ಕುಮಾರಸ್ವಾಮಿ ನಿರ್ಧಾರಕ್ಕೆ ರೇವಣ್ಣ ಪುತ್ರರ ಅಪಸ್ವರ ; ಗೌಡರ ಕುಟುಂಬದೊಳಗೆ ರಾಜಕೀಯ ಕಲಹ

Hassan :  ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಸಮೀಕ್ಷೆಗಳನ್ನು ನಡೆಸಿ, ಪ್ರತಿ ಕ್ಷೇತ್ರದ ಮೇಲೂ ಗಮನ ಕೇಂದ್ರೀಕರಿಸಿ ತಂತ್ರ ಹೆಣೆಯುತ್ತಿವೆ.  ಆದರೆ ರಾಜ್ಯದ ಏಕೈಕ (Discontent of Revanna’s sons) ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ನಲ್ಲಿ(JDS) ಕುಟುಂಬ ಕಲಹವೇ  ಕೆಲ ದಿನಗಳಿಂದ ಹೆಚ್ಚು ಸದ್ದು ಮಾಡುತ್ತಿದೆ.

ಹೌದು, ದೇವೇಗೌಡರ(HD Deve Gowda) ಕುಟುಂಬದಲ್ಲಿ ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ಸಣ್ಣ ಪ್ರಮಾಣದ ಭಿನ್ನಾಭಿಪ್ರಾಯ ಉಂಟಾಗಿರುವುದಂತು ಸತ್ಯ. 

ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎನ್ನುವ ಮೂಲಕ ಭವಾನಿ ರೇವಣ್ಣ(Bhavani Revanna)  ವಿವಾದ ಹುಟ್ಟು ಹಾಕಿದ್ದರು.

ಆ ವಿವಾದವೇ ಇನ್ನೂ ಬಗೆ ಹರಿದಿಲ್ಲ. ಆದರೆ ಇದೀಗ ಅರಸೀಕೆರೆ ಮತ್ತು ಅರಕಲಗೂಡು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ

ವಿಚಾರದಲ್ಲಿ ರೇವಣ್ಣ ಪುತ್ರರಾದ ಪ್ರಜ್ವಲ್‌ ರೇವಣ್ಣ(Prajwal Revanna) ಮತ್ತು ಸೂರಜ್‌ ರೇವಣ್ಣ(Suraj Revanna)  ಕುಮಾರಸ್ವಾಮಿ ಅವರ ನಿರ್ಧಾರದ ವಿರುದ್ದ ಅಪಸ್ವರ ಎತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕಟೀಲ್ ಬದಲು ಪಿಟೀಲು ಅಂತ ಹೆಸರಿಟ್ಟುಕೊಳ್ಳಲಿ : ಹೆಚ್.ಡಿ.‌ಕುಮಾರ್‌ಸ್ವಾಮಿ

ಅರಕಲಗೂಡು ಕ್ಷೇತ್ರದ ಹಾಲಿ ಜೆಡಿಎಸ್‌ ಶಾಸಕ ಎ.ಟಿ.ರಾಮಸ್ವಾಮಿ ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಹೀಗಾಗಿ 3-4 ದಿನಗಳ ಹಿಂದೆಯೇ ಕುಮಾರಸ್ವಾಮಿ(HD Kumaraswamy) ಅವರು ಬಹಿರಂಗವಾಗಿಯೇ ಮಾಜಿ ಸಚಿವ ಮತ್ತು ರೇವಣ್ಣನವರ(HD Revanna) ರಾಜಕೀಯ

ವಿರೋಧಿ ಎ.ಮಂಜುಗೆ ಅರಕಲಗೂಡು ಟಿಕೆಟ್‌ ಘೋಷಣೆ ಮಾಡಿದ್ದರು. ಕುಮಾರಸ್ವಾಮಿ ಅವರ ಈ ನಿರ್ಧಾರದ ವಿರುದ್ದ ಅಪಸ್ವರ ಎತ್ತಿರುವ ಪ್ರಜ್ವಲ್‌ರೇವಣ್ಣ ಮತ್ತು ಸೂರಜ್‌ರೇವಣ್ಣ, 

ಕಳೆದ ಅನೇಕ ದಶಕಗಳಿಂದ ನಮ್ಮ ವಿರುದ್ದವೇ ವಾಗ್ದಾಳಿ ನಡೆಸುತ್ತಾ, ಹಾದಿಬೀದಿಲಿ ನಮ್ಮ ತಂದೆಯ ಬಗ್ಗೆಯೇ ಕೆಟ್ಟದಾಗಿ ಮಾತನಾಡುತ್ತಾ,

ನಮ್ಮ ಮೇಲೆ ಕೇಸ್‌ ಹಾಕಿರುವ ಎ.ಮಂಜುಗೆ ಟಿಕೆಟ್‌ ನೀಡುವುದು ಸರಿಯಲ್ಲ. ಈ ವಿಚಾರದಲ್ಲಿ ನಮ್ಮ ತಂದೆಯವರು (Discontent of Revanna’s sons) ನಿರ್ಧಾರ ತೆಗೆದುಕೊಳ್ಳುತ್ತಾರೆ,

ಬೇಕಿದ್ದರೆ ಅರಸೀಕೆರೆ(Arasikere) ಕ್ಷೇತ್ರದಲ್ಲಿ ಶಿವಲಿಂಗೇಗೌಡರ ವಿರುದ್ದ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುದರ ಕುರಿತು

ನೀವು ನಿರ್ಧಾರ ತೆಗೆದುಕೊಳ್ಳಿ ಎಂದು ಕುಮಾರಸ್ವಾಮಿ ಅವರಿಗೆ ರೇವಣ್ಣ ಪುತ್ರರು ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಕುಟುಂಬದೊಳಗೆ ಕೇಳಿ ಬಂದಿರುವ ಅಪಸ್ವರದ ಕುರಿತು ಸದ್ಯ ದೇವೇಗೌಡರು ಯಾವುದೇ ನಿರ್ಧಾರವನ್ನೂ  ತೆಗೆದುಕೊಂಡಿಲ್ಲ ಎನ್ನಲಾಗಿದ್ದು,

ಹಾಸನ(Hassan) ವಿಧಾನಸಭಾ ಕ್ಷೇತ್ರಕ್ಕೆ ಸ್ವರೂಪ ಪ್ರಕಾಶ್‌(Swaroop Prakash) ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲು ದೊಡ್ಡಗೌಡರು ಒಲವು ತೊರೆದಿದ್ದಾರೆ ಎನ್ನಲಾಗಿದೆ.

ಹೀಗಾಗಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ವರೂಪ ಪ್ರಕಾಶಗೆ ಟಿಕೆಟ್‌ ದೊರೆಯುವುದು ಬಹುತೇಕ ಖಚಿತ ಆದರೆ ಅರಕಲಗೂಡು ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಇನ್ನೂ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.

Exit mobile version