ರವಿ ಡಿ.ಚೆನ್ನಣ್ಣನವರ್ ತಂದಿದ್ದ ತಡೆಯಾಜ್ಞೆಯನ್ನು ಮಾರ್ಚ್ 14 ರವರೆಗೆ ವಿಸ್ತರಿಸಿದ ಸಿವಿಲ್ ಕೋರ್ಟ್!

police

ದ ಫೈಲ್‘ ಪತ್ರಿಕೆ ಪ್ರಕಟಿಸಿರುವ ವರದಿಗಳ ಅನುಸಾರ, ಈ ಹಿಂದೆ ಮಾಧ್ಯಮಗಳು, ಪತ್ರಿಕೆಗಳು ಅನೇಕ ರೀತಿಯಲ್ಲಿ ತಮ್ಮ ಬಗ್ಗೆ ವರದಿ ನೀಡುತ್ತಿವೆ. ಹೀಗಾಗಿ ತಮ್ಮ ವಿರುದ್ಧ ಯಾವುದೇ ಸುದ್ದಿಯನ್ನು ಪ್ರಕಟಿಸಬಾರದು ಎಂದು ಐ.ಪಿ.ಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಕೋರ್ಟ್ ನಿಂದ ತಂದಿದ್ದ ಮಧ್ಯಂತರ ಪ್ರತಿಬಂಧಕಾಜ್ಞೆಯನ್ನು ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಮಾರ್ಚ್ 14 ರವರೆಗೆ ವಿಸ್ತರಣೆ ಮಾಡಿದ್ದಾರೆ.

ರವಿ ಡಿ. ಚೆನ್ನಣ್ಣನವರ್ ವಿರುದ್ಧ ಹಲವಾರು ರೀತಿಯಲ್ಲಿ ಸುದ್ದಿಗಳು ಹರಿದಾಡುತ್ತಿದ್ದು, ಯಾವುದು ಸತ್ಯಾಂಶ, ಯಾವುದು ಸುಳ್ಳಿನ ಕಂತೆಗಳು ಎಂಬ ಸ್ಪಷ್ಟತೆ ದೊರೆಕುತ್ತಿಲ್ಲ! ಸದ್ಯ ಈ ಕುರಿತು ಅನೇಕರು ರವಿ ಡಿ. ಚೆನ್ನಣ್ಣನವರ್ ವಿರುದ್ಧ ಕೆಲ ಕಿಡಿಗೇಡಿಗಳು ಅವರ ಅಧಿಕಾರಕ್ಕೆ ದಕ್ಕೆ ತರಲು ಇಂಥ ಕುತಂತ್ರ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರೆ, ಮತ್ತೊಂದೆಡೆ ರವಿ ಡಿ. ಚೆನ್ನಣ್ಣನವರು ಮೇಲೆ ಕೇಸ್ ದಾಖಲಿಸಿ ಸೂಕ್ತ ರೀತಿಯಲ್ಲಿ ತನಿಖೆ ಕೈಗೊಳ್ಳಬೇಕು!

ಸತ್ಯಾನು ಸತ್ಯತೆಗಳು ಹೊರಬರಲಿ ಆಗ ಯಾರು ಭ್ರಷ್ಟರು, ಯಾರು ಸಾಚಗಳು ಎಂಬ ಎಲ್ಲಾ ಮಾಹಿತಿ ಜನರಿಗೆ ತಿಳಿಯಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ, ಅಭಿಪ್ರಾಯಗಳ ಸುರಿಮಳೆಗೈದಿದ್ದಾರೆ. ಇನ್ನು ಪ್ರತಿಬಂಧಕಾಜ್ಞೆಯನ್ನು ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಮಾರ್ಚ್ 14 ರವರೆಗೂ ನಡೆಯಲಿ ಎಂದು ವಿಸ್ತರಿಸಿದ್ದು, ಇದರ ಬಗ್ಗೆ ಫೆಬ್ರವರಿ 11 ರಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ವಿವಿಧ ದಿನಪತ್ರಿಕೆಗಳು, ಸುದ್ದಿ ವಾಹಿನಿಗಳು, ಸಾಮಾಜಿಕ ಜಾಲತಾಣದ ಸುದ್ದಿಗಳು, ಸುದ್ದಿ ವಾಹಿನಿಗಳು ಸೇರಿದಂತೆ 37 ಮಾಧ್ಯಮ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿ ಪ್ರಕಟಿಸಲಾಗಿದೆ.

ಈ ಹಿಂದೆ ಅರ್ಜಿ ವಿಚಾರಣೆಯನ್ನು ನಡೆಸಿದ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಮಧ್ಯಂತರ ಪ್ರತಿಬಂಧಕಾಜ್ಞೆಯನ್ನು ಜನವರಿ 14 ರಂದು ಆದೇಶ ಹೊರಡಿಸಿದ್ದರು. ಅನಂತರ ಈ ಸಂಬಂಧ ಫೆಬ್ರವರಿ 01 ಕ್ಕೆ ವಿಚಾರಣೆಯನ್ನು ಮುಂದೂಡಿತ್ತು. ಬಳಿಕ ವಿಚಾರಣೆಯು ಫೆಬ್ರವರಿ 10 ಕ್ಕೆ ಮತ್ತೊಮ್ಮೆ ವಿಚಾರಣೆಯನ್ನು ಮುಂದೂಡಲಾಗಿತ್ತು. ಅದಾದ ಬಳಿಕ ಇದೀಗ ಮಾರ್ಚ್ 14 ರವರೆಗೆ ಪ್ರತಿಬಂಧಕಾಜ್ಞೆಯನ್ನು ವಿಸ್ತರಿಸಲಾಗಿದ್ದು, ಇದೇ ದಿನವೇ ವಿಚಾರಣೆಯನ್ನು ಕೂಡ ಮುಂದೂಡಲಾಗುವುದು ಜೊತೆಗೆ ತನಿಖೆ ಮಾಡಲಾಗುವುದು ಎಂದು ತಿಳಿಸಿದೆ.

Source Credits : The File

Exit mobile version