ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: 60ಕ್ಕೂ ಅಧಿಕ ಮಂದಿಗೆ ಗಾಯ

Bengaluru: ಪ್ರತಿ ವರ್ಷದ ಹಾಗೇ ಈ ಬಾರಿ ಕೂಡ ದೀಪಾವಳಿಯಲ್ಲಿ ಪಟಾಕಿ ಅವಘಡ ಸಂಭವಿಸಿದ್ದು, (Diwali fireworks mishap in Blore) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಜನರ ಬಾಳಲ್ಲಿ ಬೆಳಕಾಗಬೇಕಾಗಿದ್ದ ಈ ದೀಪಾವಳಿ ಹಬ್ಬ ಕೆಲವರ ಬಾಳನ್ನ ಕತ್ತಲಾಗಿಸುತ್ತಿದೆ. ಬೆಂಗಳೂರಲ್ಲಿ (Bengaluru) ಪಟಾಕಿ ಸಿಡಿದು ನಿನ್ನೆ ಒಂದೇ ದಿನ 13 ಜನರಿಗೆ ಗಾಯಗಳಾಗಿವೆ.

ವಿವಿಧ ಆಸ್ಪತ್ರೆಗಳಲ್ಲಿ 60 ಕ್ಕೂ ಹೆಚ್ಚು ಪಟಾಕಿ ಸಂಬಂಧಿತ ಗಾಯಗಳ ಪ್ರಕರಣಗಳು (Diwali fireworks mishap in Blore) ವರದಿಯಾಗಿವೆ.

ಭಾನುವಾರದಿಂದ ಆರಂಭವಾಗಿರುವ ದೀಪಾವಳಿ (Deepavali) ಹಬ್ಬದ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳಲ್ಲಿ 60ಕ್ಕೂ ಹೆಚ್ಚು ಪಟಾಕಿ ಸಂಬಂಧಿತ ಗಾಯಗಳ ಪ್ರಕರಣಗಳು ವರದಿಯಾಗಿದ್ದು,

ಮಿಂಟೋ ಆಸ್ಪತ್ರೆಯಲ್ಲಿ (Minto Hospital) ಚಿಕಿತ್ಸೆ ಪಡೆಯುತ್ತಿರುವ ಮೂವರು ಗಾಯಾಳುಗಳು ಗಂಭೀರವಾದ ಗಾಯಗಳಿಂದ ಬಳಲುತ್ತಿದ್ದು, ಅವರ ಒಂದು ಕಣ್ಣಿನ ದೃಷ್ಟಿ ಹಾಳಾಗುವ

ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ.

ಶ್ರೀರಾಂಪುರದಲ್ಲಿ (Srirampur) 18 ವರ್ಷದ ಯುವಕ ಭಾನುವಾರ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು ಆತನ ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿವೆ. ಧರ್ಮಾವರಂನ 10 ವರ್ಷದ ಬಾಲಕಿ ಮತ್ತು

ಬೆಂಗಳೂರಿನ 22 ವರ್ಷದ ಯುವಕಿಗೂ ಕಣ್ಣಿನ ಭಾಗಕ್ಕೆ ಹೆಚ್ಚಿನ ಗಾಯಗಳಾಗಿವೆ. ಇದರಿಂದಾಗಿ ಅವರಿಗೆ ದೃಷ್ಟಿ ಸಮಸ್ಯೆ ಎದುರಾಗಿದೆ. ಮಿಂಟೋ ಆಸ್ಪತ್ರೆಯ ನಿರ್ದೇಶಕ ಜಿ.ನಾಗರಾಜು (G Nagaraj)

ಮಾತನಾಡಿ, ಮೂವರಿಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ದೀರ್ಘಾವಧಿ ಚಿಕಿತ್ಸೆ ಅಗತ್ಯವಿದೆ.

ಸೋಮವಾರ ಸಂಜೆಯವರೆಗೆ ಮಿಂಟೋದಲ್ಲಿ ಒಟ್ಟು ಒಂಬತ್ತು ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ನವೆಂಬರ್ (November) 12 ರಂದು ಬಿಹಾರದಲ್ಲಿ ಬಿಹಾರಿ ಕುಟುಂಬ ಮೂಲದ ಆರು

ವರ್ಷದ ಬಾಲಕ ಕೂಡ ಪಟಾಕಿ ಸಿಡಿಸಿ ಗಾಯಗೊಂಡಿದ್ದು ಬಾಲಕನಿಗೆ ಸ್ಥಳೀಯ ಚಿಕಿತ್ಸಾಲಯದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಅವನನ್ನು ನಾರಾಯಣ ನೇತ್ರಾಲಯಕ್ಕೆ (Narayana Netralaya)

ಶಿಫ್ಟ್ ಮಾಡಲಾಗಿದೆ ಎಂದರು.

ಕಾಟನ್‌ಪೇಟೆಯ (Cotton Pete) ಟೈಲರ್‌ ಸೇರಿದಂತೆ ಇಬ್ಬರು ಪೇದೆಗಳು ಆಂತರಿಕ ಆಘಾತಕ್ಕೆ ಒಳಗಾಗಿದ್ದಾರೆ. ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗಾಳಿಯಿಂದ

ಹಾರಿ ಬಂದ ಪಟಾಕಿಯೊಂದು ಅವರ ಬಳಿ ಸಿಡಿದಿದೆ. ಸುಮಾರು 90% ಪ್ರಕರಣಗಳು ಪಟಾಕಿ ಸಿಡಿಸುವುದನ್ನು ನೋಡಿ ಗಾಯಗೊಂಡವರೇ ಆಗಿದ್ದಾರೆ. ಮೂರು ವರ್ಷದ ಮಗು ಸೇರಿದಂತೆ ಆರು

ಮಕ್ಕಳು ಬಳಲುತ್ತಿದ್ದಾರೆ.

ಜನ ಹೆಚ್ಚಾಗಿ ಓಡಾಡುವ ಸ್ಥಳಗಳಲ್ಲಿ ಪಟಾಕಿ (Crackers) ಸಿಡಿಸಲು ಸರ್ಕಾರ ಅನುಮತಿ ನೀಡಬಾರದು. ಇದರಿಂದ ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಗಾಯಗೊಳ್ಳದಂತೆ ರಕ್ಷಿಸಲು ಸಹಾಯ

ಮಾಡುತ್ತದೆ ಎಂದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 28 ಪ್ರಕರಣಗಳಲ್ಲಿ 1 ವರ್ಷ ವಯಸ್ಸಿನ ಇಬ್ಬರು ಮಕ್ಕಳು, ಮೂವರು ಗಂಡು ಮಕ್ಕಳು (6, 10, ಮತ್ತು 12) ಮತ್ತು ಇಬ್ಬರು ಹುಡುಗಿಯರಿದ್ದಾರೆ

(4 ವರ್ಷ). ಯಾವುದೇ ಗಾಯಗಳು ಗಂಭೀರ ಸ್ವರೂಪದಲ್ಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನು ಓದಿ : ನಿರ್ಮಾಣ ಹಂತದ ಸುರಂಗದಲ್ಲಿ ಸಿಲುಕಿರುವ 40 ಕಾರ್ಮಿಕರ ರಕ್ಷಣೆ: ಈ ಕಾರ್ಯಾಚರಣೆಗೆ ಹೊಸ ಯೋಜನೆ

Exit mobile version