ತೆಂಗಿನ ಎಣ್ಣೆಯಲ್ಲಿದೆ ಉತ್ತಮ ಕೊಲೆಸ್ಟ್ರಾಲ್‌, ಇದರಿಂದಾಗುವ ಆರೋಗ್ಯ ಪ್ರಯೋಜನಗಳೇನು?

Coconut Oil Health Benefits : ಇತ್ತೀಚೆಗೆ ಅನೇಕ ಬ್ರಾಂಡ್ ಗಳ ಅಡುಗೆ ಎಣ್ಣೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವುಗಳ ಗುಣಮಟ್ಟವು ಯಾವ ಮಟ್ಟದಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

ಆದರೆ ಇಂದಿಗೂ ಅನೇಕ ಮಂದಿ ತೆಂಗಿನ ಎಣ್ಣೆಯಿಂದ ಅಡುಗೆ ಮಾಡುತ್ತಾರೆ. ಏಕೆಂದರೆ ತೆಂಗಿನ ಎಣ್ಣೆಯಿಂದ ಅಡುಗೆ ಮಾಡುವುದರಿಂದ ಆರೋಗ್ಯಕ್ಕೆ ನಾನಾ ಪ್ರಯೋಜನಗಳಿವೆ.

ಇದು ಆರೋಗ್ಯದ ಜೊತೆ ಜೊತೆಗೆ ಅಡುಗೆಗೆ ಉತ್ತಮ ಪರಿಮಳವನ್ನು ಸಹ (Coconut Oil Health Benefits : ) ನೀಡುತ್ತದೆ.

ಇದನ್ನು ಓದಿ: ಗೂಗಲ್ ಪೇನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡೋದು ಹೇಗೆ? ಯಾವೆಲ್ಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗಳಿಗೆ ಈ ಸೇವೆ ಲಭ್ಯ?

ತೆಂಗಿನ ಎಣ್ಣೆಯಿಂದ (Coconut Oil) ಅಡುಗೆ ಮಾಡುವುದರಿಂದ ನಿಮ್ಮ ಭಕ್ಷ್ಯಗಳಿಗೆ ರುಚಿಕರವಾದ ಪರಿಮಳವನ್ನು ಸೇರಿಸುವುದಲ್ಲದೆ, ನಿಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಇದು ಅನೇಕ ಗಮನಾರ್ಹ

ಪ್ರಯೋಜನಗಳನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ತೆಂಗಿನ ಎಣ್ಣೆಯಿಂದ ಅಡುಗೆ ಮಾಡುವುದರಿಂದ ನಿಮ್ಮ ಊಟದ ಪರಿಮಳವನ್ನು ಹೆಚ್ಚಿಸಲು ಇದು ಉತ್ತಮ ಆಯ್ಕೆಯಾಗಿದೆ.

ಅಡುಗೆಗೆ ತೆಂಗಿನ ಎಣ್ಣೆಯನ್ನು ಬಳಸುವುದು ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ತಿಳಿಯೋಣ ಬನ್ನಿ.

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತೆ:

ತೆಂಗಿನ ಎಣ್ಣೆಯು ಮಧ್ಯಮ ಸರಣಿ ಟ್ರೈಗ್ಲಿಸರೈಡ್ಸ್ (MCTs) ಎಂಬ ಹೆಸರಿನ ಆರೋಗ್ಯಕರವಾದ ಸ್ಯಾಚುರೇಟೆಡ್ ಕೊಬ್ಬನ್ನು (Saturated Fat) ಹೊಂದಿರುತ್ತದೆ.

ಇದು ನಿಮ್ಮ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತೆ:

ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳಾದ ಆಂಟಿಮೈಕ್ರೊಬಿಯಲ್ ಎಂಬ ಗುಣಲಕ್ಷಣಗಳು ಇವೆ. ಇವುಗಳು ವೈರಸ್‌ಗಳು, ಶಿಲೀಂಧ್ರಗಳು ಮತ್ತು ಹಾನಿಕಾರಕ ಬ್ಯಾಕ್ಟೀರಿಯಾ (Bacteria) ವಿರುದ್ದ ಹೋರಾಡಲು ಸಹಾಯ

ಮಾಡುತ್ತದೆ. ಈ ಎಣ್ಣೆಯನ್ನು ನಿಯಮಿತ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ನಿಮ್ಮ ಆರೋಗ್ಯವನ್ನು ಬಲ ಪಡಿಸುತ್ತದೆ.

ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ:

ತೆಂಗಿನ ಎಣ್ಣೆಯಲ್ಲಿರುವ MCT ಎಂಬ ಅಂಶವು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಇದರಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತವೆ. ತೆಂಗಿನ ಎಣ್ಣೆಯು ಕೊಬ್ಬಿನ ಮೂಲವಾಗಿದ್ದರೂ ಕೂಡ ಕೊಬ್ಬಿನ ಶೇಖರಣೆಯನ್ನು

ತಡೆಯುತ್ತದೆ ಮತ್ತು ತೂಕ ನಷ್ಟವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ.ಅಷ್ಟೇ ಅಲ್ಲದೆ ಈ ಎಣ್ಣೆಯಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಇದು ಹೆಚ್ಚಿದ ಕ್ಯಾಲೋರಿಯನ್ನು ಕಡಿಮೆ ಮಾಡುತ್ತೆ.

ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ:

ತೆಂಗಿನ ಎಣ್ಣೆಯಲ್ಲಿರುವ MCT ಎಂಬ ಅಂಶವನ್ನು ಸುಲಭವಾಗಿ ಶಕ್ತಿಯಾಗಿ ಪರಿವರ್ತಿಸಲಾಗುತ್ತದೆ. ಇದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.

ಈ ಎಣ್ಣೆಯಿಂದ ಇನ್ಸುಲಿನ್ ಸೂಕ್ಷ್ಮತೆಯನ್ನು ನಿರ್ವಹಿಸುವಲ್ಲಿ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ.

ಜೀರ್ಣಕ್ರಿಯೆಯನ್ನು ವರ್ಧಿಸುತ್ತದೆ:

ತೆಂಗಿನ ಎಣ್ಣೆಯಲ್ಲಿ ಕೆರಳಿಸುವ ಕರುಳಿನ ಸಹಲಕ್ಷಣಗಳು ಅಂದರೆ ಇಬ್ಸ್ ನಂತಹ ಅಂಶಗಳು ಇರುವುದರಿಂದ ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತೆ ಮತ್ತು ಜೀರ್ಣಾಂಗಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು

ಶಮನಗೊಳಿಸಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆಯಲ್ಲಿ ಇರುವ ಆಂಟಿಮೈಕ್ರೊಬಿಯಲ್ ಎಂಬ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಹಲವಾರು ಆರೋಗ್ಯ ಪ್ರಯೋಜನಗಳನ್ನು ಈ ತೆಂಗಿನೆಣ್ಣೆಯು ನೀಡುತ್ತದಾದರೂ ಅದರ ಸ್ಯಾಚುರೇಟೆಡ್ ಕೊಬ್ಬಿನಂಶದ ಕಾರಣದಿಂದಾಗಿ ಮತ್ತು ಹೆಚ್ಚಿನ ಕ್ಯಾಲೋರಿ ಕಾರಣದಿಂದಾಗಿ

ಮಿತವಾಗಿ ಸೇವನೆ ಮಾಡುವುದು ಒಳ್ಳೆಯದು.ಇದನ್ನು ಸೂಕ್ತವಾದಾಗ ಇತರ ಅಡುಗೆ ಎಣ್ಣೆಗಳ ಬದಲಿಗೆ ಬಳಸಿ ಮತ್ತು ಆದಷ್ಟು ಸಮತೋಲಿತ ಆಹಾರದ ಭಾಗವಾಗಿ ಸೇರಿಸಿ.

ರಶ್ಮಿತಾ ಅನೀಶ್

Exit mobile version