ಆಹಾರ ಪದ್ಧತಿಯಿಂದಲೇ ಪ್ರಸಿದ್ಧವಾದ ಭಾರತದ ಕೆಲವು ಪ್ರದೇಶಗಳು : ಬೆರಗು ಮೂಡಿಸುತ್ತವೆ ಇಲ್ಲಿನ ಜನಪ್ರಿಯ ತಿನಿಸುಗಳು!

Food

India : ಪ್ರತಿ ಪ್ರದೇಶದ ಮೂಲೆ ಮೂಲೆಯಲ್ಲೂ ಸಾಕಷ್ಟು ಅಚ್ಚರಿಗಳು ಕಾಣಲು ಸಿಗುತ್ತವೆ, ಹಾಗಾಗಿಯೇ ನಮ್ಮಲ್ಲಿ ವಿದೇಶದಿಂದ ಬರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚು.

ನಮ್ಮ ದೇಶದ ಪ್ರತಿಯೊಂದು (Check out variety of Indian Foods) ಪ್ರವಾಸಿ ತಾಣಗಳೂ ಕೂಡ ಒಂದೊಂದು ಐತಿಹಾಸಿಕ ಹಿನ್ನೆಲೆಗಳು ಹಾಗೂ ವಿಶೇಷತೆಗಳನ್ನು ಹೊಂದಿವೆ. ಅಂತಹ ಕೆಲವು ವಿಶೇಷತೆಗಳ ಪಟ್ಟಿ ಇಲ್ಲಿದೆ ನೋಡಿ.

Food

ಜಗತ್ತಿನಲ್ಲೇ ಅತೀ ಹೆಚ್ಚು ಸಂಖ್ಯೆಯ ಸಸ್ಯಾಹಾರಿಗಳು ಭಾರತದಲ್ಲಿ ಇದ್ದಾರೆ. ಎಲ್ಲಾ ಭಾರತೀಯರೂ ಹಿಂದುಗಳಲ್ಲ, ಎಲ್ಲಾ ಹಿಂದೂಗಳೂ ಸಸ್ಯಾಹಾರಿಗಳಲ್ಲ.

ಆದರೂ ಪಾರಂಪರಿಕ ಹಿಂದೂ ನಂಬಿಕೆಯ ಪ್ರಕಾರ ಸಸ್ಯಾಹಾರ(Vegetarian) ಭಾರತದ ಮುಖ್ಯವಾದ ಅಂಗವಾಗಿದೆ.

ಭಾರತದಲ್ಲಿ 20 ರಿಂದ 40 ಶೇಕಡಾ ಜನಗಳು ಸಸ್ಯಾಹಾರಿಗಳಾಗಿದ್ದಾರೆ(Check out variety of Indian Foods). ಹೀಗಾಗಿ ಸಸ್ಯಾಹಾರಿ ಪ್ರವಾಸಿಗರಿಗೆ ರುಚಿ ರುಚಿಯಾದ ದಾಲ್, ಸಬ್ಜಿ ಅಥವಾ ಪನೀರ್ ನಿಂದ ಮಾಡಿದ ಅಡುಗೆ ಎಲ್ಲಿ ಬೇಕಾದರೂ ಸಿಗುತ್ತದೆ.

ಭಾರತದಲ್ಲಿ 140ಕ್ಕೂ ಹೆಚ್ಚು ಬಗೆಯ ಸಾಂಪ್ರದಾಯಿಕ ಸಿಹಿ ತಿನಿಸುಗಳಿವೆ.

ಇದನ್ನೂ ಓದಿ : https://vijayatimes.com/bl-santhosh-slams-kamal-hassan-statement/

ಭಾರತದ ಪ್ರತಿಯೊಂದು ಪ್ರದೇಶವೂ ತನ್ನದೇ ಆದ ಸಿಹಿ ತಿನಿಸು ಮತ್ತು ಮಸಾಲೆಯುಕ್ತ ಅಡುಗೆಗಳನ್ನ ಹೊಂದಿದೆ. ಆಗ್ರಾದಲ್ಲಿ ಕುಂಬಳಕಾಯಿಯಿಂದ ತಯಾರಿಸಿದ ಪೇಠಾ,

ದೆಹಲಿಯಲ್ಲಿ ಚಳಿಗಾಲದಲ್ಲಿ ಮಾತ್ರ ಸಿಗುವ ಮಂಥಿಸಿದ ಹಾಲಿನ ನೊರೆಯಿಂದ ತಯಾರಿಸುವ ದೌಲತ್ ಕಿ ಛಾಟ್, ಹಾಲಿನ ಉಪ ಉತ್ಪನ್ನವಾದ ಸಕ್ಕರೆ ಪಾಕದಲ್ಲಿ ನೀಡಲಾಗುವ ಬಂಗಾಳದ ರಸಗುಲ್ಲಾ, ಉತ್ತರ ಭಾರತದ ಪ್ರಸಿದ್ಧ ಕ್ಯಾರೆಟ್ ಹಲ್ವಾ,

ಖೀರ್ ಅಕ್ಕಿ ಕಡುಬು, ಪಿಸ್ತಾ ಅಥವಾ ಕೇಸರಿ ಸುವಾಸನೆಯ ಕುಲ್ಫಿಯು ಭಾರತದ ಗೆಲಾಟೋ ಆಗಿದೆ,

ಕಡಲೆಹಿಟ್ಟಿನಿಂದ ತಯಾರಿಸಲಾದ ಹಾಗೂ ಹಿಂದೂ ದೇವರಿಗೆ ನೀಡುವ ಸಾಮಾನ್ಯ ಅರ್ಪಣೆಯಾದ ಲಡ್ಡೂ, ಹಿಟ್ಟನ್ನು ಎಣ್ಣೆಯಲ್ಲಿ ಕರೆದು ಸಿಹಿಪಾಕದಲ್ಲಿ ಹಾಕಿ ಮಾಡುವ ಜಲೇಬಿ.

Food

ಭಾರತದ ಸಿಹಿ ತಿನಿಸುಗಳು ಸಾಮಾನ್ಯವಾಗಿ ಬಹಳ ಸಿಹಿಯಾಗಿದ್ದು, ತುಪ್ಪದಲ್ಲಿ ಮಾಡಿರಲಾಗುತ್ತದೆ ಮತ್ತು ಏಲಕ್ಕಿ, ದಾಲ್ಚಿನಿ, ಲವಂಗ, ಕೇಸರಿ, ತೆಂಗಿನಕಾಯಿ, ಗುಲಾಬಿ ಸುವಾಸಿತ ದ್ರವ್ಯ ಮತ್ತು ಬೀಜಗಳ ಸುವಾಸನೆಯಿಂದ ಕೂಡಿರುತ್ತದೆ.

ಭಾರತದ ಸಿಹಿ ತಿನಿಸುಗಳ ವಿಶೇಷತೆ ಎಂದರೆ ಯಾವ ವಸ್ತು ಹಾಕಿ ತಿನಿಸುಗಳನ್ನು ಮಾಡಲಾಗಿದೆ ಎಂದು ಗಮನಿಸಬಹುದಾಗಿದೆ, ಇದು ವಿದೇಶಿ ತಿನಿಸುಗಳಲ್ಲಿ ಸಾಧ್ಯವಿಲ್ಲ. ಹೀಗಾಗಿ ಇವು ಆರೋಗ್ಯಕರವಾಗಿರುತ್ತವೆ.

https://youtu.be/idkH42k2EQ4

ದೆಹಲಿಯ ಖಾರಿ ಬಾವೋಲಿ ಜಗತ್ತಿನ ಅತ್ಯಂತ ದೊಡ್ಡ ಸಂಬಾರ ಪದಾರ್ಥಗಳ ಮಾರುಕಟ್ಟೆಯಾಗಿದೆ.

ಹಳೆ ದೆಹಲಿಯ ಬೀದಿಗಳಲ್ಲಿರುವ ಖಾರಿ ಬಾವೋಲಿಯ ಸಮೀಪ ಹೋಗುತ್ತಿದ್ದಂತೆ ಅಲ್ಲಿನ ಮಸಾಲೆ ಪದಾರ್ಥಗಳ ಸುವಾಸನೆಯಿಂದ ನೀವು ತನ್ಮಯರಾಗುತ್ತೀರಿ.

ಇಲ್ಲಿನ ಸೈಕಲ್ ಗಳು ಮತ್ತು ಎತ್ತಿನ ಬಂಡಿಗಳೂ ಕೂಡ ಅದೇ ಸುವಾಸನೆಯಿಂದ ಕೂಡಿರುತ್ತವೆ.

ಇದನ್ನೂ ಓದಿ : https://vijayatimes.com/robbers-cut-women-leg-to-steal/

ಈ ಮಾರುಕಟ್ಟೆಯು ನಾಲ್ಕು ಶತಮಾನ ಹಳೆಯದಾಗಿದ್ದು, ಇಲ್ಲಿ ಇಡಿ ಒಣ ಹಣ್ಣುಗಳನ್ನು, ಬೀಜಗಳನ್ನು ಮತ್ತು ಸಿಹಿ ತಿನಿಸುಗಳ ತಯಾರಿಕೆಗೆ ಬೇಕಾದ ಸಾಮಗ್ರಿಗಳನ್ನು ಜೊತೆಗೆ ಮಸಾಲಾ ಪದಾರ್ಥಗಳನ್ನೂ ಮಾರಾಟ ಮಾಡಲಾಗುತ್ತದೆ.

Exit mobile version