ದೆಹಲಿಯ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಸ್ಪರ್ಧಿಸಲಿದೆ ; ಎಎಪಿ-ಕಾಂಗ್ರೆಸ್ ಮಧ್ಯೆ ಭಾರೀ ಬಿರುಕು..!

New Delhi: ದೆಹಲಿಯ ಎಲ್ಲಾ ಏಳು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ (congress vs aap) ಅಭ್ಯರ್ಥಿಗಳು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎಂದು ಕಾಂಗ್ರೆಸ್

(Congress) ಪಕ್ಷದ ನಾಯಕಿ ಅಲ್ಕಾ ಲಂಬಾ (Alka lamba) ನೀಡಿರುವ ಹೇಳಿಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯಿಂದ ಕಾಂಗ್ರೆಸ್ ಮತ್ತು ಎಎಪಿ ನಡುವೆ

ಭಾರೀ ಬಿರುಕು ಉಂಟಾಗಿದ್ದು, ಇಂಡಿಯಾ ಒಕ್ಕೂಟದಿಂದ ಎಎಪಿ (AAP) ಹೊರಹೋಗಲಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

2024 ರ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ದೆಹಲಿ ಕಾಂಗ್ರೆಸ್ ನಾಯಕರು ಪಕ್ಷದ ಉನ್ನತ ನಾಯಕತ್ವದೊಂದಿಗೆ ಸಭೆ ನಡೆಸಿ ದೆಹಲಿ ಘಟಕದ ಚುನಾವಣಾ ಸಿದ್ಧತೆಯನ್ನು

ಪರಿಶೀಲಿಸಿದ್ದಾರೆ. ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ, ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ (Rahul Gandhi), ಮಲ್ಲಿಕಾರ್ಜುನ್ ಖರ್ಗೆ,

ಕೆಸಿ ವೇಣುಗೋಪಾಲ್ ಮತ್ತು ದೀಪಕ್ ಬಾಬಾರಿಯಾ ಅವರು ಉಪಸ್ಥಿತರಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ತಯಾರಿ ನಡೆಸುವಂತೆ ನಮಗೆ ತಿಳಿಸಲಾಗಿದೆ. ದೆಹಲಿಯ ಎಲ್ಲಾ ಏಳು

ಸ್ಥಾನಗಳಲ್ಲಿ ಸ್ಪರ್ಧಿಸಲು ನಾವು ಸಿದ್ಧರಾಗುತ್ತೇವೆ. ಲೋಕಸಭಾ ಚುಣಾವಣೆಗೆ ಕೇವಲ ಏಳು ತಿಂಗಳುಗಳು ಮಾತ್ರ ಉಳಿದಿವೆ. ಹೀಗಾಗಿ ಎಲ್ಲಾ ಏಳು ಸ್ಥಾನಗಳಿಗೆ ತಯಾರಿ ನಡೆಸುವಂತೆ ಕಾಂಗ್ರೆಸ್

ಪಕ್ಷದ ಎಲ್ಲಾ ಕಾರ್ಯಕರ್ತರಿಗೆ (congress vs aap) ತಿಳಿಸಲಾಗಿದೆ ಎಂದಿದ್ದಾರೆ.

ವಾರಣಾಸಿಯಲ್ಲಿ ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ಸ್ಪರ್ಧೆ..! ಕಾಂಗ್ರೆಸ್ ಹೊಸ ಪ್ಲ್ಯಾನ್..!

ಇನ್ನು ಕಾಂಗ್ರೆಸ್ ನಾಯಕಿಯ ಈ ಹೇಳಿಕೆಗೆ ತಿರುಗೇಟು ನೀಡಿರುವ ಎಎಪಿ ನಾಯಕಿ ಪ್ರಿಯಾಂಕಾ ಕಕ್ಕರ್ (Priyanka Kakkar), ಕಾಂಗ್ರೆಸ್ ಈಗಾಗಲೇ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳದಿರಲು

ನಿರ್ಧರಿಸಿದ್ದರೆ, ಮುಂದಿನ ‘ಇಂಡಿಯಾ’ (India) ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸುವುದರಿಂದ ನಮಗೆ ಯಾವುದೇ ಪ್ರಯೋಜನವಿಲ್ಲ. ನಾವು ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು

ನಮ್ಮ ಉನ್ನತ ನಾಯಕತ್ವ ನಿರ್ಧರಿಸುತ್ತದೆ ಎಂದಿದ್ದಾರೆ.

ಅಲ್ಕಾ ಲಂಬಾ ಹೇಳಿಕೆಯನ್ನು ತಳ್ಳಿ ಹಾಕಿರುವ ದೆಹಲಿ ಕಾಂಗ್ರೆಸ್ ಉಸ್ತುವಾರಿ ದೀಪಕ್ ಬಬಾರಿಯಾ (Deepak Babaria) , ಅಲ್ಕಾ ಲಂಬಾ ಕಾಂಗ್ರೆಸ್ ಪಕ್ಷದ ವಕ್ತಾರರಾಗಿದ್ದಾರೆ.

ಆದರೆ ಮೈತ್ರಿ ಅಂತಹ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲು ಅವರು ಅಧಿಕೃತ ವಕ್ತಾರರಲ್ಲ. ಇಂದಿನ ಸಭೆಯಲ್ಲಿ ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ನಾನು

ಉಸ್ತುವಾರಿಯಾಗಿ ಹೇಳುತ್ತಿದ್ದೇನೆ. ನಾನು ಅಲ್ಕಾ ಲಂಬಾ ಹೇಳಿಕೆಯನ್ನು ನಿರಾಕರಿಸುತ್ತೇನೆ ಎಂದಿದ್ದಾರೆ.

Exit mobile version