ಅತ್ಯಾಚಾರಕ್ಕೆ ಬಲಿಯಾದ ಬಾಲಕಿಯ ಹೆಸರಿನಲ್ಲಿ ಶಾಲೆಗಳಲ್ಲಿ ಲಿಂಗ ಸಮಾನತೆ ಬಗ್ಗೆ ಕ್ಲಾಸ್ ನೀಡಬೇಕು : ನಟ ಚೇತನ್

Kalburgi : ಕಲಬುರುಗಿ(Kalburgi) ಜಿಲ್ಲೆಯ ಆಳಂದ್‍ನಲ್ಲಿ 14 ವರ್ಷದ ಚಿಕ್ಕ ಬಾಲಕಿಯ ಮೇಲೆ ಕ್ರೂರ ತನದಿಂದ ಅತ್ಯಾಚಾರ(Chethan about Girl Death) ಎಸಗಿ, ಕೊಲೆ ಮಾಡಿರುವ ಪ್ರಕರಣವಾಗಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು.

ಹಾಗೆ ಈ ವಿಕೃತ ಘಟನೆಯನ್ನು ನಮ್ಮ ಪಕ್ಷವು ಉಗ್ರವಾಗಿ ಖಂಡಿಸುತ್ತದೆಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಎಲ್.ಆರ್.ಬೋಸ್ಲೆ ಅವರು ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ಇದರ ಬೆನ್ನಲ್ಲೇ ನಟ ಚೇತನ್‍ ಅಹಿಂಸಾ(Chethan about Girl Death) ರವರು ನಗರದ ಸುದ್ದಿಗೋಷ್ಟಿಯಲ್ಲಿ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕಣಕ್ಕೆ ಸಂಬಂಧಿಸಿದಂತೆ,

ಈ ಬಾಲಕಿಯ ಹೆಸರಿನಲ್ಲಿ ಶಾಲೆಗಳಲ್ಲಿ ಲಿಂಗ ಸಮಾನತೆ ಬಗ್ಗೆ ಕ್ಲಾಸ್ ನೀಡಬೇಕೆಂದು ಹೇಳಿದರು.

ಕಲಬುರುಗಿಯಲ್ಲಿ ಅಮಾನವೀಯ ಕೃತ್ಯ ನಡೆದಿರುವುದು ನಮ್ಮೆಲ್ಲರಿಗೂ ಬಹಳಷ್ಟು ನೋವಾಗಿದೆ.

ಇದನ್ನೂ ಓದಿ : https://vijayatimes.com/gandadagudi-box-office-collection/

ಈ ಮಗು ಒಂದು ಕುಟುಂಬದ ಮಗಳಲ್ಲ, ನಮ್ಮ ಕರ್ನಾಟಕದ ಹೆಣ್ಣು ಮಗಳು. ಇಂತಹ ಕೃತ್ಯ ನಡೆದಾಗ ಜಾತಿ ಲೇಪನ ಕಟ್ಟುವ ಕೆಲಸವಾಗುತ್ತೆ.

ಆದರೆ ಈ ವಿಚಾರ ಮಾತ್ರ ಜಾತಿಗೆ ಸೀಮಿತವಾಗದೆ, ನಾಡಿನ ಎಲ್ಲಾ ಜನತೆಯು ಬಾಲಕಿ ಪರವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ.

ಬಾಲಕಿ ಸಾವಿಗೆ ನ್ಯಾಯ ಸಿಗಬೇಕು, ಈ ಪ್ರಕರಣವಾಗಿ ಒಬ್ಬ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಅವನಿಗೆ ಸರಿಯಾದ ರೀತಿಯಲ್ಲಿ ತಕ್ಕ ಶಿಕ್ಷೆ ವಿಧಿಸಬೇಕು, ಜೊತೆಗೆ ಸರ್ಕಾರವು ಆ ಬಾಲಕಿಯ ಕಟುಂಬಕ್ಕೆ ಪರಿಹಾರವನ್ನು ನೀಡಬೇಕು.

ಈಗಾಗಲೇ ನಾನು ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಿ ಬಂದಿದ್ದೇನೆ.

https://fb.watch/gAAr14sWiy/ ಅಭಿವೃದ್ಧಿ ಹೆಸರಿನಲ್ಲಿ ಮರ ಕಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ!

ಕೇರಳದಲ್ಲಿ ಲಿಂಗ ಸಮಾನತೆಯ ಬಗ್ಗೆ ಯಾವ ರೀತಿ ತರಗತಿಯನ್ನು ನೀಡುತ್ತಾರೆಯೋ, ಅದೇ ಮಾದರಿಯಲ್ಲಿ ನಮ್ಮ ಊರಿನ ಶಾಲೆಗಳಲ್ಲಿಯು ಲಿಂಗ ಸಮಾನತೆಯ ಬಗ್ಗೆ ಕ್ಲಾಸ್ ನೀಡಬೇಕೆಂದು ನಗರದ ಸುದ್ದಿಗೋಷ್ಟಿಯಲ್ಲಿ ನಟ ಚೇತನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Exit mobile version