕಾರಿನಲ್ಲಿ ವೇಗವಾಗಿ ಬಂದು ವಿಭಜಕಕ್ಕೆ ಡಿಕ್ಕಿ ಹೊಡೆದ ಸ್ಟಾರ್ ಕ್ರಿಕಟಿಗ ರಿಷಬ್ ಪಂತ್ ಪವಾಡ ಸದೃಶ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

ರಿಷಬ್ ಪಂತ್ ಕಾರು ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಕೂಡಲೇ ಬೆಂಕಿಗೆ ಆಹುತಿಯಾಗಿದ್ದು, ಸ್ಥಳೀಯರ ಸಹಾಯದಿಂದ ರಿಷಬ್ ಸಾವನ್ನು ಗೆದ್ದು ಬಂದಿದ್ದಾರೆ. 25 ವರ್ಷದ ರಿಷಬ್ ಪಂತ್

(Rishabh Pant) ಅವರಿಗೆ ತಲೆ, ಬೆನ್ನು ಮತ್ತು ಪಾದದ ಮೇಲೆ ಗಂಭೀರ ಗಾಯಗಳಾಗಿವೆ. ಆದರೆ, ರಿಷಬ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹರಿದ್ವಾರದ ಹಿರಿಯ ಪೊಲೀಸ್ ಅಧೀಕ್ಷಕ ಅಜಯ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : https://vijayatimes.com/football-superstar-pele/

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಈ ಘಟನೆ ಬಗ್ಗೆ ಟ್ವೀಟ್ ಮಾಡಿದ್ದು, ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಅವರ ಅಪಘಾತದಿಂದ ನಾವು ದುಃಖಿತರಾಗಿದ್ದೇವೆ.

ಅವರು ಶೀಘ್ರ ಮತ್ತು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಟ್ವೀಟ್ ಮಾಡಿ ಹೇಳಿದ್ದಾರೆ. 2021 ರಲ್ಲಿ ಒಟ್ಟು 4,12,432 ರಸ್ತೆ ಅಪಘಾತಗಳು ಸಂಭವಿಸಿವೆ,

ಇದರಲ್ಲಿ 1,53,972 ಜನರು ಸಾವನ್ನಪ್ಪಿದ್ದಾರೆ ಮತ್ತು 3,84,448 ಜನರು ಗಾಯಗೊಂಡಿದ್ದಾರೆ. ವರದಿಯ ಪ್ರಕಾರ, ಹಿಂಭಾಗದಿಂದ ಡಿಕ್ಕಿ ಹೊಡೆದ ಪ್ರಕರಣಗಳು (21.2 ಪ್ರತಿಶತ) ಒಟ್ಟು ಅಪಘಾತಗಳಲ್ಲಿ ಅತಿದೊಡ್ಡ

ಪಾಲನ್ನು ಹೊಂದಿದೆ ಮತ್ತು 2021ರ ಸಮಯದಲ್ಲಿ ಸಾವನ್ನಪ್ಪಿದ ಒಟ್ಟು ಸಂಖ್ಯೆ (ಶೇ. 18.6) ನಂತರ ‘ಮುಖಾಮುಖಿ ಡಿಕ್ಕಿ’ (ಶೇ. 18.5).ಕಿರಿದಾದ ಲೇನ್‌ ರಸ್ತೆಗಳು, ಚೂಪಾದ ವಕ್ರಾಕೃತಿಗಳು,

ದ್ವಿಮುಖ ಸಂಚಾರಕ್ಕಾಗಿ ಬೇರ್ಪಡಿಸದ ಲೇನ್‌ಗಳು ಮತ್ತು ಹೆಚ್ಚು ವಾಹನ ಸಂದಣಿ ಹೊಂದಿದ ಉದ್ದದ ರಸ್ತೆಗಳಲ್ಲಿ ಹೆಚ್ಚು ಮುಖಾಮುಖಿ ಅಪಘಾತಗಳು ಸಂಭವಿಸುತ್ತವೆ ಎಂದು ತಿಳಿದುಬಂದಿದೆ.

ವರದಿಯ ಪ್ರಕಾರ, ಸಾವಿಗೆ ಕಾರಣವಾದ ಇತರ ಪ್ರಮುಖ ರೀತಿಯ ಅಪಘಾತಗಳು ʼಹಿಟ್ ಅಂಡ್ ರನ್’ (ಶೇ. 16.8) ಮತ್ತು ʼಬದಿಯಿಂದ ಹಿಟ್’ (ಶೇ. 11.9) ಇದಿಷ್ಟು ಅಂಕಿ ಅಂಶ ಪ್ರಕಟವಾದ ವರದಿಯಲ್ಲಿ ಉಲ್ಲೇಖಗೊಂಡಿದೆ.
Exit mobile version