ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ

Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ನೂತನ ಕಾಂಗ್ರೆಸ್ (Congress) ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ (congress minister list) ಒಳಗೊಂಡ ಸಂಪುಟದಲ್ಲಿ ಈಗ ಒಟ್ಟು 34 ಮಂದಿ ಇದ್ದಾರೆ.

ಕಾಂಗ್ರೆಸ್ ನ ಹೈಕಮಾಂಡ್ (High Command) ಪ್ರಾದೇಶಿಕ ಸಮಾನತೆ, ಅನುಭವಿಗಳು ಮತ್ತು ಹೊಸಬರನ್ನು ಸರಿದೂಗಿಸಿಕೊಂಡು ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿದೆ

. ಪಕ್ಷದಲ್ಲಿ ಹೊಸ ನಾಯಕತ್ವವನ್ನು ಉತ್ತೇಜಿಸುವ ಸಲುವಾಗಿ, ಕೆಲವು ಹಿರಿಯ ಸದಸ್ಯರಿಗೆ ಕಡಿಮೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ.

ಇದೀಗ ನೂತನ ಸಚಿವ ಸಂಪುಟದ ಖಾತೆ ಹಂಚಿಕೆಯ ಅಧಿಕೃತ ಅಂತಿಮ ಪಟ್ಟಿ ಪ್ರಕಟವಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ,

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (D.K.Shivakumar) ಸೇರಿದಂತೆ ಒಟ್ಟು 34 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.

ಹಾಗಾದರೆ ಯಾರಿಗೆ, ಯಾವ ಖಾತೆ ಎಂಬುದು ಈ ಕೆಳಗಿನಂತಿದೆ…

  1. ಸಿಎಂ ಸಿದ್ದರಾಮಯ್ಯ- ಐಟಿ-ಬಿಟಿ, ಗುಪ್ತಚರ, ವಾರ್ತಾ, ಹಣಕಾಸು, ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆ
  2. ಡಿಸಿಎಂ ಡಿಕೆ ಶಿವಕುಮಾರ್- ಬೆಂಗಳೂರು ನಗರಾಭಿವೃದ್ಧಿ ಮತ್ತು ಜಲಸಂಪನ್ಮೂಲ ಇಲಾಖೆ
  3. ರಾಮಲಿಂಗರೆಡ್ಡಿ- ಮುಜರಾಯಿ ಮತ್ತು ಸಾರಿಗೆ ಇಲಾಖೆ
  4. ಡಾ. ಜಿ.ಪರಮೇಶ್ವರ್- ಗೃಹ ಇಲಾಖೆ
  5. ಕೆ.ಹೆಚ್.ಮುನಿಯಪ್ಪ- ಆಹಾರ & ನಾಗರಿಕ ಸರಬರಾಜು ವ್ಯವಹಾರ ಇಲಾಖೆ
  6. ದಿನೇಶ್ ಗುಂಡೂರಾವ್: ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ
  7. ಎಂ.ಬಿ.ಪಾಟೀಲ್: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
  8. ಹೆಚ್ ಕೆ‌ ಪಾಟೀಲ್- ಪ್ರವಾಸೋದ್ಯಮ,ಕಾನೂನು ಮತ್ತು ಸಂಸದೀಯ ಇಲಾಖೆ
  9. ಕೆ.ಜೆ.ಜಾರ್ಜ್‌- ಇಂಧನ ಇಲಾಖೆ
  10. ಜಮೀರ್ ಅಹಮದ್ ಖಾನ್- ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳು
  11. ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆ
  12. ಶಿವಾನಂದ ಪಾಟೀಲ್-ಜವಳಿ, ಸಕ್ಕರೆ, ಸಹಕಾರ ಇಲಾಖೆಯ ಕೃಷಿ ಮಾರುಕಟ್ಟೆ ಇಲಾಖೆ
  13. ಹೆಚ್ ಸಿ ಮಹದೇವಪ್ಪ: ಸಮಾಜಕಲ್ಯಾಣ ಇಲಾಖೆ
  14. ಎಸ್.ಎಸ್.ಮಲ್ಲಿಕಾರ್ಜುನ- ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ
  15. ಕೃಷ್ಣ ಬೈರೇಗೌಡ- ಕಂದಾಯ ಇಲಾಖೆ
  16. ಈಶ್ವರ್ ಖಂಡ್ರೆ- ಅರಣ್ಯ ಮತ್ತು ಪರಿಸರ ಖಾತೆ
  17. ಶರಣುಬಸಪ್ಪ ದರ್ಶನಾಪುರ್- ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು
  18. ಚಲುವರಾಯಸ್ವಾಮಿ- ಕೃಷಿ ಇಲಾಖೆ
  19. ಸಂತೋಷ ಲಾಡ್- ಕಾರ್ಮಿಕ ಇಲಾಖೆ
  20. ರಹೀ ಖಾನ್: ಪೌರಾಡಳಿತ, ಹಜ್ ಖಾತೆ
  21. ಪ್ರಿಯಾಂಕ್ ಖರ್ಗೆ-ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ
  22. ಆರ್.ಬಿ.ತಿಮ್ಮಾಪುರ- ಅಬಕಾರಿ ಇಲಾಖೆ
  23. ಡಾ.ಶರಣುಪ್ರಕಾಶ್ ಪಾಟೀಲ್-ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಇಲಾಖೆ
  24. ಶಿವರಾಜ್ ತಂಗಡಗಿ- ಹಿಂದುಳಿದ ವರ್ಗ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ
  25. ಕೆ.ವೆಂಕಟೇಶ್- ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ
  26. ಬಿ‌.ನಾಗೇಂದ್ರ: ಯುವಜನ ಸೇವೆ & ಕ್ರೀಡೆ, ಪರಿಶಿಷ್ಟ ಪಂಗಡ ಕಲ್ಯಾಣ
  27. ಡಿ.ಸುಧಾಕರ್: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ
  28. ಬೈರತಿ ಸುರೇಶ್- ನಗರಾಭಿವೃದ್ಧಿ, ಪಟ್ಟಣಯೋಜನೆ(ಬೆಂಗಳೂರು ಹೊರತು ಪಡಿಸಿ)
  29. ಕೆ.ಎನ್.ರಾಜಣ್ಣ: ಸಹಕಾರ ಇಲಾಖೆ
  30. ಲಕ್ಷ್ಮಿ ಹೆಬ್ಬಾಳ್ಕರ್- ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ
  31. ಮಧು ಬಂಗಾರಪ್ಪ- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ
  32. ಮಂಕಾಳ್ ವೈದ್ಯ- ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಇಲಾಖೆ
  33. ಡಾ‌.ಎಂ‌.ಸಿ‌.ಸುಧಾಕರ್- ಉನ್ನತ ಶಿಕ್ಷಣ ಇಲಾಖೆ34.ಎನ್,ಎಸ್.ಬೋಸರಾಜ್: ವಿಜ್ಞಾನ & ತಂತ್ರಜ್ಞಾನ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆ

ರಾಜ್ಯದ ಒಟ್ಟು 31 ಜಿಲ್ಲೆಗಳ ಪೈಕಿ ಯಾವ ಯಾವ ಜಿಲ್ಲೆಗಳಿಗೆ ಮಾತ್ರವೇ ಸಚಿವ ಸ್ಥಾನದ ಪ್ರಾತಿನಿಧ್ಯ ಸಿಕ್ಕಿದೆ? ಯಾವ ಜಿಲ್ಲೆಗೆ ಎಷ್ಟು ಸಚಿವ ಸ್ಥಾನ ಸಿಕ್ಕಿದೆ ? ಯಾವ ಯಾವ ಜಿಲ್ಲೆಗೆ ಮಂತ್ರಿ ಭಾಗ್ಯವಿಲ್ಲ ಎನ್ನುವ ವಿವರ ಇಲ್ಲಿದೆ ನೋಡಿ.

ಕರ್ನಾಟಕದ (Karnataka) ಜಿಲ್ಲೆಗಳಲ್ಲಿ ಸಚಿವ ಸ್ಥಾನಗಳ ಹಂಚಿಕೆಯನ್ನು ನಿರ್ಧರಿಸಲಾಗಿದ್ದು, ಬೆಂಗಳೂರು ನಗರಕ್ಕೆ ಆರು ಸ್ಥಾನಗಳನ್ನು ಮತ್ತು ಮೈಸೂರು (congress minister list) ಜಿಲ್ಲೆಗೆ ಮೂರು ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.

ಸಚಿವ ಸ್ಥಾನ ಪಡೆದವರಲ್ಲಿ ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ(Dr H.C.Mahadevappa) , ಕೆ.ವೆಂಕಟೇಶ್ ಸೇರಿದ್ದಾರೆ.

ಹೆಚ್ಚುವರಿಯಾಗಿ ತುಮಕೂರಿನಲ್ಲಿ ಕೆ.ಎನ್.ರಾಜಣ್ಣ ಮತ್ತು ಡಾ.ಜಿ.ಪರಮೇಶ್ವರ್, ವಿಜಯಪುರದಲ್ಲಿ ಶಿವಾನಂದ್ ಪಾಟೀಲ್ ಮತ್ತು ಎಂ.ಬಿ.ಪಾಟೀಲ್, ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಮತ್ತು ಶರಣಪ್ರಕಾಶ್ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.

ಬೀದರ್ (ರಹೀಮ್ ಖಾನ್, ಈಶ್ವರ ಖಂಡ್ರೆ) ಮತ್ತು ಬೆಳಗಾವಿ (ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ) ಕ್ಷೇತ್ರಗಳಲ್ಲಿ ತಲಾ ಇಬ್ಬರು ಸಚಿವರಿದ್ದರೆ, 16 ಕ್ಷೇತ್ರಗಳಲ್ಲಿ ತಲಾ ಒಬ್ಬರು ಸಚಿವರಾಗಿದ್ದಾರೆ.

ಸಚಿವ ಸ್ಥಾನ ವಂಚಿತ ಜಿಲ್ಲೆಗಳು :

ಉಡುಪಿ (ಕಾಂಗ್ರೆಸ್ ಗೆಲ್ಲಲಿಲ್ಲ), ಮಂಗಳೂರು (ಸಭಾಧ್ಯಕ್ಷ ಸ್ಥಾನ ಗಳಿಸಿತು), ಚಿಕ್ಕಮಗಳೂರು, ಚಾಮರಾಜನಗರ (ಉಪ ಸ್ಪೀಕರ್ – ಪುಟ್ಟರಂಗಶೆಟ್ಟಿ) ಕೊಡಗು, ಕೋಲಾರ, ಹಾವೇರಿ, ಬೆಂಗಳೂರು ಗ್ರಾಮಾಂತರ, ಹಾಸನ,

ಕೊಡಗು, ಹಾವೇರಿ, ಹಾಸನ, ಚಿಕ್ಕಮಗಳೂರು ಸೇರಿದಂತೆ ಕೆಲ ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ (Tweet) ಮಾಡಿ ಪ್ರತಿಕ್ರಿಯಿಸಿದ್ದಾರೆ.

ಕೆಲವು ಮಾನದಂಡಗಳನ್ನು ಅನುಸರಿಸುವಾಗ ಕೆಲವು ಪ್ರದೇಶಗಳಿಗೆ ಯಾವುದೇ ಪ್ರಾತಿನಿಧ್ಯವಿಲ್ಲ. ಉದಾಹರಣೆಗೆ, ಕೊಡಗು ಜಿಲ್ಲೆಯಲ್ಲಿ ಇಬ್ಬರೂ ಮೊದಲ ಬಾರಿಗೆ ಶಾಸಕರು.

ಹಾಗಾಗಿ ಸಚಿವ ಸಂಪುಟದಲ್ಲಿ ಪ್ರತಿನಿಧಿಸಲು ಸಾಧ್ಯವಿಲ್ಲ ಎಂದರು.

ರಶ್ಮಿತಾ ಅನೀಶ್

Exit mobile version