ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ

ದೇಶದಲ್ಲಿ ಹಣದುಬ್ಬರದ ಮಟ್ಟವು ಹೆಚ್ಚುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರವು ಅಬಕಾರಿ ಸುಂಕ ಕಡಿತಗೊಳಿಸುವ ಸಲುವಾಗಿ ಗ್ಯಾಸ್ ಸಿಲಿಂಡರ್ ಮೇಲೆ ರೂ.200 ಸಬ್ಸಿಡಿ ಘೋಷಸಿದೆ.

ಕಳೆದ ಜುಲೈ 2022 ರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 30ರಷ್ಟು ಕಡಿಮೆಯಾಗಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.

ಕೇಂದ್ರ ಸರ್ಕಾರ LPG ಗ್ಯಾಸ್ ಸಿಲಿಂಡರ್ ಮೇಲೆ ರೂ.200 ಸಬ್ಸಿಡಿ ಘೋಷಿಸಿದೆ ಆದರೆ ಈ ಸಬ್ಸಿಡಿ ಎಲ್ಲರಿಗೂ ಅನ್ವಯವಾಗುವುದಿಲ್ಲ. ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಯೋಜನೆಯಡಿಯಲ್ಲಿ ಮಾತ್ರ ಈ ಸಬ್ಸಿಡಿ ಲಭ್ಯ.

ಮುಂಬರುವ ಹೊಸವರ್ಷದಲ್ಲಿ ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆಯಲ್ಲಿ ಬಿಗ್ ಸರ್ಪ್ರೈಸ್ ಕೊಡಬಹುದು ಎಂದು ನಿರೀಕ್ಷಿಸಲಾಗಿದೆ.

ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆಯನ್ನು ಆಯಾಯ ಕಂಪನಿಗಳು ನಿರ್ಧರಿಸಬೇಕು ಎಂಬ ಹಕ್ಕನ್ನು ನೀಡಿದೆ. ಆದರೆ ಕಳೆದ 6 ಜುಲೈ 2022 ರಿಂದ ಕೆಲವು ಕಂಪನಿಗಳು ಇಂತಹ ಯಾವುದೇ ಬದಲಾವಣೆಗಳನ್ನು ಜಾರಿಗೆ ತಂದಿರಲಿಲ್ಲ.

ಮುಂದಿನ ವರ್ಷವಾದರೂ ಎಲ್ಪಿಜಿ ಮೇಲೆ ರಿಯಾಯಿತಿ ಸಿಗಬಹುದಾ? ಕಾದು ನೋಡಬೇಕಾಗಿದೆ.

Exit mobile version