Bengaluru: ಬಿಜೆಪಿ (BJP) ಶಾಸಕ ಡಾ. ಸಿ.ಎನ್ ಅಶ್ವತ್ಥ ನಾರಾಯಣ (C.N. Ashwath Narayan) ಅವರು, ಡಿಸಿಎಂ ಡಿಕೆ ಶಿವಕುಮಾರ್ (CN Ashwath Narayan Statement) ಅವರು
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿ ಎಂದು ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹಾರೈಸಿದ್ದಾರೆ.
ಬೆಂಗಳೂರಿನ (Bengaluru) ಶಿರೂರು ಪಾರ್ಕ್ನಲ್ಲಿ ಮಲ್ಲೇಶ್ವರಂ , ಚಾಮರಾಜಪೇಟೆ, ಗಾಂಧಿನಗರ ಕ್ಷೇತ್ರದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಂಗಳವಾರ ನಾಗರಿಕರ ಅಹವಾಲು
ಆಲಿಸುವ ‘ಮನೆ ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅಶ್ವತ್ಥ ನಾರಾಯಣ, ತಮ್ಮ ರಾಜಕೀಯ ವಿರೋಧಿ ಎಂದೇ ಬಿಂಬಿತವಾಗಿರುವ
ಡಿಕೆಶಿ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ (CN Ashwath Narayan Statement) ಅಚ್ಚರಿ ಉಂಟು ಮಾಡಿದರು.
ತಮ್ಮ ಭಾಷಣದ ಕೊನೆಯಲ್ಲಿ ‘ನಿಮಗೂ ಒಳ್ಳೆಯದಾಗಲಿ, ನೀವು ಇನ್ನೂ ಉನ್ನತ ಸ್ಥಾನಕ್ಕೆ ಹೋಗುವಂತಾಗಲಿ. ಮುಂದಿನ ದಿನಗಳಲ್ಲಿ ನಾಡಿನ ಜನರು ಅವಕಾಶ ಕೊಟ್ಟಿದ್ದಾರೆ. ಮುಖ್ಯಮಂತ್ರಿಯೂ
ಆಗಿ ಎಂದು ಶುಭಹಾರೈಸುತ್ತೇನೆ’ ಎಂದು ಡಿಕೆ ಶಿವಕುಮಾರ್ (D K Shivakumar) ಪರವಾಗಿ ಬ್ಯಾಟಿಂಗ್ ಮಾಡಿದರು.
ಜನಸ್ಪಂದನಾ ಕಾರ್ಯಕ್ರಮದಲ್ಲಿದ್ದ ಭಾಗಿಯಾಗಿದ್ದ ಅಶ್ವತ್ಥ್ ನಾರಾಯಣ ಅವರ ಈ ಮಾತುಗಳು ಕಾಂಗ್ರೆಸ್ (Congress) ನಾಯಕರಿಗೆ ಸಂತೋಷವಾಗುವಂತೆ ಮಾಡಿತ್ತು. ವೇದಿಕೆ ಮೇಲೆ ಇದ್ದಂತಹ
ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮುಗುಳುನಕ್ಕು ಸುಮ್ಮನಾದ್ರೆ ಪಕ್ಕದಲ್ಲೇ ಇದ್ದ ಸಚಿವ ಜಮೀರ್ ಅಹ್ಮದ್ (Jameer Ahmed) ಅವರು ಚಪ್ಪಾಳೆ ಹೊಡೆದು ಫುಲ್ ಸ್ಮೈಲ್ ಕೊಟ್ಟರು.
ರಾಮನಗರ (Ramanagar) ಉಸ್ತುವಾರಿಯಾಗಿದ್ದ ಡಾ. ಸಿಎನ್ ಅಶ್ವತ್ಥ ನಾರಾಯಣ ಅವರು ಹಾಗೂ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ನಡುವೆ ಕಾರ್ಯಕ್ರಮವೊಂದರ ವೇದಿಕೆಯಲ್ಲೇ
ಜಟಾಪಟಿ ನಡೆದಿತ್ತು. ಬಳಿಕ ಹಲವು ಸಂದರ್ಭದಲ್ಲಿ ಡಿಕೆ ಸಹೋದರರಿಗೆ ಅಶ್ವತ್ಥ ನಾರಾಯಣ ಟಾಂಗ್ ಕೊಡುತ್ತಾ ಮಾತನಾಡಿದರು.
ರಾಜ್ಯ ಕಾಂಗ್ರೆಸ್ನಲ್ಲಿ ಮೂರು ಹೆಚ್ಚುವರಿ ಡಿಸಿಎಂ (DCM) ಸ್ಥಾನದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಡಿಕೆ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡುವ ಉದ್ದೇಶದಿಂದ ಮೂರು ಹೆಚ್ಚುವರಿ ಡಿಸಿಎಂ
ಸ್ಥಾನ ಸೃಷ್ಟಿ ಮಾಡುವ ಬೇಡಿಕೆಯ ಹಿಂದಿನ ಉದ್ದೇಶ ಎಂಬ ಚರ್ಚೆಗಳು ನಡೆಯುತ್ತಿದೆ.
ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ದಿನೇಶ್ ಗುಂಡೂರಾವ್ (Dinesh Gundurao) ಸಮ್ಮುಖದಲ್ಲಿ
ವೇದಿಕೆಯಲ್ಲೇ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಡಾ. ಅಶ್ವತ್ಥ ನಾರಾಯಣ ಅವರು ಡಿಸಿಎಂ ಡಿಕೆ ಶಿವಕುಮಾರ್ ಪರವಾಗಿ ಬ್ಯಾಟಿಂಗ್ ಮಾಡಿದರು.
- ಭವ್ಯಶ್ರೀ ಆರ್ ಜೆ