ಕಾಂಗ್ರೆಸ್‌ ಈಗ ಕರ್ನಾಟಕದಲ್ಲೂ ಕೊನೆ ಉಸಿರೆಳೆಯುತ್ತಿದೆ ; ಬಿಜೆಪಿ ಲೇವಡಿ

Karnataka: ಇತ್ತೀಚೆಗೆ ಕೈ ನಾಯಕರು ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಈಗಾಗಲೇ ದೇಶದೆಲ್ಲೆಡೆ ಅಪ್ರಸ್ತುತವಾಗಿರುವ  ಕಾಂಗ್ರೆಸ್‌(Congress last breathed Karnataka) ಈಗ ಕರ್ನಾಟಕದಲ್ಲೂ ಕೊನೆ ಉಸಿರೆಳೆಯುತ್ತಿದೆ. ಪ್ರಜಾದ್ರೋಹ ಮಾಡಿದ್ದರ ಫಲ ಇದು ಎಂದು ರಾಜ್ಯ ಬಿಜೆಪಿ(BJP) ವಿಪಕ್ಷ ಕಾಂಗ್ರೆಸ್‌ ಪಕ್ಷವನ್ನು ಲೇವಡಿ ಮಾಡಿದೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುವ ನೈತಿಕತೆ ಇಲ್ಲದವರೇ ಓಲೈಕೆ ರಾಜಕಾರಣಕ್ಕಿಳಿಯುವುದು.

ಮಂದಿರವೆಂದರೆ ಅಲರ್ಜಿ, ಮಸೀದಿಯೆಂದರೆ ಆಸಕ್ತಿ ತೋರುವ ಊಸರವಳ್ಳಿಗಳೇ ತುಂಬಿರುವ ಪಕ್ಷವು ಪ್ರಜೆಗಳ ಧ್ವನಿಯಾಗಲು ಸಾಧ್ಯವೆ?

  ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾಯ್ತು, ಧರ್ಮಗಳ ನಡುವೆ ಬಿರುಕು ತಂದಿದ್ದಾಯ್ತು, ಬೆಟ್ಟ, ಗುಡ್ಡಗಳನ್ನು ಅಗೆದು ಸಂಪತ್ತು ಕೊಳ್ಳೆ ಹೊಡೆದಿದ್ದಾಯ್ತು, ಗೂಂಡಾಗಿರಿ ಮಾಡಿದ್ದಾಯ್ತು, ಸಾಧ್ಯವಾದಲ್ಲೆಲ್ಲ ಅಕ್ರಮ ಎಸಗಿದ್ದಾಯ್ತು.

ಇನ್ನೂ ಯಾವ ಮುಖ ಇಟ್ಕೊಂಡು ಜನರ ಬಳಿ ಹೋಗಿದ್ದೀರಿ ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಮಾಸಿಕ ಭತ್ಯೆ, ಕಟ್ಟಡ ಕಾರ್ಮಿಕರಿಗೆ 50,000 ಧನಸಹಾಯ ಘೋಷಣೆ: ಕೊಟ್ಟ ಮಾತು ಉಳಿಸಿಕೊಂಡ ಸಿಎಂ

ಇನ್ನೊಂದು ಟ್ವೀಟ್‌ ನಲ್ಲಿ, ಅಧಿಕಾರದಲ್ಲಿದ್ದಾಗ ಮಾಡಿದ ಹಗರಣಗಳು ಹೊರಬರಬಾರದು ಎಂದು ಲೋಕಾಯುಕ್ತವನ್ನೇ ಮುಚ್ಚಿದವರು ನೀವು. ಜನತೆ ಎಲ್ಲವನ್ನೂ ನೋಡಿದ್ದಾರೆ.

ಆಗ ಮಾಡಿದ ಪಾಪಗಳು ಯಾವ ಯಾತ್ರೆಯಿಂದಲೂ ಪರಿಹಾರವಾಗದು  ಸಿದ್ದರಾಮಯ್ಯ(Siddaramaiah). ಅಲ್ಪಸಂಖ್ಯಾತರ ರಕ್ಷಕ,

ಭ್ರಷ್ಟಾಚಾರ ವಿರೋಧಿ, ದಲಿತ ಪರ ಎಂದೆಲ್ಲ  ಹೋದಲ್ಲೆಲ್ಲಾ ಸುಳ್ಳನ್ನೇ ಊದಿ,  ಊರೂರು ತಿರುಗಿ(Congress last breathed Karnataka) ಯಾತ್ರೆ ಮಾಡಿದರೂ ನಿಮಗೆ ಎದುರಾಗುವುದು ಖಾಲಿ ಕುರ್ಚಿಗಳೇ.

ಜನರು ನಿಮ್ಮ ಯಾತ್ರೆಯನ್ನು ತಿರಸ್ಕರಿಸಿದ್ದಾರೆ ಎಂದು ಟೀಕಿಸಿದೆ.

ಇನ್ನು ಮುಂಬರುವ ವಿಧಾನಸಭಾ ಚುನಾವಣೆ  ಹಿನ್ನಲೆಯಲ್ಲಿ ರಾಜ್ಯದಲ್ಲಿ  ಮೂರು ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಜೆಡಿಎಸ್‌(JDS) ಪಕ್ಷದಿಂದ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರು “ಪಂಚರತ್ನ” (Pancha Rathna)ಯಾತ್ರೆಯನ್ನು ಕಳೆದ ಎರಡು ತಿಂಗಳಿಂದ ನಡೆಸುತ್ತಿದ್ದಾರೆ.

ಇನ್ನೊಂದೆಡೆ ಇತ್ತೀಚೆಗೆ ಕಾಂಗ್ರೆಸ್‌ “ಪ್ರಜಾಧ್ವನಿ” ಯಾತ್ರೆಯನ್ನು ಆರಂಭಿಸಿದೆ. ಈ ಮಧ್ಯೆ ಬಿಜೆಪಿ “ವಿಜಯ ಸಂಕಲ್ಪ” ಸಮಾವೇಶಗಳನ್ನು ಆಯೋಜಿಸುತ್ತಿದೆ. ಜನರನ್ನು ತಲುಪಿನ ನಿಟ್ಟಿನಲ್ಲಿ ಮೂರು ಪಕ್ಷಗಳು ವಿವಿಧ ಮಾದರಿಯ  ಜನಸಂಪರ್ಕ ಸಭೆಗಳನ್ನು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಮ್ಮಿಕೊಂಡಿವೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯು ಮೇ ಅಥವಾ ಜೂನ್‌ನಲ್ಲಿ ನಡೆಯುವುದು ಬಹುತೇಕ ನಿಶ್ಚಿತ. 

ಮಾರ್ಚ ಅಥವಾ ಏಪ್ರಿಲ್‌ನಲ್ಲಿ ಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ಆದರೆ ಜೆಡಿಎಸ್‌ ಈಗಾಗಲೇ 93 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ.

Exit mobile version