ಉಗ್ರರಿಗೆ ಭಯೋತ್ಪಾದಕ ಜನತಾ ಪಾರ್ಟಿ `ಪ್ಲೇಸ್ಮೆಂಟ್ ಸರ್ವಿಸ್’ ನೀಡುತ್ತಿದೆ : ಕಾಂಗ್ರೆಸ್‌

bjp

ಲಾಭವಿದ್ದರೆ ನಮ್ಮವರು, ನಷ್ಟವಿದ್ದರೆ  ನಮ್ಮವರಲ್ಲ ಇದು ಬಿಜೆಪಿ(BJP) ನೀತಿ. ಉಗ್ರರಿಗೆ ಭಯೋತ್ಪಾದಕ(Corruption) ಜನತಾ ಪಾರ್ಟಿ “ಪ್ಲೇಸ್ಮೆಂಟ್ ಸರ್ವಿಸ್” ನೀಡುತ್ತಿದೆ.

ಕಂದಹಾರ್ ಹೈಜಾಕ್ ಪ್ರಕರಣದ ವೇಳೆ ಉಗ್ರ ಮಸೂದ್ ಅಜರ್ ಬಿಡುಗಡೆ ವಿಚಾರದಲ್ಲೂ ಬಿಜೆಪಿ ಸರ್ಕಾರದ ಮೇಲೆ ಅನುಮಾನಗಳು ವ್ಯಕ್ತವಾಗಿತ್ತು.

ನಂತರ ಆತ ಜೈಶ್ ಎ ಮೊಹಮದ್ ಸಂಘಟನೆಯನ್ನು ಸ್ಥಾಪಿಸಿ 2001 ರಲ್ಲಿ ಸಂಸತ್ ಮೇಲಿನ ದಾಳಿ ಹಾಗೂ 2008 ರಲ್ಲಿ ಮುಂಬೈ(Mumbai) ಮೇಲೆ ದಾಳಿ ನಡೆಸಿ ನೂರಾರು ಜನರನ್ನು ಹತ್ಯೆ(Murder) ಮಾಡಿಸಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಕಾಂಗ್ರೆಸ್‌,  ಶ್ರೀನಗರದ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೊಹಮದ್ ಫಾರೂಖ್ ಖಾನ್ ಗೆ ಪಕ್ಷದ ಟಿಕೆಟ್ ನೀಡಿತ್ತು. ಈತ ಜಾಗತಿಕ ಉಗ್ರ ಮಸೂದ್ ಅಜರ್‌ನ ಸಹಚರ, ಈತ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಹಾಗೂ ಹರ್ಕತ್ ಉಲ್ ಮುಜಾಹಿದ್ದೀನ್ ಸಂಘಟನೆಗಳ ಸದಸ್ಯನೂ ಆಗಿದ್ದ. https://vijayatimes.com/rss-mohan-bhagwat-visit-to-bengaluru/

ಈ ವಿಚಾರ ತಿಳಿದೂ ಬಿಜೆಪಿ ಪಕ್ಷ ಈತನಿಗೆ ಟಿಕೆಟ್ ನೀಡಿತ್ತು. ಇನ್ನು ಅಸ್ಸಾಂ(Assam) ಬಿಜೆಪಿ ನಾಯಕ ನಿರಂಜನ್ ಹೊಜೈ ಸರ್ಕಾರದ ಹಣವನ್ನು ಭಯೋತ್ಪಾದಕ ಸಂಘಟನೆಗಳಿಗೆ ಕಳುಹಿಸುತ್ತಿದ್ದ, 

ಈ ರೀತಿ ₹ 1,000 ಕೋಟಿ ಹಗರಣ ನಡೆಸಿದ ಪ್ರಕರಣದಲ್ಲಿ 2017ರಲ್ಲಿ NIA ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಹಣದಲ್ಲಿ ಭಯೋತ್ಪಾದಕ ಸಂಘಟನೆಗಳು ಶಸ್ತ್ರಾಸ್ತ್ರ ಖರೀದಿಸಿ ದೇಶದ ಮೇಲೆ ದಾಳಿ ಮಾಡುತ್ತಿದ್ದವು ಎಂದು ಆರೋಪಿಸಿದೆ.

ಅಮರಾವತಿಯ ಉಮೇಶ್ ಕೊಲ್ಹೆ ಹತ್ಯೆ ಮಾಡಿದ ಇರ್ಫಾನ್ ಖಾನ್ ‘ಪಕ್ಷೇತರ ಸಂಸದೆ’ ನವನೀತ್ ರಾಣಾ ಹಾಗೂ ಅವರ ಪತಿ ರವಿ ರಾಣಾ ಅವರಿಗೆ ಅತ್ಯಾಪ್ತ. ರಾಣಾ ದಂಪತಿಗಳು ಬಿಜೆಪಿಗೆ ಅತ್ಯಾಪ್ತರು ಎನ್ನುವುದು ಜಗತ್ತಿಗೇ ತಿಳಿದ ಸಂಗತಿ. ಈ ಕೊಲೆಯಲ್ಲಿ ಭಯೋತ್ಪಾದಕ ಜನತಾ ಪಾರ್ಟಿ ಪಾತ್ರದ ಬಗೆಗಿನ ತನಿಖೆಗೆ ಹಿಂದೇಟು ಹಾಕುತ್ತಿರುವುದೇಕೆ?

ಕ್ರೋನಾಲಜಿ(Chronology) ಗಮನಿಸಿ – ನೂಪುರ್ ಶರ್ಮಾ(Nupur Sharma) ಪ್ರಚೋದನಾತ್ಮಕ ಮಾತನಾಡುತ್ತಾರೆ, ಅವರನ್ನು ಬೆಂಬಲಿಸಿ, ವಿರೋಧಿಸಿ ಅಭಿಯಾನ ನಡೆಸಲಾಗುತ್ತದೆ. ನೂಪುರ್‌ರನ್ನು ಬೆಂಬಲಿಸಿದ ಬಿಜೆಪಿ ಬೆಂಬಲಿಗರನ್ನು ಬಿಜೆಪಿ ಹಂತಕರೇ ಕೊಲ್ಲುತ್ತಾರೆ.

ಕೊಲೆ ವಿರೋಧಿಸಿ ಬಿಜೆಪಿಯೇ ಮತ್ತೆ ಅಭಿಯಾನ ನಡೆಸುತ್ತದೆ. ಇದೆಲ್ಲದರ ಸೂತ್ರದಾರ, ಭಯೋತ್ಪಾದಕ ಜನತಾ ಪಾರ್ಟಿ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ.
Exit mobile version