ಚಂದ್ರಯಾನ-3 ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ ; ನಮ್ಮ ವಿಜ್ಞಾನಿಗಳಿಗೆ ಅಥವಾ ‘ಲಾರ್ಡ್’ ತಿರುಪತಿಗೆ. – ನಟ ಚೇತನ್

ಚಂದ್ರಯಾನ-3 (Chetan about Chandrayaan-3) ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ ಈ ಯಶಸ್ಸಿನ ಕೀರ್ತಿ/ಗುರುತು

ಯಾರಿಗೆ ಸಲ್ಲುತ್ತದೆ: ನಮ್ಮ ವಿಜ್ಞಾನಿಗಳಿಗೆ ಅಥವಾ ‘ಲಾರ್ಡ್’ ತಿರುಪತಿಗೆ..? ಎಂದು ಸ್ಯಾಂಡಲ್ವುಡ್ ನಟ ಚೇತನ್ (Chetan) ಪ್ರಶ್ನಿಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ

ಈ ಯಶಸ್ಸಿನ ಕೀರ್ತಿ/ಗುರುತು ಯಾರಿಗೆ ಸಲ್ಲುತ್ತದೆ: ನಮ್ಮ ವಿಜ್ಞಾನಿಗಳಿಗೆ ಅಥವಾ ‘ಲಾರ್ಡ್’ (Lord) ತಿರುಪತಿಗೆ..?ನಿಮ್ಮಲ್ಲಿ ವೈಜ್ಞಾನಿಕವಾದ/ಪರಿವರ್ತನಶಾಹಿ ಉತ್ತಮ ಆಲೋಚನೆಗಳು ಇಲ್ಲದಿದ್ದರೆ,

ನೀವು ಓದಿಕೊಳ್ಳಿ. ನೀವು ಆಲೋಚನೆಗಳನ್ನು ಹೊಂದಿದ್ದರೆ ಆದರೆ ಅವುಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದಿದ್ದರೆ, ನೀವು ಅದನ್ನು ಬರೆಯಿರಿ. ಕಾರ್ಯಗತಗೊಳಿಸಲು ನಿಮಗೆ ಕಲ್ಪನೆ ಮತ್ತು ಸ್ಪಷ್ಟತೆ ಇದ್ದರೆ,

ಅದನ್ನು ನೀವು ನಿರ್ಮಿಸಿ. ಜೈ ಭೀಮ್ (Jai Bhim) ಎಂದಿದ್ದಾರೆ.

ಇದರೊಂದಿಗೆ “ವಾಸ್ತವ” ಎಂಬ ಹೆಸರಿನ ಪೋಸ್ಟ್ನಲ್ಲಿ ಎರಡು ಪೋಟೋಗಳನ್ನು ಹಂಚಿಕೊಂಡಿದ್ದು, ಒಂದು ಪೋಟೋದಲ್ಲಿ ಚಂದ್ರಯಾನ-3 ರಾಕೆಟ್ (Rocket) ಉಡಾವಣೆಯಾಗುತ್ತಿದ್ದರೆ,

ಇನ್ನೊಂದು ಪೋಟೋದಲ್ಲಿ ವ್ಯಕ್ತಿಯೊಬ್ಬ ಮ್ಯಾನ್ ಹೊಲ್ ನಲ್ಲಿ (Chetan about Chandrayaan-3) ಇಳಿದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇನ್ನು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ನಿನ್ನೆ ಸಂಜೆ 6 ಗಂಟೆ 4 ನಿಮಿಷಕ್ಕೆ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡ್ (Land) ಆಗಿದೆ. ಅಮೇರಿಕಾ, ರಷ್ಯಾ, ಚೀನಾ

ನಂತರ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಡಿಂಗ್ ಮಾಡಿದ 4ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇನ್ನೊಂದೆಡೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಡಿಂಗ್

(Soft Landing) ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಕೂಡಾ ಭಾರತ ಪಾತ್ರವಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಈ ಸಾಧನೆಗೆ ಜಗತ್ತಿನ ಅನೇಕ ದೇಶಗಳು

ಅಭಿನಂದನೆ ಸಲ್ಲಿಸಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಲಾಗುತ್ತಿದೆ.


ಇನ್ನು ಭಾರತ ಚಂದ್ರಯಾನ-1 ಅನ್ನು 2008ರಲ್ಲಿ ಚಂದ್ರಯಾನ-2 ಅನ್ನು 2019ರಲ್ಲಿ ಮತ್ತು ಚಂದ್ರಯಾನ-3 ಅನ್ನು 20223ರಲ್ಲಿ ಯಶಸ್ವಿಯಾಗಿ ಮಾಡಿದೆ. ಚಂದ್ರಯಾನ-3 ಯೋಜನೆಗೆ ಒಟ್ಟು

620 ಕೋಟಿ ವೆಚ್ಚವಾಗಿದೆ.

Exit mobile version