ಕುಡಿತ, ಧೂಮಪಾನದ ಚಟದಿಂದ ದೂರವಾಗಬೇಕಾ? ; ಹಾಗಾದ್ರೆ ಸೀತಾ ಫಲ ಹೂವಿನ ಚಮತ್ಕಾರ ತಿಳಿಯಿರಿ!

Custard Apple

ಕುಡಿತದ(Alcohal) ಚಟದಿಂದ ದೂರ ಇರಲು ನೀವು ಬಯಸಿದರೆ ಈ ಗಿಡದ ಎರಡು ಎಲೆಯ ಮೊಗ್ಗನ್ನ ಸೇವಿಸುವ ಅಭ್ಯಾಸ ರೂಡಿಸಿಕೊಳ್ಳಿ ಸಾಕು! ಈ ಜನ್ಮ ಮಾತ್ರ ಅಲ್ಲ, ಮುಂದಿನ ಜನ್ಮದಲ್ಲೂ ಈ ಚಟದಿಂದ ದೂರ ಇರುತ್ತೀರಾ.

ಧೂಮಪಾನ(Smoking), ಮದ್ಯಪಾನಕ್ಕೆ(Alcohalic) ದಾಸರಾಗಿರುವವರನ್ನು ಹೊರತರಲು ಮನೆಯವರು ಹರಸಾಹಸ ಪಡುತ್ತಿದ್ದರೆ, ಈ ಚಿಕ್ಕ ಪರಿಹಾರವನ್ನು ಅನುಸರಿಸಿ.

ಎಲ್ಲ ಕಡೆಯಲ್ಲಿಯೂ ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂಬ ಸೂಚನೆಯ ನಾಮಫಲಕ ಇರುತ್ತದೆ. ಆದ್ರೆ, ದೇಹಕ್ಕೆ ಇದು ಹಾನಿಕಾರಕ ಎಂಬುದು ಗೊತ್ತಿದ್ದರೂ ಸಹ ಅನೇಕ ಮಂದಿ ಇಂತಹ ತಪ್ಪು ದಾರಿ ಹಿಡಿಯುತ್ತಿದ್ದಾರೆ.

ಅಂದರೆ ನಿಜಕ್ಕೂ ನಮ್ಮ ಭಾರತ ದೇಶದ ಯುವಜನತೆ ಇಂದು ಎಂತಹ ಸ್ಥಿತಿಯಲ್ಲಿದ್ದಾರೆ ಎಂಬುದು ಗಮನಾರ್ಹ. ಇತ್ತೀಚಿನ ಸಮೀಕ್ಷೆಯಲ್ಲಿ(Survey) ಕರ್ನಾಟಕದಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ದೇಶದಲ್ಲೇ ಪ್ರಥಮ ಸ್ಥಾನದಲ್ಲಿ ಕರ್ನಾಟಕ ಇದೆ ಎಂಬುದು ಅಶ್ಚರ್ಯಕರ!

ಹಾಗಾಗಿ ನಮ್ಮ ದೇಶ ಯಾವ ಸ್ಥಿತಿಗೆ ಬರುತ್ತಿದೆ ಅಂತ ಒಮ್ಮೆ ಯೋಚಿಸಿದರೆ ನಿಜಕ್ಕೂ ಇದೆಲ್ಲವೂ ಎಲ್ಲಿಗೆ ಹೋಗಿ ಮುಟ್ಟುತ್ತದೋ ಎಂಬುದು ಒಂದು ಲೆಕ್ಕಾಚಾರ. ಇನ್ನು ವ್ಯಸನಿಗಳು ಈ ದುಶ್ಚಟದಿಂದ ದೂರ ಉಳಿಯಲು ಹಲವು ಬಗೆಯ ಮಾತ್ರೆ, ಚಿಕಿತ್ಸೆಯನ್ನು ಪಡೆಯುತ್ತಾರೆ.

ಈ ರೀತಿ ಮಾಡುವುದರಿಂದ ಆರೋಗ್ಯದ ಮೇಲೆ ಭಾರಿ ಪ್ರಭಾವ ಬೀರಬಹುದು. ಹಾಗಾಗಿ ಮನೆಯಲ್ಲಿಯೇ ಸರಳ ಪರಿಹಾರವನ್ನು ಮಾಡಬಹುದು. ಧೂಮಪಾನ ಸೇರಿದಂತೆ ದುಶ್ಚಟ ತ್ಯಜಿಸಲು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಮನೆಮದ್ದನ್ನು ಇಲ್ಲಿ ತಿಳಿಸಲಾಗಿದೆ ಅನುಸರಿಸಿ.

ಹೌದು, ಹಳೇಕಾಲದಲ್ಲಿ ಪಾಲಿಸುತ್ತಿದ್ದ ಈ ಮನೆಮದ್ದನ್ನು(Home Remedies) ನೀವು ಕೂಡ ಪಾಲಿಸುವುದರಿಂದ ಇಂಥ ದುಶ್ಚಟಗಳಿಂದ ದೂರ ಉಳಿಯಬಹುದು. ಈ ಸೀತಾಫಲ ಗಿಡದಲ್ಲಿ(Custard Plant) ಬಿಡುವ ಹೂವಿನ ಮೊಗ್ಗುಗಳನ್ನು ಒಣಗಿಸಿ, ಪುಡಿ ಮಾಡಿ ಅದನ್ನು ವ್ಯಸನರಿಗೆ ಸೇವಿಸಲು ನೀಡಬೇಕು.
https://vijayatimes.com/samantha-ramsdell-big-mouth-women/
 ಇದರಿಂದ ಆ ದಿನ ಸ್ವಲ್ಪ ಭೇದಿಯಾಗುವ ಸಾಧ್ಯತೆ ಇರುತ್ತದೆ. ಆದರೆ ಯಾವುದೇ ತೊಂದರೆಯಾಗುವುದಿಲ್ಲ ಮತ್ತು ಅವರು ಕುಡಿದಾಗ ಅಥವಾ ಧೂಮಪಾನ ಮಾಡಿದಾಗ ಅವರಿಗೆ ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಆಗ ಅವರು ಇಂತಹ ಕೆಟ್ಟ ಚಟಗಳಿಂದ ನಿಧಾನವಾಗಿ ಹೊರಬರುತ್ತಾರೆ.
ಈ ಸರಳ ಮತ್ತು ಪ್ರಭಾವ ಮನೆಮದ್ದು ಕೇವಲ ಕುಡಿತ ಬಿಡಿಸುವುದಕ್ಕೆ ಮಾತ್ರವಲ್ಲ, ಯಾರಿಗೆ ಹಲ್ಲುನೋವು ಕಾಣಿಸಿಕೊಳ್ಳುತ್ತದೋ, ಅಂಥವರು ಸೀತಾಫಲ ಎಲೆಯನ್ನು ತಮ್ಮ ಹಲ್ಲು ನೋವಿನ ಶಮನಕ್ಕಾಗಿ ಬಳಸಬಹುದು. 
ಅದರ ಎಲೆಗಳನ್ನು ಜಗಿಯುವುದರಿಂದ, ಹಲ್ಲು ನೋವು ಶಮನವಾಗುತ್ತದೆ ಮತ್ತು ಬಾಯಿಯ ವಾಸನೆ ಇಂತಹ ಸಮಸ್ಯೆಗಳಿದ್ದರೂ ದೂರವಾಗುತ್ತದೆ. ಈ ರೀತಿಯಾಗಿ ಈ ಸರಳ ಮನೆಮದ್ದನ್ನು ಪಾಲಿಸುವ ಮೂಲಕ ಯಾವುದೇ ಅಡ್ಡಪರಿಣಾಮಗಳಿಲ್ಲದೆ ದುಶ್ಚಟಗಳನ್ನು ತ್ಯಜಿಸಬಹುದು.
Exit mobile version