ಧ್ರುವನಾರಾಯಣ್ ಪತ್ನಿ ವೀಣಾ ನಿಧನ ; ತಿಂಗಳೊಳಗೆ ಪತಿ, ಪತ್ನಿ ಸಾವು

Mysore : ಕಳೆದ ಮಾರ್ಚ್‌ 11 ರಂದು ಮಾಜಿ ಸಂಸದ ಕಾಂಗ್ರೆಸ್‌ನ (Congress) ಹಿರಿಯ ನಾಯಕ ದ್ರುವನಾರಾಯಣ್ (Druvanarayan) ಅವರು ನಿಧನ ಹೊಂದಿದರು. ಇವರ ನಿಧನದಿಂದ ತೀವ್ರ ನೊಂದಿದ್ದ ಅವರ ಪತ್ನಿ ವೀಣಾ (Veena) ಅವರು ಇಂದು( ಶುಕ್ರವಾರ) ಮೈಸೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಒಂದು ತಿಂಗಳೊಳಗಾಗಿ ಪತಿ ಮತ್ತು ಪತ್ನಿ ನಿಧನ ಹೊಂದಿದ್ದು ಈಗ ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ .
ಅನಾರೋಗ್ಯದಿಂದ ಬಳಲುತ್ತಿದ್ದ ಧ್ರುವನಾರಾಯಣ ಅವರು ಬ್ರೈನ್ ಟ್ಯೂಮರ್​​​ನಿಂದಾಗಿ ಸುಮಾರು 10 ವರ್ಷಗಳಿಂದ ಹಾಸಿಗೆ ಹಿಡಿದಿದ್ದರು ಎಂದು ಹೇಳಲಾಗಿದೆ.

ಇತ್ತೀಚೆಗೆ, ಅಂದರೆ ಮಾರ್ಚ್​ 11 ರಂದು ಅವರ ಪತಿ ಆರ್‌.ಧ್ರುವನಾರಾಯಣ ಅವರು ಹೃದಯಾಘಾತದಿಂದ (heart attack) ಮೃತಪಟ್ಟಿದ್ದರು. ಈ ಸಾವಿನಿಂದಾಗಿ ವೀಣಾ ಅವರು ಮಾನಸಿಕವಾಗಿ ಬಹಳಷ್ಟು ನೊಂದಿದ್ದರಿಂದ ಇವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ವೀಣಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಲಿಸದೆ ಮೈಸೂರಿನ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರು.

ಇದನ್ನೂ ಓದಿ : https://vijayatimes.com/manish-questioned-modi/

ಧ್ರುವನಾರಾಯಣ ಅವರ ಹುಟ್ಟೂರಾದ ಚಾಮರಾಜ ತಾಲೂಕಿನ (Chamaraja Taluk) ಹೆಗ್ಗವಾಡಿ ಗ್ರಾಮದಲ್ಲಿ ಇಂದು ಸಂಜೆ ವೀಣಾ ಅವರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ. ಧ್ರುವನಾರಾಯಣ ಅವರ ಅಂತ್ಯಕ್ರಿಯೆಯನ್ನು ಕೂಡ ಇದೇ ಗ್ರಾಮದಲ್ಲಿ ನಡೆಸಲಾಗಿತ್ತು. ಇದೀಗ ಧ್ರುವನಾರಾಯಣ ಅವರ ಸಮಾಧಿ ಪಕ್ಕದಲ್ಲಿಯೇ ವೀಣಾ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಜನಪರ ನಾಯಕ ಧ್ರುವನಾರಾಯಣ್ ಅವರು ಚಾಮರಾಜನಗರ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ (Assembly election) ನಂಜನಗೂಡು ಕ್ಷೇತ್ರದಿಂದ (Nanjangudu Constituency) ಕಾಂಗ್ರೆಸ್‌ ಅಭ್ಯಥಿಯಾಗಿ ಸ್ಪರ್ಧಿಸುವ ಆಲೋಚನೆಯಲ್ಲಿ ಇದ್ದರು. ಆದರೆ ಅವರ ನಿಧನದ ಬಳಿಕ ಧ್ರುವನಾರಾಯಣ ಅವರ ಪುತ್ರ ದರ್ಶನ್ ಅವರಿಗೆ ಕಾಂಗ್ರೆಸ್‌ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ​ಟಿಕೆಟ್​ ನೀಡಿ ಕಣಕ್ಕಿಳಿಸಿದೆ .

Exit mobile version