ಸೋಶಿಯಲ್ ಮೀಡಿಯಾಗೆ ಕ್ರೇಜಿ಼ ಸ್ಟಾರ್ ಎಂಟ್ರಿ: ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ರವಿಚಂದ್ರನ್

ಬೆಂಗಳೂರು, ಏ. 06: ಕನ್ನಡ ಚಿತ್ರರಂಗದ ಕ್ರೇಜಿ಼ ಸ್ಟಾರ್ ನಟ ರವಿಚಂದ್ರನ್​ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಡುತ್ತಿದ್ದಾರೆ!

ಅಭಿಮಾನಿಗಳ ಪಾಲಿನ ಪ್ರೀತಿಯ ರವಿಮಾಮಾ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಆ ಮೂಲಕ ಫೇಸ್​ಬುಕ್​, ಇನ್​ಸ್ಟಾಗ್ರಾಮ್​, ಟ್ವಿಟರ್​ ಮತ್ತು ಯೂಟ್ಯೂಬ್​ ನಲ್ಲಿ ಏಕಕಾಲಕ್ಕೆ ಅಧಿಕೃತ ಖಾತೆಗಳನ್ನು ರವಿಚಂದ್ರನ್ ತೆರೆಯಲಿದ್ದಾರೆ.

ಇನ್ನೂ ರವಿಚಂದ್ರನ್ ಅವರು ಸೋಷಿಯಲ್ ಮೀಡಿಯಾಗೆ ಲಗ್ಗೆ ಇಡುತ್ತಿರುವುದು ಫ್ಯಾನ್ಸ್ ಗಳಲ್ಲಿ ಸಂಭ್ರಮ ಮೂಡಿಸಿದೆ. ಈ ಕುರಿತು ಪುಟ್ಟದೊಂದು ಟೀಸರ್ ರೂಪದ ವಿಡಿಯೋ ರಿಲೀಸ್ ಆಗಿದೆ. ಫಿಲ್ಮ್​ ಸ್ಟೈಲ್​ನಲ್ಲಿ ಸೂಚನೆ ನೀಡಿದ್ದಾರೆ. ನೆಟ್​ವರ್ಲ್ಡ್​ಗೆ ‘ಕಮಿಂಗ್​ ಸೂನ್​’ ಅಂತ 10 ಸೆಕೆಂಡ್​ ಟೀಸರ್​ ರಿವೀಲ್​ ಮಾಡಿದ್ದಾರೆ. ಇನ್ಮುಂದೆ ಡೈರೆಕ್ಟ್​ ಆಗಿ ಕ್ರೇಜಿಸ್ಟಾರ್​ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದು, ಸಿನಿಮಾದ ಬಗ್ಗೆ ಅಪ್​ಡೇಟ್​​ ಕೊಡ್ತಾರೆ.

ಕ್ರೇಜಿಸ್ಟಾರ್ ಅವರ ಡಿಜಿಟಲ್ ಲೋಕದ ಆಗಮನಕ್ಕೆ ಕನ್ನಡ ಚಿತ್ರರಂಗ ಸ್ವಾಗತ ಕೋರಿದೆ. ನಿರ್ದೇಶಕ ರಘುರಾಮ್ ಹಾಗೂ ನಟ ರವಿಶಂಕರ್ ಸೇರಿದಂತೆ ಚಂದನವನದ ತಾರೆಯರು ರವಿಚಂದ್ರನ್ ಅವರ ಆಗಮನಕ್ಕೆ ಶುಭ ಕೋರಿದ್ದಾರೆ. ಅದೇ ರೀತಿ ಸಾಕಷ್ಟು ಅಭಿಮಾನಿಗಳು ಕೂಡ ಉತ್ಸುಕರಾಗಿದ್ದಾರೆ.

https://twitter.com/RavishankarGow5/status/1379280884877074434?s=08
Exit mobile version