ಭಾರತೀಯ ಸೇನೆಯ ಯೋಧರನ್ನು ಕ್ಯಾರೆಟ್‌ಗೆ ಹೋಲಿಸಿ ವ್ಯಂಗ್ಯವಾಡಿದ ಗುಲಾಂ ರಸೂಲ್ ಬಲ್ಯಾವಿ!

India : ಇಂಡಿಯಾ ಟುಡೇ(India Today) ಸುದ್ದಿ ಸಂಸ್ಥೆ ನೀಡಿರುವ ವರದಿ ಅನುಸಾರ, ಜೆಡಿಯು ಮುಖಂಡ ಗುಲಾಂ ರಸೂಲ್ ಬಲ್ಯಾವಿ(Maulana Ghulam Rasool Balyavi) ಭಾರತೀಯ ಸೈನಿಕರನ್ನು ಕ್ಯಾರೆಟ್‌ಗೆ ಹೋಲಿಸಿ ವ್ಯಂಗ್ಯವಾಡಿರುವುದು ಇದೀಗ (compared soldiers to carrots) ತೀವ್ರ ವಿವಾದಕ್ಕೆ ಕಾರಣವಾಗಿದೆ!

ಭಯೋತ್ಪಾದಕರನ್ನು ಎದುರಿಸಲು ಕೇಂದ್ರ ಸರಕಾರಕ್ಕೆ ಭಯವಿದ್ದರೆ, ಶೇ.30% ರಷ್ಟು ಮುಸ್ಲಿಂ ಸೈನಿಕರನ್ನು ಭಾರತೀಯ ಸೇನೆಗೆ ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಜನತಾದಳ ಯುನೈಟೆಡ್ (ಜೆಡಿಯು)(JDU) ಮಾಜಿ ಎಂಎಲ್‌ಸಿ ಗುಲಾಂ ರಸೂಲ್ ಬಲ್ಯಾವಿ ಅವರು ಭಾರತೀಯ ಸೇನೆಯ ಯೋಧರನ್ನು ಕ್ಯಾರೆಟ್‌ಗೆ(Carrots) ಹೋಲಿಸಿ ಮಾತನಾಡುವ ಮುಖೇನ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದಾರೆ.

ಪ್ರತಿಪಕ್ಷ ಬಿಜೆಪಿ ಗುಲಾಂ ರಸೂಲ್ ಹೇಳಿಕೆಯು ಭಾರತೀಯ ಸೇನೆಗೆ ಮಾಡಿರುವ ಅವಮಾನ ಎಂದು ನೇರವಾಗಿ ಆರೋಪಿಸಿದೆ.

ನಾವಡಾದಲ್ಲಿ ಇಡರಾ-ಇ-ಶರಿಯಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜೆಡಿಯು ನಾಯಕ ಗುಲಾಂ ರಸೂಲ್ ಬಲ್ಯಾವಿ,

ಪಾಕಿಸ್ತಾನದ(Pakistan) ಭಯೋತ್ಪಾದಕರನ್ನು ಎದುರಿಸಲು ಕೇಂದ್ರ ಸರ್ಕಾರ ಹೆದರುತ್ತಿದ್ದರೆ, ಅವರು ಭಾರತೀಯ ಸೇನೆಗೆ ಶೇಕಡಾ 30% ರಷ್ಟು ಮುಸ್ಲಿಂ ಸೈನಿಕರನ್ನು ನೇಮಿಸಿಕೊಳ್ಳಬೇಕು.

ಪಾಕಿಸ್ತಾನಿ ಭಯೋತ್ಪಾದಕರೊಂದಿಗೆ(Pakistani terrorists) ವ್ಯವಹರಿಸಲು ಸರ್ಕಾರ ಹೆದರುತ್ತಿದ್ದರೆ, ಅದು ಶೇಕಡಾ 30% ರಷ್ಟು ಮುಸ್ಲಿಂ ಮಕ್ಕಳನ್ನು ಸೇರಿಸಬೇಕು.

ನಮ್ಮ ದೇಶವನ್ನು ಉಳಿಸಲು ನಾವು ಏನು ಮಾಡಬೇಕು ಎಂಬುದು ನಮಗೆ ತಿಳಿದಿದೆ ಎಂದು ಗುಲಾಮ್ ರಸೂಲ್ ಬಲ್ಯಾವಿ ಹೇಳಿದ್ದಾರೆ.

ಪಾಕಿಸ್ತಾನದ ಪರಮಾಣು ಸಾಮರ್ಥ್ಯಕ್ಕೆ ತಕ್ಕ ಉತ್ತರ ನೀಡಿದವರು ಎಪಿಜೆ ಅಬ್ದುಲ್ ಕಲಾಂ(APJ Abdul Kalam) ಅವರಂತಹ ಮುಸ್ಲಿಮರು ಎಂದು ಬಲ್ಯಾವಿ ಉಲ್ಲೇಖಿಸಿದರು.

ಪಾಕಿಸ್ತಾನವು ತನ್ನ ಪರಮಾಣು ಕ್ಷಿಪಣಿಗಳಿಂದ ಭಾರತಕ್ಕೆ ಬೆದರಿಕೆ ಹಾಕಿದಾಗ, ನಾಗಪುರದ ಯಾವುದೇ ಸಂತರು (compared soldiers to carrots) ಅವರಿಗೆ ಉತ್ತರ ನೀಡಲು ಹೋಗಲಿಲ್ಲ.

ಅದು ಮುಸಲ್ಮಾನನ ಪುತ್ರ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ನೆರೆಯ ರಾಷ್ಟ್ರಕ್ಕೆ ಪ್ರತ್ಯುತ್ತರವನ್ನು ನೀಡಿದರು ಎಂದು ಗುಲಾಂ ಹೇಳಿದರು.

ಸದ್ಯ ಈ ಒಂದು ಹೇಳಿಕೆ ಇದೀಗ ರಾಷ್ಟ್ರದಲ್ಲಿ ಭಾರಿ ವಿವಾದ ಹುಟ್ಟುಹಾಕಿದ್ದು, ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

ಜೆಡಿಯು ಮಾಜಿ ನಾಯಕ ಗುಲಾಂ ರಸೂಲ್ ಬಲ್ಯಾವಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ(BJP) ವಕ್ತಾರ ನಿಖಿಲ್ ಆನಂದ್,

ಗುಲಾಂ ರಸೂಲ್ ಬಲ್ಯಾವಿ ಹೇಳಿರುವುದು ಧಾರ್ಮಿಕ ಮುಖಂಡರು ಮತ್ತು ಸೇನೆಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.

ಗುಲಾಂ ರಸೂಲ್ ಬಲ್ಯಾವಿ ಅವರಿಗೆ ಮುಸ್ಲಿಮರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ಅವರ ಸಂಖ್ಯೆಗೆ ಅನುಗುಣವಾಗಿ ಶೇ.80% ರಷ್ಟು ಪಸ್ಮಾಂಡ ಮುಸ್ಲಿಮರಿಗೆ ಸೂಕ್ತ ಗೌರವ,

ನ್ಯಾಯ ಮತ್ತು ಭಾಗವಹಿಸುವಿಕೆ ನೀಡಲು ಧಾರ್ಮಿಕ ಸುಧಾರಣಾ ಚಳವಳಿ ನಡೆಸಬೇಕು ಎಂದು ನಿಖಿಲ್ ಆನಂದ್ ಹೇಳಿದ್ದಾರೆ.

Exit mobile version