Karnataka: ರಾಜ್ಯದಲ್ಲಿ ಈಗ ಸರ್ಕಾರ (commission sacm in state)ಬದಲಾದರೂ ಕೂಡ ಕಮೀಷನ್ ದಂಧೆ ಮಾತ್ರ ನಿಲ್ಲುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಹಳೇ ಕಾಮಗಾರಿಗಳನ್ನ
ತಡೆಹಿಡಿಯುವಂತೆ ಖುದ್ದು ಸಿಎಂ ಸಿದ್ದರಾಮಯ್ಯನವರೇ (Siddaramaiah) ಸೂಚಿಸಿದ್ದರೂ ಮುಖ್ಯಮಂತ್ರಿಗಳ ಆದೇಶಕ್ಕೂ ಇಲ್ಲಿ ಮಾತ್ರ ಕ್ಯಾರೇ ಅನ್ನುತ್ತಿಲ್ಲ. ಹಾಗಾದರೆ ಆ ಆ ಕಾಮಗಾರಿ ಯಾವುದು..?
ಕಮೀಷನ್ ಆರೋಪ ಯಾಕೆ ಅಲ್ಲಿ ಕೇಳಿ ಬರ್ತಿದೆ ಎನ್ನೋದರ (commission sacm in state) ವಿವರಣೆ ಇಲ್ಲಿದೆ ನೋಡಿ.
ಕೊಪ್ಪಳ (Koppala) ನಗರಸಭೆ ಕಚೇರಿಯ ನವೀಕರಣ ಕಾರ್ಯವು ಅತ್ಯಂತ ಭರದಿಂದ ಸಾಗುತ್ತಿದೆ. ಅದಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನ ಈಗಾಗಲೇ ಪೌರಾಯುಕ್ತ ಹೆಚ್ ಎಂ ಭಜಕ್ಕನವರ್ ಖರೀದಿ ಮಾಡಿದ್ದಾರೆ.
ಆದ್ರೆ ವಿಷ್ಯ ಏನಪ್ಪಾ ಅಂದ್ರೆ ಇದೀಗ ನವೀಕರಣ ಹೆಸರಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆದಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಕೊಪ್ಪಳ ಜಿಲ್ಲಾ ಯೋಜನಾ ನಿರ್ದೇಶಕರಿಗೆ ಖುದ್ದು ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ (Somanna Halli) ಎನ್ನೋರು ಈ ಕುರಿತು ಪತ್ರ ಬರೆದಿದ್ದಾರೆ. ಬರೋಬ್ಬರಿ 2 ಕೋಟಿ ವೆಚ್ಚದ ಕಾಮಗಾರಿ ನಗರಸಭೆ
ಕಚೇರಿ ನವೀಕರಣ (Koppal City Municipal Council) ಹೆಸರಲ್ಲಿ ಕೈಗೊಂಡಿದ್ದಾರೆ. ಅದೂ ನಗರಸಭೆ ಸದಸ್ಯರಿಗೆ ಮಾಹಿತಿ ನೀಡದೆ ಎನ್ನೋದು ತೀವ್ರ ವಿಪರ್ಯಾಸ. ಹೀಗಾಗಿ ಪೌರಾಯುಕ್ತ ವಿರುದ್ದ ಜನ ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ : ಜುಲೈ 3 ರಿಂದ 10 ದಿನ ವಿಧಾನಸಭೆ ಅಧಿವೇಶನ : ಸಿಎಂ ಸಿದ್ದರಾಮಯ್ಯರಿಂದ ಬಜೆಟ್ ಮಂಡನೆ
ಕಾಮಗಾರಿ ಪರವಾನಿಗೆಯನ್ನು ಸದಸ್ಯರಿಗೆ ಮಾಹಿತಿ ಇಲ್ಲದೇ ಪಡೆದಿದ್ದರು. ತಕ್ಷಣವೇ ಕಾಮಗಾರಿ ನಿಲ್ಲಿಸುವಂತೆ ಸದ್ಯ ಯೋಜನಾ ನಿರ್ದೇಶಕಿ ಕಾವ್ಯರಾಣಿಯವರು ಪೌರಾಯುಕ್ತರಿಗೆ ಪತ್ರ ಬರೆಡಿದ್ದಾರೆ ಆದರೂ
ಕ್ಯಾರೆ ಎನ್ನದೆ ಮತ್ತೆ ಕಾಮಗಾರಿ ನಡೆಸುತ್ತಿದ್ದಾರೆ. ಅತ್ತ ಸಿದ್ದರಾಮರಯ್ಯ ನೈತೃತ್ವದ ಕಾಂಗ್ರೆಸ್ (Congress) ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಹಳೇ ಕಾಮಗಾರಿಗಳನ್ನ ತಡೆಹಿಡಿದಿದೆ. ಆದ್ರೆ ಈ ಕಾಮಾಗಾರಿ
ಮಾತ್ರ ಇನ್ನು ನಿಂತಿಲ್ಲ. ಕೊಪ್ಪಳ ನಗರಸಭೆ ಸದಸ್ಯ ಸೋಮಣ್ಣ ಹಳ್ಳಿ ಹೀಗಾಗಿ ನವೀಕರಣ ಹೆಸರಲ್ಲಿ ಕಮೀಷನ್ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ.

ಇನ್ನು ಸಭೆಯಲ್ಲಿ ಕೊಪ್ಪಳದ ಮೂಲಭೂತ ಸಮಸ್ಯೆಗಳ ಬಗ್ಗೆ ಹೇಳಿದ್ರೆ, ಅಧಿಕಾರಿಗಳು ಅನುದಾನ ಇಲ್ಲ ಎನ್ನುತ್ತಾರೆ ಆದರೆ ಇಷ್ಟೊಂದು ದೊಡ್ಡ ಮೊತ್ತದ ನವೀಕರಣ ಕಾಮಗಾರಿಗೆ ಹೇಗೆ ಅನಮೋದನೆ
ಪಡೆದುಕೊಂಡರು ಅನ್ನೋ ಅನುಮಾನ ಹುಟ್ಟಿಕೊಂಡಿದೆ. ಅಲ್ದೆ ಇದಕ್ಕೆ ಅನುಮತಿಯನ್ನು ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಲ್ಲಿ ಇರೋವಾಗಲೇ ಪಡೆದಿದ್ದಾರೆ ಎನ್ನೋ ಮತ್ತೊಂದು ಗಂಭೀರ ಆರೋಪ ಕೇಳಿ
ಬಂದಿದೆ. ಯಾಕಂದ್ರೆ ಖುದ್ದು ಪೌರಾಯುಕ್ತರೇ ಆಸಕ್ತಿ ವಹಿಸಿ, ನವಿಕರಣ ಮಾಡ್ತಿದ್ದಾರೆ.
ಇದನ್ನೂ ಓದಿ : ಆಗಸ್ಟ್ 11ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸಂಚಾರ; ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಮೊದಲ ವಿಮಾನ ಹಾರಾಟ
ಅಲ್ಲದೇ ಹಾವೇರಿ (Haveri) ಮೂಲದ ತಮಗೆ ಪರಿಚಯವಿರೋ ಗುತ್ತಿಗೆದಾರರಿಗೆ ಟೆಂಡರ್ (Tender) ನೀಡಿದ್ದಾರಂತೆ. ಕೆಲ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಅವರಿಂದ ಕಿಕ್ ಬ್ಯಾಕ್ ನೀಡಲಾಗಿದೆ
ಎನ್ನೋ ಆರೋಪ ಕೇಳಿ ಬರ್ತಿದೆ. ಇನ್ನು ಇದೆಕ್ಕೆಲ್ಲಾ ಉತ್ತರಿಸಬೇಕಾದ ಪೌರಾಯುಕ್ತರು ಸದ್ಯ ರಜೆ ಮೇಲೆ ಇರೋದು ಅನುಮಾನಕ್ಕೆ ಪುಷ್ಟಿ ನೀಡುವಂತಾಗಿದೆ.
ಬಿಜೆಪಿ (BJP) ಸರ್ಕಾರದಲ್ಲಿ ಮುನ್ನೆಲೆಗೆ ಬಂದಿದ್ದ ಕಮೀಷನ್ ಆರೋಪ ಸದ್ಯ ಮತ್ತೊಮ್ಮೆ ಸದ್ದು ಮಾಡ್ತಿದೆ. ಸ್ವತಃ ಯೋಜನಾ ನಿರ್ದೇಶಕರೇ ಕಾಮಗಾರಿ ನಿಲ್ಲಿಸಿ ಅಂತ ಪತ್ರ ಬರೆದರೂ,
ಅದಕ್ಕೆ ಕ್ಯಾರೆ ಎನ್ನದಿರೋದು ಭ್ರಷ್ಟಾಚಾರದ ವಾಸನೆ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಅದೇನೇ ಇರಲಿ ಸರ್ಕಾರ ಇನ್ನಾದ್ರು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳಯಬೇಕಿದೆ.
ರಶ್ಮಿತಾ ಅನೀಶ್