ಮಕ್ಕಳ ಸ್ಮಗ್ಲಿಂಗ್ ನಲ್ಲಿ ಕರ್ನಾಟಕ ನಂಬರ್ 1 ಕೋವಿಡ್ ನಂತರ ರಾಜ್ಯದಲ್ಲಿ ಮಕ್ಕಳ ಕಳ್ಳಸಾಗಣೆ 18 ಪಟ್ಟು ಏರಿಕೆ

ದೇಶದಲ್ಲಿ ಟಾಪ್ 5 ರಾಜ್ಯಗಳಲ್ಲಿ ಮಕ್ಕಳ ಸ್ಮಗ್ಲಿಂಗ್ (Smuggling) ನಡೆಯುತ್ತಿರುವುದರಲ್ಲಿ ಕರ್ನಾಟಕಕ್ಕೆ (child trafficking kar no1) ಮೊದಲ ಸ್ಥಾನ ಸಿಕ್ಕಿದೆ. ರಾಜ್ಯದಲ್ಲಿ ಕೋರೋನಾ ನಂತರ ಮಕ್ಕಳ

ಕಳ್ಳಸಾಗಣೆ 18 ಪಟ್ಟು ಏರಿಕೆಯಾಗಿದೆ. ಮಕ್ಕಳನ್ನು ಅಪಹರಣ ಮಾಡುವ ದಂಧೆಕೋರರು ಕಾನೂನು ಬಾಹಿರ ಚಟುವಟಿಕೆಯಲ್ಲಿ ಅವರನ್ನು ಬಳಸಿಕೊಳ್ತಾರೆ. ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ನೂಕುತ್ತಾರೆ.

ಇಂಥಾ ದಂಧೆಗೆ ಕಡಿವಾಣ ಹಾಕಲು ಸರ್ಕಾರ, ಪೊಲೀಸ್ (child trafficking kar no1) ಇಲಾಖೆ ಏನು ಮಾಡ್ತಿದೆ.

ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ನಾಪತ್ತೆ ಕೇಸ್‌ಗಳು (Case) ಹೆಚ್ಚಾಗ್ತಿವೆ ಅನ್ನೋ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತಿತ್ತು. ಈಗ ನಮ್ಮ ರಾಜ್ಯದಲ್ಲಿ ಮಕ್ಕಳ ನಾಪತ್ತೆ ಕೇಸ್‌ಗಳೂ ಹೆಚ್ಚಾಗ್ತಿದ್ದು,

ಆದರೆ ಬದಲಾಗಿ ಈ ಮಕ್ಕಳನ್ನ ಕಿಡ್ನಾಪ್ (Kidnap) ಮಾಡಿ ಸ್ಮಗ್ಲಿಂಗ್ ಮಾಡಲಾಗ್ತಿದ್ದು, ಈ ಮಕ್ಕಳು ತಾವಾಗಿಯೇ ನಾಪತ್ತೆ ಆಗ್ತಿಲ್ಲ. ರಾಜ್ಯದಲ್ಲಿ ಮಕ್ಕಳ ಕಳ್ಳಸಾಗಣೆ ವಿಪರೀತ ಹೆಚ್ಚಾಗಿದ್ದು,

ಇಡೀ ದೇಶದಲ್ಲೇ ಕರ್ನಾಟಕ ನಂಬರ್ 1 ಸ್ಥಾನಕ್ಕೆ ಬರುವಂತಾಗಿದೆ.

ವರ್ಷದಿಂದ ವರ್ಷಕ್ಕೆ ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಾಗುತ್ತಲೆ ಇದ್ದು, ದೇಶಾದ್ಯಂತ ಎಲ್ಲ ರಾಜ್ಯಗಳಲ್ಲೂ ಏರಿಕೆ ಆಗುತ್ತಿರುವ ಮಕ್ಕಳ ಕಳ್ಳಸಾಗಣೆ ಪ್ರಕರಣಗಳನ್ನು ಗಮನಿಸಿದರೆ, ಶೇಕಡಾವಾರು

ಪ್ರಮಾಣ ಕರ್ನಾಟಕದಲ್ಲಿ ಹೆಚ್ಚಾಗಿದೆ. ಆದರೆ ಸಂಖ್ಯೆಗಳ ವಿಚಾರಕ್ಕೆ ಬಂದರೆ ಉತ್ತರ ಪ್ರದೇಶದಲ್ಲಿ ಜಾಸ್ತಿಯಾಗಿದೆ. 2016 ರಿಂದ 2022 ರವರೆಗಿನ ಅಂಕಿ ಅಂಶಗಳು ಈ ರೀತಿ ಇದೆ.


ದಿಲ್ಲಿ – 106
ಕರ್ನಾಟಕ – 110
ಆಂಧ್ರ ಪ್ರದೇಶ – 210
ಬಿಹಾರ – 703
ಉತ್ತರ ಪ್ರದೇಶ – 1,214

2016 ರಿಂದ 2019ರ ಅವಧಿಯನ್ನು ಕೋವಿಡ್ (Covid) ಪೂರ್ವ ಎಂದು ಪರಿಗಣಿಸಲಾಗಿದೆ. ಇನ್ನು ಈ ವರದಿಯಲ್ಲಿ 2019 ರಿಂದ 2022ರ ಅವಧಿಯನ್ನು ಕೋವಿಡ್ ಉತ್ತರ ಎಂದು ಪರಿಗಣಿಸಲಾಗಿದ್ದು,

ಕೈಲಾಶ್ ಸತ್ಯರ್ಥಿ (Kailash Satyarthi) ಮಕ್ಕಳ ಸಂಸ್ಥೆ ಹಾಗೂ ಗೇಮ್ಸ್‌ (Games) 24×7 ಸಂಸ್ಥೆಗಳು ಜಂಟಿಯಾಗಿ ಈ ವರದಿಯನ್ನ ಸಿದ್ದಪಡಿಸಿವೆ. ಈ ವರದಿಯ ಪ್ರಕಾರ ಶೇಕಡಾವಾರು ಪ್ರಮಾಣದಲ್ಲಿ

ಕರ್ನಾಟಕ ಮೊದಲ ಸ್ಥಾನದಲ್ಲಿ ಇದೆ. ಯಾಕೆಂದರೆ ನಮ್ಮ ರಾಜ್ಯದಲ್ಲಿ ಕೋವಿಡ್ ಮುಂಚೆ ಮಕ್ಕಳ ಕಳ್ಳಸಾಗಣೆ ಪ್ರಕರಣ ಕೇವಲ 6 ಇತ್ತು. ಆದರೆ ಕೋವಿಡ್ ನಂತರ ಈ ಸಂಖ್ಯೆ 110ಕ್ಕೆ ಏರಿಕೆಯಾಗಿದೆ. ಇನ್ನು

ಇದನ್ನು ಓದಿ: ಮಕ್ಕಳ ಸ್ಮಗ್ಲಿಂಗ್ ನಲ್ಲಿ ಕರ್ನಾಟಕ ನಂಬರ್ 1 ಕೋವಿಡ್ ನಂತರ ರಾಜ್ಯದಲ್ಲಿ ಮಕ್ಕಳ ಕಳ್ಳಸಾಗಣೆ 18 ಪಟ್ಟು ಏರಿಕೆ

ಈ ಅಂಕಿಗಳ ವಿಚಾರದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ 4ನೇ ಸ್ಥಾನದಲ್ಲಿ ಇದೆ ಆದರೂ ಶೇಕಡಾವಾರು ಏರಿಕೆಯಲ್ಲಿ ಮೊದಲ ಸ್ಥಾನ ಗಳಿಸಿದೆ ಅನ್ನೋದು ನಿಜಕ್ಕೂ ಆತಂಕಕಾರಿ ವಿಷಯ.

ಏನಾಗ್ತಾರೆ ಸ್ಮಗ್ಲಿಂಗ್ ಬಲೆಗೆ ಬೀಳುವ ಮಕ್ಕಳು
ಪ್ರಾರಂಭದಲ್ಲಿ ಪೋಷಕರಿಗೆ ಮಕ್ಕಳು ತಾವಾಗಿಯೇ ಎಲ್ಲಿಯಾದರೂ ಕಾಣೆ ಆಗಿರಬಹುದಾ ಅನ್ನೋ ಆತಂಕ ಆಗುತ್ತದೆ. ಮಕ್ಕಳು ಇದ್ದಕ್ಕಿದ್ದಂತೆಯೇ ಕಾಣದೆ ನಾಪತ್ತೆಯಾಗುತ್ತಾರೆ. ಆದ್ರೆ ಪೊಲೀಸರ (Police)

ತನಿಖೆ ವೇಳೆ ಮಕ್ಕಳ ಸುಳಿವು ಸಿಗೋದಿಲ್ಲ. ಈ ವೇಳೆ ಮಕ್ಕಳು ಕಳ್ಳಸಾಗಣೆದಾರರ ಜಾಲಕ್ಕೆ ಸಿಲುಕಿದರೆ ಅವರಿಗೆ ನಿಜಕ್ಕೂ ನರಕ ದರ್ಶನವೇ ಆಗಿಬಿಡುತ್ತೆ. ಕಳ್ಳಸಾಗಣೆದಾರರು ಮಕ್ಕಳನ್ನು ಅಪಹರಿಸಿ ಅವರನ್ನು

ಮಾರಾಟ ಮಾರಾಟ ಮಾಡುತ್ತಾರೆ. ಅಂತಹ ಮಕ್ಕಳನ್ನು ಮನೆಗಳಲ್ಲಿ ಸಂಬಳ ಕೊಡದೆಕೆಲಸ ಮಾಡಿಸಲಾಗುತ್ತದೆ. ಇವರಲ್ಲಿ ಹೆಣ್ಣು ಮಕ್ಕಳಿದ್ದರೆ ಅವರ ಮೇಲೆ ಲೈಂಗಿಕ ದೌರ್ಜನ್ಯ ಕೂಡಾ ನಡೆಯೋ ಸಾಧ್ಯತೆ

ಇದ್ದು, ಇದನ್ನ ದೇಶೀಯ ಗುಲಾಮಗಿರಿ ಎನ್ನಲಾಗುತ್ತೆ.

ಇನ್ನು ಈ ಮಕ್ಕಳನ್ನು ಸ್ಮಗ್ಲಿಂಗ್ ಮಾಡಿ ಹೋಟೆಲ್‌ಗಳು (Hotel) ಹಾಗೂ ಕಾರ್ಖಾನೆಗಳಲ್ಲಿ ದುಡಿಸಲಾಗುತ್ತಿದ್ದು, ಮಾನಸಿಕ ಹಿಂಸೆ ನೀಡಲಾಗುತ್ತದೆ. ಇದನ್ನ ಬಾಲಕಾರ್ಮಿಕ ಪದ್ದತಿ ಎನ್ನಲಾಗುತ್ತೆ. ಒಂದು ವೇಳೆ ಮಕ್ಕಳ

ಪೋಷಕರು ಸಾಲ ತೆಗೆದುಕೊಂಡಿದ್ದರೆ, ಅಥವಾ ಮಕ್ಕಳು ಕೆಲಸ ಮಾಡಲು ಒಪ್ಪದಿದ್ದಾಗ ಅವರನ್ನು ಬಂಧಿಸಿ, ಸ್ವಲ್ಪ ಸಮಯ ಕಾಲಿಗೆ ಚೈನ್ (Chain) ಕಟ್ಟಿ ದುಡಿಸಲಾಗುತ್ತದೆ. ಇಂಥವರನ್ನ ಬಂಧಿತ ಕಾರ್ಮಿಕರು

ಎನ್ನುತ್ತಾರೆ. ಬಂಧಿತ ಮಕ್ಕಳ ಪೈಕಿ ಅಪ್ರಾಪ್ತ ಯುವತಿಯರು ಇದ್ದರೆ ಅವರನ್ನ ನಗರ ಪ್ರದೇಶಗಳಿಗೆ ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಗೆ ದೂಡಾಲಾಗುತ್ತದೆ. ಇಂತಹ ಯುವತಿಯರು ಏಡ್ಸ್‌ನಂಥಾ

(Aids) ಮಾರಕ ಕಾಯಿಲೆಗಳಿಗೂ ತುತ್ತಾಗಬಹುದು.

ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಅತಿ ಭೀಕರವಾದದ್ದು, ಅಂಗಾಂಗಗಳ ಕಳ್ಳಸಾಗಣೆ ಅಂದರೆ ಈ ತರಹ ಪ್ರಕರಣಗಳಲ್ಲಿ ಮಕ್ಕಳ ಕಣ್ಣು, ಮೂತ್ರಪಿಂಡ, ಯಕೃತ್ ಸೇರಿದಂತೆ ಹಲವು ಅಂಗಾಂಗಗಳನ್ನು

ದೇಹದಿಂದ ಹೊರತೆಗೆದು ಮಾರಾಟ ಮಾಡಲಾಗುತ್ತದೆ. ಕಳ್ಳಸಾಗಣೆ ಮಾಡುವವರು ಅವರ ಕೈ ಕಾಲುಗಳಿಗೆ ಹಾನಿ ಮಾಡಿ ಅವರನ್ನು ಭಿಕ್ಷಾಟನೆ, ಕಳ್ಳತನದಂಥಾ ಅಕ್ರಮ ಚಟುವಟಿಕೆಗಳಿಗೂ ಬಳಸಬಹುದು.

ಬೇರೆಯವರ ಚಿಂತೆ ನಮಗೇಕೆ ಅನ್ನೋ ಮನೋಭಾವ ಈಗಿನ ಜನರಲ್ಲಿ ಸಾಮಾನ್ಯವಾಗಿ ಇರುತ್ತೆ. ಕಣ್ಮುಂದೆ ಏನೇ ಅನ್ಯಾಯವನ್ನ ಕಂಡರೂ ಕಾಣದಂತೆ ಸುಮ್ಮನಿರ್ತಾರೆ. ಕೆಲವೊಂದು ಸಲ ಅಪರಾಧಗಳ

ವಿರುದ್ಧ ದನಿ ಎತ್ತಿದ್ರೆ ನಮಗೇ ತೊಂದರೆ ಅನ್ನೋ ಮನಸ್ಥಿತಿಯೂ ಇದ್ದು, ಅಷ್ಟಲ್ಲದೇ ಕೆಲಸ ಕಾರ್ಯ ಬಿಟ್ಟು ಕೋರ್ಟ್ (Court), ಪೊಲೀಸ್ ಸ್ಟೇಷನ್‌ (Police station) ಅಂತ ಅಲೆಯಬೇಕಾಗುತ್ತೆ ಅನ್ನೋ

ಕಾರಣದಿಂದ ಈ ರೀತಿ ಯೋಚನೆ ಮಾಡುವುದು ಸಹಜ. ಇದು ದುಡಿಮೆ ನಂಬಿ ಬದುಕುವ ಸಾಮಾನ್ಯ ಜನರ ಅನಿವಾರ್ಯತೆ. ಆದರೆ ಮಕ್ಕಳ ವಿಚಾರ ಬಂದಾಗ ಸ್ವಾರ್ಥವನ್ನ ಪಕ್ಕಕ್ಕಿಡಬೇಕಾಗುತ್ತದೆ.

ಜನರ ಅನಿವಾರ್ಯ ಸನ್ನಿವೇಶವನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಕೂಡಾ ಜನರಿಗೆ ಹೆಲ್ಪ್‌ಲೈನ್ (Helpline) ನಂಬರ್‌ಗಳನ್ನ ಅನುಕೂಲ ಆಗುವ ರೀತಿಯಲ್ಲಿ ಸ್ಥಾಪಿಸಿದೆ.

ದೇಶದ ಮಟ್ಟಿಗೆ ಮಕ್ಕಳ ಕಳ್ಳಸಾಗಣೆ ಅನ್ನೋದು ಹೊಸದೇನಲ್ಲ. ಈ ಮೊದಲು ಸಹ ಕೂಡಾ ಮಕ್ಕಳು ನಾಪತ್ತೆಯಾಗುತ್ತಿದ್ದರು. ಇಂದಿಗೂ ನಾಪತ್ತೆಯಾಗುತ್ತಿದ್ಧಾರೆ. ಆದರೆ ಕೇಸ್ (Case) ದಾಖಲಾಗುವ ಪ್ರಮಾಣ

ಬಹಳ ಕಡಿಮೆ ಇತ್ತು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರ, ರೈಲ್ವೆ ರಕ್ಷಣಾ ಪಡೆ, ಗಡಿ ಭದ್ರತಾ ಪಡೆಗಳು ಮಕ್ಕಳ ವಿಚಾರದಲ್ಲಿ ತುಂಬಾನೇ ನಿಗಾವಹಿಸಿದೆ. ಮಕ್ಕಳ ಕಳ್ಳಸಾಗಣೆ ತಡೆಯಲು ಪ್ರತ್ಯೇಕ ತಂಡಗಳನ್ನ

ರಚನೆ ಮಾಡಿದ್ದು, ಹಾಗಾಗಿ ಸಾಕಷ್ಟು ಮಕ್ಕಳನ್ನ ರಕ್ಷಣೆ ಮಾಡಲು ಸಾಧ್ಯವಾಗ್ತಿದೆ. ಸರ್ಕಾರ ಹಾಗೂ ಭದ್ರತಾ ಪಡೆಗಳ ಈ ಕಾರ್ಯ ಹೀಗೆಯೇ ನಿರಂತರವಾಗಿ ಮುಂದುವರೆಯಲಿ

ಪೋಷಕರೇ ನೀವೂ ಕೂಡಾ ನಿಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಿ.

ಭವ್ಯಶ್ರೀ ಆರ್.ಜೆ

Exit mobile version