ಇಂದು ಐಪಿಎಲ್ 2023 ರ ಚೆನ್ನೈ Vsಗುಜರಾತ್ ಫೈನಲ್ ಪಂದ್ಯ : ಯಾರಿಗೆ ಒಲಿಯಲಿದೆ ಕಪ್‌?

IPL 2023 :ಎಲ್ಲವೂ ವೇಳಾಪಟ್ಟಿಯಂತೆ ನಡೆದಿದ್ದರೆ ಇಷ್ಟೊತ್ತಿಗೆ ಇಂಡಿಯನ್ ಪ್ರೀಮಿಯರ್ ಲೀಗ್ಗೆ ತೆರೆಬೀಳುತ್ತಿತ್ತು. ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ( GT vs CSK ) ಪೈಕಿ ಯಾವುದಾದ್ರು ಒಂದು ತಂಡ ಚಾಂಪಿಯನ್ ಆಗಿರುತ್ತಿತ್ತು.ಆದರೆ, ಭಾನುವಾರ ನರೇಂದ್ರ ಮೋದಿ (Narendra Modi) ಕ್ರೀಡಾಂಗಣದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಸುರಿದ ಭಾರೀ ಮಳೆಗೆ ಟಾಸ್ ಪ್ರಕ್ರಿಯೆ (csk vs Gujarat Titans) ಕೂಡ ನಡೆಸಲಾಗದೆ ಪಂದ್ಯ ಸಂಪೂರ್ಣ ಸ್ಥಗಿತಗೊಂಡಿತ್ತು. ಫೈನಲ್‌ ಪಂದ್ಯವನ್ನು ಸೋಮವಾರಕ್ಕೆ (ಮೇ 29) ಮುಂದೂಡಲಾಯಿತು. ಹೀಗಾಗಿ ಸಿಎಸ್ಕೆ- ಜಿಟಿ ನಡುವೆ ಇಂದು ಅಂತಿಮ ಕಾದಾಟ ನಡೆಯಲಿದೆ.


CSK ತಂಡವು ಬ್ಯಾಟಿಂಗ್ (Batting) ಮತ್ತು ಬೌಲಿಂಗ್ ವಿಭಾಗಗಳೆರಡರಲ್ಲೂ ಉತ್ತಮ ಪ್ರತಿಭೆಯನ್ನು ಹೊಂದಿದೆ.

ಅಲ್ಲದೆ ಈ ಮೊದಲು ನಡೆದ ಕ್ವಾಲಿಫೈಯರ್-1 (Qualifier-1) ಪಂದ್ಯದಲ್ಲಿ ಸಿಎಸ್‌ಕೆ ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ನೇರವಾಗಿ ಫೈನಲ್ ಪ್ರವೇಶಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ.

ಚೆನ್ನೈ ತಂಡದಲ್ಲಿ ಡೆವೋನ್ ಕಾನ್ವೆ ಮತ್ತು ರುತುರಾಯ್ ಗಾಯಕ್ವಾಡ್ ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ ಮತ್ತು ಅಜಿಂಕ್ಯಾ ರಹಾನೆಕಡೆಯಿಂದ ಸ್ಫೋಟಕ (csk vs Gujarat Titans) ಬ್ಯಾಟಿಂಗ್ ಪ್ರದರ್ಶನ ಬರುತ್ತಿದೆ.

ಐಪಿಎಲ್ ಇತಿಹಾಸದುದ್ದಕ್ಕೂ ಈ ಎರಡೂ ತಂಡಗಳು ಒಟ್ಟು ನಾಲ್ಕು ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.

ಈ ಪೈಕಿ ಮೂರು ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್ ಜಯಭೇರಿ ಭಾರಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಒಂದರಲ್ಲಿ ಮಾತ್ರ ಗೆಲುವು ಸಾಧಿಸಿತು.

ಮೊದಲ ನೋಟದಲ್ಲಿ, ಜಿಟಿ ತಂಡವು ಬಲವಾದ ದಾಖಲೆಯನ್ನು ಹೊಂದಿದೆ ಎಂದು ತೋರುತ್ತದೆ. ಹೆಚ್ಚುವರಿಯಾಗಿ,

ಇಂದಿನ ಪಂದ್ಯ ಮಳೆಯಿಂದಾಗಿ ರದ್ದಾದರೆ, ಲೀಗ್ ಹಂತದ ನಂತರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವು ವಿಜೇತರಾಗಿ ಕಿರೀಟವನ್ನು ಪಡೆಯುತ್ತದೆ.

ಅಂದರೆ ಐಪಿಎಲ್ 2023ರಲ್ಲಿ ಗುಜರಾತ್ ಟೈಟಾನ್ಸ್(Gujurat Titans) ತಂಡ ಚಾಂಪಿಯನ್ ಆಗಲಿದೆ.

ಸಿಎಸ್ಕೆ ತಂಡದಲ್ಲಿ ಮೊಯೀನ್ ಅಲಿ ಮತ್ತು ಅಂಬಟಿ ರಾಯುಡು ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರುತ್ತಿಲ್ಲ.

ಶಿವಂ ದುಬೆ ಪ್ರತಿ ಆಟದಲ್ಲೂ ಗಮನ ಸೆಳೆದಿದ್ದಾರೆ.ಇನ್ನು ಮಹೀಶಾ ತೀಕ್ಷಣ,ಆಕಾಶ್ ಸಿಂಗ್,ತುಶಾರ್ ದೇಶ್ಪಾಂಡೆ (Tusshar Deshpande) , ಮತೀಶಾ ಪತಿರಾನ,

ಮತ್ತು ಜಡೇಜಾ ಸೇರಿದಂತೆ ಸಿಎಸ್ಕೆ ಪರ ಸಾಥ್ ನೀಡುತ್ತಿದ್ದಾರೆ. ಇನ್ನುಜಡೇಜಾ ಮತ್ತು ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಫಿನಿಶಿಂಗ್ ಜವಾಬ್ದಾರಿ ಹೊತ್ತಿದ್ದಾರೆ.

ಇನ್ನು ಇಡೀ ಟೂರ್ನಿಯಲ್ಲಿ ಗುಜರಾತ್ ತಂಡ ಭರ್ಜರಿ ಆಟ ಪ್ರದರ್ಶಿಸುತ್ತಾ ಬಂದಿದೆ.

ಎಲಿಮಿನೇಟರ್ ಪಂದ್ಯದಲ್ಲಿ ನೀಡಿದ ಪ್ರದರ್ಶನ ಅದರಲ್ಲೂ ಅದ್ಭುತವಾಗಿತ್ತು. ಈ ತಂಡವು ಬ್ಯಾಟಿಂಗ್ (Batting) ಮತ್ತು ಬೌಲಿಂಗ್ ಈ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ.

ಶುಭ್ಮನ್ ಗಿಲ್ ಮತ್ತು ವೃದ್ದಿಮಾನ್ ಸಾಹ ಸ್ಫೋಟಕ ಆರಂಭ ಒದಗಿಸಿದ್ದಾರೆ.ಶುಭಮನ್ ಗಿಲ್ ಕಡೆಯಿಂದ ಈಗಾಗಲೇ 3 ಸೆಂಚುರಿ ಬಂದಿವೆ ಅಷ್ಟೇ ಅಲ್ಲದೆ ಈ ಹಿಂದೆ ನಡೆದ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದರು.

ರಶ್ಮಿತಾ ಅನೀಶ್

Exit mobile version