Mumbai : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)(IIT Bombay) ಬಾಂಬೆಯ 18 ವರ್ಷದ ವಿದ್ಯಾರ್ಥಿ ದರ್ಶನ್ ಸೋಲಂಕಿ(Darshan Solanki) ಹಾಸ್ಟೆಲ್ ಕಟ್ಟಡದ 7 ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (Dalit student commits suicide) ಮಾಡಿಕೊಂಡಿದ್ದಾನೆ. ಈ ಘಟನೆ ಇದೀಗ ಭಾರೀ ವಿವಾದ ಉಂಟು ಮಾಡಿದೆ.
ದರ್ಶನ್ ಸೋಲಂಕಿ ಆತ್ಮಹತ್ಯೆಯ ನಂತರ ಅನೇಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು,
ತುಳಿತಕ್ಕೊಳಗಾದ ಜಾತಿಗಳು ಮತ್ತು ಕಡಿಮೆ ಆದಾಯದ ಕುಟುಂಬಗಳಿಂದ ಬಂದಿರುವ ವಿದ್ಯಾರ್ಥಿಗಳು ಈ ಕ್ಯಾಂಪಸ್ನಲ್ಲಿ(Campus) ಅಪಾರ ಕಿರುಕುಳ ಮತ್ತು ತಾರತಮ್ಯವನ್ನು ಎದುರಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ಧಾರೆ.
ಇನ್ನು ಆತ್ಮಹತ್ಯೆ ಮಾಡಿಕೊಂಡಿರುವ ದರ್ಶನ್ ಸೋಲಂಕಿ ಬಿ.ಟೆಕ್ (ಕೆಮಿಕಲ್)(B.Tech Chemical) ಕೋರ್ಸ್ನ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದು,
ಗುಜರಾತ್ನ(Gujarat) ಅಹಮದಾಬಾದ್ ಮೂಲದವನು. ಹಾಸ್ಟೇಲ್ನ ಭದ್ರತಾ ಸಿಬ್ಬಂದಿ ಗಮನಿಸಿದಾಗ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಎನ್ನಲಾಗಿದೆ.
ಇನ್ನು ವಿದ್ಯಾರ್ಥಿ ಯಾವುದೇ ಆತ್ಮಹತ್ಯೆ ಪತ್ರವನ್ನು ಬಿಟ್ಟು ಹೋಗಿಲ್ಲ. ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ನಾವು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದೇವೆ.
ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಬುಧನ್ ಸಾವಂತ್ ತಿಳಿಸಿದ್ದಾರೆ.
ಈ ಕುರಿತು ಮಾದ್ಯಮ(Media) ಹೇಳಿಕೆ ಬಿಡುಗಡೆ ಮಾಡಿರುವ ಕಾಲೇಜು ಆಡಳಿತ ಮಂಡಳಿ, “ನಾವು ನಿನ್ನೆ ನಮ್ಮ ಪ್ರಥಮ ವರ್ಷದ ಬಿ.ಟೆಕ್ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರನ್ನು ಕಳೆದುಕೊಂಡಿದ್ದೇವೆ.
ಇದು ಅವರ ಕುಟುಂಬಕ್ಕೆ ಮತ್ತು ಐಐಟಿಬಿ(IITB) ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ನಾವು ಪ್ರಾರ್ಥಿಸುತ್ತೇವೆ.
ಈ ಕಷ್ಟದ ಸಮಯದಲ್ಲಿ ಸಂಸ್ಥೆಯು ಅವರ ಕುಟುಂಬದೊಂದಿಗೆ ಇದೆ. ದರ್ಶನ್ ಅವರ ಜೀವನದ ದುರಂತ ನಷ್ಟಕ್ಕೆ ನಾವು ತೀವ್ರವಾಗಿ ಶೋಕಿಸುತ್ತೇವೆ.
ನಮ್ಮ ವಿದ್ಯಾರ್ಥಿಗಳನ್ನು ಬೆಂಬಲಿಸಲು ಸಂಸ್ಥೆ ಮತ್ತು ವಿದ್ಯಾರ್ಥಿ ಮಾರ್ಗದರ್ಶಕರು (Dalit student commits suicide) ಪ್ರಯತ್ನಿಸಿದರೂ ಇಂತಹ ನಷ್ಟವನ್ನು ತಡೆಯಲು ಸಾಧ್ಯವಾಗದಿರುವುದು ದುರದೃಷ್ಟಕರವಾಗಿದೆ.
ಘಟನೆಯ ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನು ಎಸ್ಸಿ/ಎಸ್ಟಿ/ಒಬಿಸಿ (SC/ST/OBC)ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಎದುರಿಸುತ್ತಿರುವ ವಾಸ್ತವಗಳನ್ನು ಅರ್ಥಮಾಡಿಕೊಳ್ಳುವಷ್ಟು ಆಡಳಿತ ಮಂಡಳಿಯು ಸಂವೇದನಾಶೀಲರಾಗಿಲ್ಲ ಎಂದು ವಿದ್ಯಾರ್ಥಿ ಸಮೂಹವು ಐಐಟಿ-ಬಾಂಬೆಯ ಆಡಳಿತ ಮಂಡಳಿ ವಿರುದ್ದ ಕಿಡಿಕಾರಿದೆ.