‘ಡೆಡ್ಲಿ ಟೀ’ಯ ಡರ್ಟಿ ಸೀಕ್ರೆಟ್‌ ತಿಳಿಯಲೇ ಬೇಕು: 3 ಕಪ್‌ಗಿಂತ ಹೆಚ್ಚು ಕಾಫಿ ಕುಡಿದ್ರೆ ಕಾದಿದೆ ಅಪಾಯ

Deadly Tea effect

Health : ಟೀ, ಕಾಫಿ (Deadly Tea effect) ಪ್ರಿಯರೇ ಎಚ್ಚರ ! ಕಾಫಿ, ಟೀ ಕುಡಿಯೋ ಚಟ ಬಿಟ್ಬಿಡಿ ! ಇದನ್ನು ಎಚ್ಚರಿಕೆ ಅಂತಾದ್ರೂ ತಿಳ್ಕೊಳ್ಳಿ ಅಥವಾ ಸಲಹೆ ಅಂತಾದ್ರೂ ತಿಳ್ಕೋಳಿ.

ಆದ್ರೆ ಲೆಕ್ಕ ತಪ್ಪಿ ಟೀ,ಕಾಫಿ ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಗೊತ್ತಾ? ಯಾಕಂದ್ರೆ ಕಾಫಿ, (Deadly Tea effect) ಟೀಯೊಳಗಿದೆ 2 ಡೆಡ್ಲಿ ಅಂಶಗಳು.

ಸಿಹಿ ವಿಷ ಸಕ್ಕರೆ (Sugar) ಮತ್ತು ಕಿಕ್‌ ಕೊಡೋ ಕಿಲ್ಲರ್‌ ಕೆಫಿನ್‌ಯಸ್‌, ಚಹಾ ಎಲೆ ಔಷಧಿ ಗುಣಗಳನ್ನು ಹೊಂದಿರುವಂಥದ್ದೇ. ಆದ್ರೆ ಇದನ್ನು ಸಂಸ್ಕರಿಸಿ ಬಾಯಿಗೆ ರುಚಿ ಕೊಡೋ ರೀತಿ ತಯಾರಿಸೋ ಟೀ ಇದೆಯಲ್ಲ ಅದು ಆರೋಗ್ಯಕ್ಕಿಂತ ಅನಾರೋಗ್ಯವನ್ನೇ ತರುತ್ತೆ.

ದಿನಕ್ಕೆ 2 ಕಪ್‌ಗಿಂತ ಜಾಸ್ತಿ ಟೀ, ಮೂರು ಕಪ್‌ಗಿಂತ ಹೆಚ್ಚು ಕಾಫಿ ಕುಡಿದ್ರೆ ನಿಮ್ಮ ಹೃದಯ ಬಡಿತ ಹೆಚ್ಚುತ್ತೆ, ತಲೆನೋವು ಪ್ರಾರಂಭ ಆಗುತ್ತೆ,

ಇದನ್ನೂ ನೋಡಿ : https://fb.watch/hps_vRXX6z/ Dangerous Tea! ಡೆಡ್ಲಿ ಟೀ ! ಆರೋಗ್ಯಕ್ಕೆ ಬಹಳ ಕೆಟ್ಟದು ಟೀ, ಕಾಫಿ.

ಕಿರಿಕಿರಿ, ಡಿಪ್ರೆಷನ್‌ (Depression), ಗೊಂದಲ ಮುಂತಾದ ಸಮಸ್ಯೆಗಳು ಕಾಡಲಾರಂಭಿಸುತ್ತೆ. ಇನ್ನು ದಿನಕ್ಕೆ ದಿನಕ್ಕೆ ಐದಕ್ಕಿಂತ ಜಾಸ್ತಿ ಕಪ್‌ ಕುಡಿದ್ರೆ ನೀವು ಕಾಫಿ, ಟೀಯ ದಾಸರಾಗ್ತಿರ.

ಈ ಚಟ ಮುಂದುವರಿದ್ರೆ ಹೃದಯಾಘಾತ (heart attack), ಮೆದುಳು ನಿಷ್ಕ್ರಿಯಗೊಳ್ಳುವುದು, ನಿದ್ರಾಹೀನತೆ, ಡಯಾಬಿಟೀಸ್‌ ಹೀಗೆ ಸಾಲು ಸಾಲು ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ನಾವು ನಿತ್ಯ ಕುಡಿಯೋ ಟೀ, ಕಾಫಿ ಇಷ್ಟೊಂದು ಅಪಾಯಕಾರಿಯಾ? ಇಷ್ಟೊಂದು ಅಪಾಯಕಾರಿಯಾಗಲು ಕಾರಣ ಏನು? ಅನ್ನೋದನ್ನು ನೀವು ತಿಳಿದುಕೊಳ್ಳಲೇಬೇಕು. ಬರೀ ಹೊಟ್ಟೆಯಲ್ಲಿ ಟೀ ಕಾಫಿ ಕುಡಿಯೋದು ವಿಷಕ್ಕೆ ಸಮ!: ಬೆಡ್‌ ಕಾಫಿ, ಬೆಡ್‌ ಟೀ ಕುಡಿಯುವವರೇ ಎಚ್ಚರ!

ಖಾಲಿ ಹೊಟ್ಟೆಯಲ್ಲಿ ಕೆಫಿನ್ (Caffeine) ಅಂಶ ಹೊಂದಿರುವ ಕಾಫಿ ಟೀ ಕುಡಿದ್ರೆ ಅದು ವಿಷವಾಗಬಹುದು ಜೋಕೆ.

ಆಹಾರ ತಜ್ಞರೇ ಹೇಳುವ ಪ್ರಕಾರ ಬೆಳಿಗ್ಗೆ, ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಎದ್ದ ತಕ್ಷಣ ಬಾಯಿ ಸ್ವಚ್ಛ ಮಾಡಿಕೊಳ್ಳದೆ ಕುಡಿಯುವ ಟೀ,ಕಾಫಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.

ಮುಂಜಾನೆ ಹೊಟ್ಟೆ ಖಾಲಿಯಾಗಿರುವುದರಿಂದ ಹೊಟ್ಟೆಯಲ್ಲಿನ ಜೀರ್ಣಕ್ರಿಯೆಗೆ(digestion) ಸಹಕಾರಿಯಾಗುವಂತಹ ಆಮ್ಲಗಳು ತುಂಬಾ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗಿರುತ್ತದೆ. ಈ ಆಮ್ಲದ ಅಂಶಗಳಿಗೆ ಕಾಫಿ ಅಥವಾ ಚಹಾದ ಕೆಫೀನ್ ಅಂಶ ಹೋಗಿ ಸೇರಿದರೆ ಅಜೀರ್ಣತೆ ಕಾಡುತ್ತೆ.

ಇದು ದೀರ್ಘ ಕಾಲದಲ್ಲಿ ನಾನಾ ಜಠರ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಕೋಪ, ಕಿರಿಕಿರಿ, ಡಿಪ್ರೆಷನ್ ಕಾಡುತ್ತೆ: ಇನ್ನು ಕಾಫಿ ಅಥವಾ ಚಹಾ ಒಳಗಿನ ಕೆಫೆನ್‌ ಕೆಲವರಲ್ಲಿ ಚಡಪಡಿಕೆ, ಕೋಪ, ಕಿರಿಕಿರಿ ಉಂಟು ಮಾಡುತ್ತೆ.

ಇದೊಂದು ಮಾದಕ ದ್ರವ್ಯವಾಗಿರುವುದರಿಂದ ತಾತ್ಕಾಲಿಕ ಸುಖಾನುಭವ ಕೊಡುತ್ತೆ. ಹಾಗಾಗಿ ಟೀ ಕಾಫಿ ಕುಡಿಯದಿದ್ರೂ ಕಿರಿಕಿರಿ, ಚಡಪಡಿಕೆ, ಕೋಪ ಬರುತ್ತೆ.

ಇದನ್ನೂ ಓದಿ : https://vijayatimes.com/top-10-football-players/

ಇನ್ನೊಂದು ವಿಚಾರ ಗೊತ್ತಾ? ಒಂದು ಕಪ್ ಕಾಫಿಯಲ್ಲಿ 60 ರಿಂದ 70 ಗ್ರಾಮ ನಷ್ಟು ಕೆಫೆನ್ಸ್ ಇರುತ್ತೆ. ಈ ಕೆಫೀನ್ ವ್ಯಕ್ತಿಯ ದೇಹದಲ್ಲಿ ಡೋಪಮೈನ್ ಉತ್ಪಾದನೆಯನ್ನು ಹೆಚ್ಚಿಸುತ್ತೆ. ಕಾಫಿಯನ್ನು ಸೇವಿಸುವ ಜನರು ಹೆಚ್ಚಾಗಿ ಕಿರಿಕಿರಿ, ಕೋಪಕ್ಕೆ ಒಳಗಾಗಲು ಇದೇ ಕಾರಣ.

ಕಬ್ಬಿಣಾಂಶದ ಕೊರತೆಯಾಗುತ್ತೆ !: ನೆನಪಿರಲಿ ಸ್ನೇಹಿತ್ರೆ, ಪದೇ ಪದೇ ಟೀ ಕುಡಿಯುವುದರಿಂದ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ. ಚಹಾ ಎಲೆಗಳಲ್ಲಿ ಟ್ಯಾನಿನ್ ಎಂಬ ವಸ್ತುವಿದೆ.

ಅದು ದೇಹದಲ್ಲಿ ಕಬ್ಬಿಣದ ಅಂಶಗಳಿಗೆ (Iron content) ತೊಂದರೆ ಮಾಡುತ್ತದೆ ಮತ್ತು ಅವುಗಳನ್ನು ಜೀರ್ಣಾಂಗ ವ್ಯವಸ್ಥೆಯಿಂದ ತೆಗೆದುಹಾಕುತ್ತವೆ. ಇದರಿಂದ ಕಬ್ಬಿಣದ ಕೊರತೆ ಉಂಟಾಗುತ್ತದೆ ಮತ್ತು ರಕ್ತಹೀನತೆ ಉಂಟಾಗುತ್ತದೆ.

ಹಲ್ಲು ಸವೆಯುತ್ತೆ ಗೊತ್ತಾ?: ಇನ್ನೊಂದು ಪ್ರಮುಖ ವಿಚಾರ ಗೊತ್ತಾ? ಟೀ ಅಥವಾ ಕಾಫಿ ಕುಡಿದಾಗ ಇದರಲ್ಲಿರುವ ಸಕ್ಕರೆ ಬಾಯಿಯ ಲಾಲಾರಸವನ್ನು ಒಡೆದು ಆಮ್ಲೀಯವನ್ನಾಗಿಸುತ್ತದೆ. ಈ ಆಮ್ಲದ ಪ್ರಭಾವದಿಂದ ಹಲ್ಲುಗಳು ವೇಗವಾಗಿ ಸವೆಯುತ್ತವೆ. ಹುಳುಕಿನ ಸಮಸ್ಯೆಯನ್ನೂ ಹೆಚ್ಚಿಸುತ್ತೆ.

ಅತಿಯಾಗಿ ಕಾಫಿ ಕುಡಿದ್ರೆ ಜಠರ ಸಮಸ್ಯೆ ಕಾಡಬಹುದು: ಕಾಫಿಯನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ.

ಕಾಫಿ ಕುಡಿಯುವುದರಿಂದ ಗ್ಯಾಸ್ಟ್ರಿನ್ (Gastrin) ಎಂಬ ಹಾರ್ಮೋನ್ (hormone) ಬಿಡುಗಡೆಯಾಗುತ್ತದೆ. ಇದು ಕರುಳಿನ ಚಟುವಟಿಕೆಯನ್ನು ಹೆಚ್ಚಿಸಿ ಜಠರ ಸಮಸ್ಯೆಗೆ ಕಾರಣವಾಗುತ್ತೆ.


ಚಹಾದಿಂದ ಅನ್ನನಾಳದ ಕ್ಯಾನರ್‌: ಯಾವತ್ತೂ ಖಾಲಿ ಹೊಟ್ಟಿಗೆ ಬಿಸಿ ಬಿಸಿಯಾದ ಟೀ ಕುಡಿಲೇ ಬೇಡಿ. ಯಾಕಂದ್ರೆ ಖಾಲಿ ಹೊಟ್ಟೆಗೆ ತುಂಬಾ ಬಿಸಿಯಾದ ಚಹಾ ಕುಡಿದ್ರೆ ಅದರಿಂದ ಅನ್ನನಾಳದ ಕ್ಯಾನ್ಸರ್ (Esophageal cancer) ಬರಬಹುದು.

ಅಷ್ಟೇ ಅಲ್ಲ ಬಿಸಿ ಟೀ ಕುಡಿಯೋದ್ರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವು ಹೆಚ್ಚಾಗುವುದು ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

ಇದನ್ನೂ ನೋಡಿ : https://fb.watch/htluWyZbgo/ ಮೆಸ್ಸಿ ಅಂದ್ರೆ ಮ್ಯಾಜಿಕ್‌. Messi Magic.


ಡಯಾಬಿಟೀಸ್‌ (Diabetes), ಬೊಜ್ಜು ಬರಬಹುದು; ನಾವು ಟೀ ಕಾಫಿಗೆ ರುಚಿ ಬರಲು ಭರ್ಜರಿ ಸಕ್ಕರೆ ಹಾಕ್ತೀವಿ. ಆದ್ರೆ ಈ ಸಕ್ಕರೆ ಎಷ್ಟು ಅಪಾಯಕಾರಿ ಅನ್ನೋದನ್ನು ನಿಮಗೆ ಈ ಹಿಂದಿನ ಎಪಿಸೋಡ್‌ಗಳಲ್ಲೂ ಸಾಕಷ್ಟು ಬಾರಿ ತಿಳಿಸಿದ್ವಿ.

ಹೆಚ್ಚೆಚ್ಚು ಸಕ್ಕರೆ ಸೇವಿಸಿದ್ರೆ ಡಯಾಬಿಟೀಸ್‌ ಬರೋದು ಗ್ಯಾರಂಟಿ. ಒಂದು ಕಪ್‌ ಟೀ 40 ಕ್ಯಾಲೋರೀಸ್‌ಗೆ ಸಮ. ಹಾಗಾಗಿ ಹೆಚ್ಚು ಟೀ, ಕಾಫಿ ಕುಡಿದ್ರೆ ಬೊಜ್ಜಿನ ಸಮಸ್ಯೆವುಂಟಾಗಿ ದೇಹದ ತಾಳಮೇಳವೇ ತಪ್ಪಿಹೋಗುತ್ತೆ.

ಇದನ್ನೂ ಓದಿ : https://vijayatimes.com/messi-fifa-world-cup-2022/

ದೇಹಕ್ಕೆ ಇಷ್ಟೊಂದು ಸಮಸ್ಯೆ ತರಬಲ್ಲ ಟೀ, ಕಾಫಿ ಕುಡೀಬೇಕಾ? ಅನ್ನೋ ನಿರ್ಧಾರ ಈಗ ನೀವು ಮಾಡಿ. ಟೀ, ಕಾಫಿ ಮದ್ಯದಂತೆ ಒಂದು ವ್ಯಸನ.

ಅದರಿಂದ ಒಂದೇ ಸಲ ಹೊರ ಬರಲು ಸಾಧ್ಯವಿಲ್ಲ, ಹಾಗಾಗಿ ನೀವು ಈ ಸಮಸ್ಯೆಗಳಿಂದ ದೂರ ಆಗ್ಬೇಕಾದ್ರೆ ನೀವು ಕುಡಿಯೋ ಟೀ ಕಾಫಿ ಪ್ರಮಾಣವನ್ನು ನಿಧಾನಕ್ಕೆ ಕಡಿಮೆ ಮಾಡುತ್ತಾ ಬನ್ನಿ.

ಟೀ ಕಾಫಿ ಬದಲು ಕಷಾಯ ಅಥವಾ ಗಿಡಮೂಲಿಕೆಗಳು, ಬರೀ ಟೀ ಎಲೆಯುಳ್ಳ ಗ್ರೀನ್ ಟೀ ಕುಡಿಯಿರಿ. ಸಕ್ಕರ ಬಳಕೆ ಬೇಡವೇ ಬೇಡ. ಆರೋಗ್ಯಕರ ಪೇಯ ಕುಡಿದು ಖುಷಿ ಖುಷಿಯಾಗಿರಿ. ನೂರು ವರುಷ ಬಾಳಿ.
Exit mobile version