ಜನರು ಲಸಿಕೆ ಮತ್ತು ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಬೇಕು : ಡಾ. ಕೆ ಸುಧಾಕರ್!

health minister

ದೇಶದಲ್ಲಿ ಕೋವಿಡ್(Covid 19) ಸಾಂಕ್ರಾಮಿಕ ಖಾಯಿಲೆ ಆರ್ಭಟ ಹೆಚ್ಚುತ್ತಿದ್ದು, ಈ ಬಗ್ಗೆ ರಾಜ್ಯದ ಆರೋಗ್ಯ ಸಚಿವ(Health Minister) ಡಾ.ಕೆ ಸುಧಾಕರ್(Dr. K Sudhakar) ಮಾತನಾಡಿದ್ದು, ಜನಸಾಮಾನ್ಯರು 4ನೇ ಅಲೆ ಬರೋವರಗೂ ಕಾಯ್ತಾ ಕೂರಬೇಡಿ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಪಾಲಿಸಿ ಎಂದು ಖಡಕ್ ಸೂಚನೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಸುಧಾಕರ್, ಮಾನ್ಯ ಸಿಎಂ ಬಸವರಾಜ್ ಬೊಮ್ಮಾಯಿ ಅವರೊಡನೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದೇವೆ. ರಾಜ್ಯದ ಜನಸಾಮಾನ್ಯರು ಎಚ್ಚೆತ್ತುಕೊಳ್ಳಬೇಕು, ಕೋವಿಡ್ 4ನೇ ಅಲೆ ಬರುವವರೆಗೂ ಕಾಯ್ತಾ ಕೂರಬೇಡಿ! ಕೋವಿಡ್ ಎಷ್ಟು ವೇಗವಾಗಿ ಹರಡುತ್ತೆ ಎಂಬುದು ತಿಳಿಯಲು ಅಸಾಧ್ಯ. ಹೀಗಾಗಿ ಕೋವಿಡ್ 4ನೇ ಅಲೆ ಮುನ್ಸೂಚನೆ ಸಮೀಪಿಸುತ್ತಿರುವ ಹಿನ್ನೆಲೆ ಜನಸಾಮಾನ್ಯರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಎಂದು ಹೇಳಿದರು. ಸದ್ಯ ಮಾಸ್ಕ್ ಧರಿಸದೇ ಇದ್ದವರಿಗೆ ದಂಡ ವಿಧಿಸುವುದಿಲ್ಲ!

ತದನಂತರ ಮತ್ತೊಂದು ಸಭೆ ನಡೆಸಿ ಆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೋವಿಡ್ 4ನೇ ಅಲೆಗೆ ಮುಂಚಿತವಾಗಿ ಇಲಾಖೆ ಪೂರ್ವಸಿದ್ಧತೆಯೊಂದಿಗೆ ಸಜ್ಜಾಗಿದೆ ಎಂದು ಹೇಳಿದರು. ದೇಶದ ನವದೆಹಲಿಯಲ್ಲಿ ಈಗಾಗಲೇ ಸತತ 6ನೇ ದಿನವೂ ಕೋವಿಡ್ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಾಗುತ್ತಿದೆ. ಇತ್ತ ಕೋವಿಡ್ ಸೋಂಕಿನ ಉಗಮ ಸ್ಥಾನ ಚೀನಾದ, ಶಾಂಘೈನಲ್ಲೂ ಕೋವಿಡ್ ವ್ಯಾಪಕವಾಗಿ ಹಬ್ಬಿದ ಕಾರಣ, ಚೀನಾ ಸರ್ಕಾರ ಸಂಪೂರ್ಣ ಲಾಕ್‍ಡೌನ್ ಹೇರಿದೆ. ಸದ್ಯ ನವದೆಹಲಿಯಲ್ಲೂ ಹೀಗೆ ಮುಂದುವರಿದರೆ ಲಾಕ್‍ಡೌನ್ ಮಾಡುವ ಪರಿಸ್ಥಿತಿ ಎದುರಾಗಲಿದೆ ಎಂದು ದೆಹಲಿ ಸರ್ಕಾರ ಪರೋಕ್ಷವಾಗಿ ತಿಳಿಸಿದೆ.

ಈ ಮೂಲಕ ಕೋವಿಡ್ 4ನೇ ಅಲೆ ನಮ್ಮ ರಾಜ್ಯದಲ್ಲೂ ಅಪ್ಪಳಿಸಲಿದೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಪೂರ್ವಸಿದ್ಧತೆಯ ತಯಾರಿ ಮಾಡಿಕೊಳ್ಳುವ ಮೂಲಕ ಕೋವಿಡ್ 4ನೇ ಅಲೆಗೆ ಸಜ್ಜಾಗಿದೆ ಸರ್ಕಾರ!

Exit mobile version