ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ ಬೆಲೆ 135 ರೂ.ಗೆ ಇಳಿಕೆ!

LPG

ಕಳೆದ 15 ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ(Central Government) ವಾಣಿಜ್ಯ(Commercial) ಹಾಗೂ ಗೃಹಬಳಕೆ(Domestic) ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್(LPG Gas Cylinder) ಬೆಲೆಯಲ್ಲಿ ದಿಢೀರ್ ಏರಿಕೆ ಮಾಡಿತ್ತು.

ಈ ಮೂಲಕ ಜನಸಾಮಾನ್ಯರಿಗೆ ದೊಡ್ಡ ಹೊಡೆತ ನೀಡಿತ್ತು. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಿದ್ದನ್ನು ಖಂಡಿಸಿ, ಜನಸಾಮಾನ್ಯರು ಕೇಂದ್ರ ಸರ್ಕಾರಕ್ಕೆ ಇಡೀ ಶಾಪ ಹಾಕಿದ್ದಂತು ನಿಜ! ಕಳೆದ ವಾರವಷ್ಟೇ ಪೆಟ್ರೋಲ್(Petrol) ಮತ್ತು ಡಿಸೇಲ್(Diesel) ಬೆಲೆ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿತು. ಸದ್ಯ, ಈಗ ಅದೇ ರೀತಿ ವಾಣಿಜ್ಯ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ 135 ರೂ. ಇಳಿಕೆ ಮಾಡಿದೆ. ಜೂನ್ 1 ರಿಂದ ನಗರಗಳಾದ್ಯಂತ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ಸಿಲಿಂಡರ್‌ಗೆ ರೂ 135 ರಷ್ಟು ಕಡಿಮೆ ಮಾಡಲಾಗಿದೆ.

ಇದಕ್ಕೂ ಮುನ್ನ ಏಪ್ರಿಲ್ 1 ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗೆ 250 ರೂ.ನಿಂದ 2,253 ರೂ. ಮಾರ್ಚ್ 1 ರಂದು ವಾಣಿಜ್ಯ ಎಲ್‌ಪಿಜಿ ದರವನ್ನು 105 ರೂ.ಗಳಷ್ಟು ಹೆಚ್ಚಿಸಲಾಗಿತ್ತು.

Exit mobile version