Kalburgi (ಜೂ.30): ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು (chetan ahimsa reservation statement) ಮತ್ತು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ(Mahatma Gandhiji)
ಅವರು ಮೀಸಲಾತಿ ವಿರೋಧಿಗಳಾಗಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಕೊಡುಗೆ ಮೀಸಲಾತಿ ಅನುಷ್ಠಾನದ ವಿಚಾರದಲ್ಲಿ ಶೂನ್ಯ ಎಂದು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ(Chetan Ahimsa)
ಹೇಳಿದ್ದಾರೆ. ಕಲಬುರಗಿಯಲ್ಲಿ (Kalburgi) ಸುದ್ದಿಗಾರರೊಂದಿಗೆ ಮಾತನಾಡಿ ಪೆರಿಯಾರ್, ಜ್ಯೋತಿಬಾ ಫುಲೆ, ಡಾ. ಅಂಬೇಡ್ಕರ್, , ಕೃಷ್ಣರಾಜ್ ಒಡೆಯರ್ ಅಂತಹವರು ಮಾತ್ರ ಮೀಸಲಾತಿಗೆ ನ್ಯಾಯ ಒದಗಿಸಿದ್ದಾರೆ.

ಒಂದು ವೇಳೆ ಸಿಎಂ ಸಿದ್ದರಾಮಯ್ಯ(Siddaramaiah) ನುಡಿದಂತೆ ನಡೆಯುವವರಾಗಿದ್ದರೆ ಮೀಸಲಾತಿಯನ್ನು ಖಾಸಗಿ ವಲಯದಲ್ಲಿ ಜಾರಿಗೆ ತರಲಿ, ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆ ಆಧಾರದ ಮೇಲೆ ಹೆಚ್ಚಳ
ಮಾಡಲಿ, ಎಸ್ಸಿ(SC), ಎಸ್ಟಿ(ST), ಓಬಿಸಿಗೂ(OBC) ಒಳಮೀಸಲಾತಿ ಕೊಡಲಿ ಮತ್ತು ಸರೋಜಿನಿ ಮಹಿಷಿ ವರದಿ ಜಾರಿಗೆ ತರಲಿ. ಈಚೆಗೆ ಆರ್ಥಿಕವಾಗಿ ಹಲವು ಸಂಗತಿಗಳನ್ನು ಪರಿಗಮಿಸುವ ಮೂಲಕ ಬಿಜೆಪಿ
ಮೀಸಲಾತಿ ಹಂಚಿಕೆಗೆ ಮುಂದಾಗಿದೆ. ಆ ಪಕ್ಷದ ಮೀಸಲಾತಿ ವಿರೋಧಿ ಮನೋಸ್ಥಿತಿಯನ್ನು ಇದೆಲ್ಲವೂ ಎತ್ತಿ ತೋರಿಸುತ್ತದೆ (chetan ahimsa reservation statement) ಎಂದು ಆಗ್ರಹಿಸಿದರು.
ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಮುಗಿಬಿದ್ದ ಜನ : ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ ಸೈಬರ್ ಸೆಂಟರ್‌ಗಳು ಎಂಬ ಆರೋಪ!
ಸಮಾಜದಲ್ಲಿ ಪ್ರಗತಿಯಾಗಬೇಕಾದರೆ ಶಿಕ್ಷಣ ಮತ್ತು ಆರೋಗ್ಯ ರಾಷ್ಟ್ರೀಕರಣಗೊಳ್ಳಬೇಕು.ಮತ್ತೊಮ್ಮೆ ಭೂಸುಧಾರಣೆ ಕಾಯ್ದೆ ಜಾರಿಗೆ ತನ್ನಿರೆಂದು ಆಗ್ರಹಿಸಿದರು. ಚೇತನ್ ರಾಜ್ಯ ಸರ್ಕಾರ ಅಕ್ಕಿ ಬದಲು ಹಣ ಕೊಡುವ
ವಿಚಾರಕ್ಕೆ ಅಸಮಾಧಾನ ಹೊರಹಾಕಿದರು. ಸಿದ್ದರಾಮಯ್ಯ ಕಾಂಗ್ರೇಸ್(Congress) ಸರ್ಕಾರ ನುಡಿದಂತೆ ನಡೆಯಬೇಕು. ಅಕ್ಕಿ ಜೊತೆಗೆ ಹಣ ಮತ್ತು ರಾಗಿ, ಜೋಳವನ್ನು ಸಹ ಸರ್ಕಾರ ಕೊಡಬೇಕು.
ಸಿದ್ರಾಮಯ್ಯ ಸರ್ಕಾರ ಅಕ್ಕಿ ವಿಚಾರದಲ್ಲಿ ಬೇರೆ ರಾಜ್ಯಕ್ಕೆ ಮೊರೆ ಹೋಗ್ತಿದೆ.ಆದರೆ ನಮ್ಮ ರಾಜ್ಯದ ರೈತರನ್ನು ಕೂಡ ಬೆಳೆಸುವ ಕೆಲಸವಾಗಬೇಕಿದೆ ಎಂದರು.

ಬಡವರಿಗೆ ದುಡ್ಡು ಬೇಡ ಎಂದು ಸಚಿವ ಕೆ.ಜೆ ಜಾರ್ಜ್ (K.J George) ಹೇಳುತ್ತಾರೆ ಆದರೆ ದುಡ್ಡು, ರಾಗಿ, ಜೋಳ ಎಲ್ಲವನ್ನೂ ಸರ್ಕಾರ ಕೊಡಬೇಕು. ಸಚಿವ ಕೆ.ಜೆ ಜಾರ್ಜ್ ಒಬ್ಬ ಶ್ರೀಮಂತ ವ್ಯಕ್ತಿ ಈ
ರೀತಿಯೆಲ್ಲಾ ಮಾತಾಡೋದು ನಿಜವಾಗಲೂ ಅವರಿಗೆ ಶೋಭೆ ತರೋದಿಲ್ಲ ಎಂದರು.
ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಸರ್ಕಾರದ ತೀರ್ಮಾನ ನಿಜವಾಗಲೂ ಸರಿಯಿದೆ. ಯಡಿಯೂರಪ್ಪ ಸರ್ಕಾರದ ಯಾರು ಬೇಕಾದರೂ ಭೂಮಿ ಖರೀದಿಸಬಹುದು ಎನ್ನುವ ಕಾಯ್ದೆಯನ್ನೂ ರದ್ದುಪಡಿಸಬೇಕು.
ಭೂ ಸುಧಾರಣಾ ಕಾಯ್ದೆ ಸೇರಿದಂತೆ ಇನ್ನೂ ಸಹ ಹಲವಾರು ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಚೇತನ್ ಆಗ್ರಹಿಸಿದರು.
ರಶ್ಮಿತಾ ಅನೀಶ್