ನಾವು ಪ್ರತಿನಿತ್ಯ ಬಳಸುವ ಇನ್ಸ್ಟಾಗ್ರಾಂ ಅನ್ವೇಷಕರ ವಯಸ್ಸು ಕೇಳಿದ್ರೆ ಅಚ್ಚರಿ ಪಡ್ತೀರಾ!

Instagram

ತಂತ್ರಜ್ಞಾನದಲ್ಲಿ(Technology) ಸಾಧನೆ ಮಾಡಲು ವಯಸ್ಸಿನ ನಿರ್ಬಂಧವಿಲ್ಲ ಎಂಬುದನ್ನು ಸಾಧಿಸಿದವರ ದೊಡ್ಡ ಪಟ್ಟಿಯೇ ಇದೆ.

ಅತಿ ಸಣ್ಣ ವಯಸ್ಸಿನಲ್ಲಿಯೇ ವಿಶ್ವವೇ ನಿಬ್ಬೆರಗಾಗುವಂತಹ ಸಾಧನೆಯನ್ನು ಹಲವರು ಮಾಡಿದ್ದಾರೆ. ಕಠಿಣ ಪರಿಶ್ರಮ ಮತ್ತು ತಮ್ಮ ಗುರಿಯನ್ನೇ ಸವಾಲಾಗಿ ಸ್ವೀಕರಿಸಿ, ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಹ ದಾಖಲೆಯನ್ನು ಟೆಕ್ ಇತಿಹಾಸದಲ್ಲಿ ಬರೆದವರಿದ್ದಾರೆ.

ಇವರ ಈ ಅನ್ವೇಷಣೆಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿವೆ. ಅಂತಹ ಅನ್ವೇಷಣೆಗಳಲ್ಲಿ ಒಂದು ಇನ್ಸ್ಟಾಗ್ರಾಮ್(Instagram).

ಇನ್ಸ್ಟಾಗ್ರಾಮ್ ಬಗ್ಗೆ ತಿಳಿಯದವರೇ ಇಲ್ಲ. ನಾವೆಲ್ಲ ಪ್ರತಿದಿನ ಬಳಸುವ ಈ ಅಪ್ಲಿಕೇಶನ್ ಅನ್ನು ಕಂಡುಹಿಡಿದವರು ಕೆವಿನ್ ಸಿಸ್ಟ್ರೋಮ್ ಮತ್ತು ಮೈಕ್ ಕ್ರೀಗರ್. ಇದು ಮೂಲತಃ HTML5 ಪ್ಲಾಟ್‌ಫಾರ್ಮ್ ಅನ್ನು ಬಳಸುವ ಫೋರ್ಸ್ಕ್ವೇರ್ ತರಹದ ಚೆಕ್-ಇನ್ ಪ್ರೋಗ್ರಾಂ.

ಇದಕ್ಕಾಗಿ ಕೆವಿನ್ ಮತ್ತು ಮೈಕ್, ಆಂಡ್ರೆಸೆನ್ ಹೊರೊವಿಟ್ಜ್ ಫಂಡ್ ಮತ್ತು ಬೇಸ್‌ಲೈನ್ ವೆಂಚರ್ಸ್ ಫಂಡ್‌ನಿಂದ ಸುಮಾರು $ 500.000 ಹೂಡಿಕೆಗಳನ್ನು ಸಂಗ್ರಹಿಸಿದರು, ಏಳು ತಿಂಗಳ ನಂತರ Instagram ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು.

6 ಅಕ್ಟೋಬರ್ 2010 ರಲ್ಲಿ Instagram ಅನ್ನು ಆಪ್ ಸ್ಟೋರ್‌ನಲ್ಲಿ ಬಿಡುಗಡೆ ಮಾಡಲಾಯಿತು. ಕೆವಿನ್ ಹಾಗೂ ಮೈಕ್ ಅವರ ವಯಸ್ಸು ಕ್ರಮವಾಗಿ 27 ಹಾಗೂ 25. ಇದೊಂದು ಮೊಬೈಲ್ ಫೋಟೋಶೇರಿಂಗ್ ಅಪ್ಲಿಕೇಶನ್ ಆಗಿದ್ದು, 9 ಮಿಲಿಯನ್ ಬಳಕೆದಾರರನ್ನು ಇದು ಹೊಂದಿದೆ.

ಮತ್ತು ಕಂಪೆನಿ ಷೇರು $550 ಮಿಲಿಯನ್. ಈಗಂತೂ ಇನ್ಸ್ಟಾಗ್ರಾಮ್ ಬಳಸದವರೇ ಇಲ್ಲ. ಅನೇಕ ತಾರೆಯರು ಮತ್ತು ಸೆಲೆಬ್ರಿಟಿಗಳು Instagram ಖಾತೆಯನ್ನು ಹೊಂದಿದ್ದಾರೆ, ಅದರ ಮೂಲಕ ಅವರು ತಮ್ಮ ಕಲಾ ಉತ್ಪನ್ನಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಮತ್ತು ಅವರ ಖಾಸಗಿ ಜೀವನದ ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.


ಅಮೇರಿಕನ್ ಮ್ಯಾಗಜೀನ್ ಟೈಮ್ 2013 ರಲ್ಲಿ ತನ್ನ 50 ಅತ್ಯುತ್ತಮ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ Instagram ಅನ್ನು ಸೇರಿಸಿದೆ.

https://vijayatimes.com/rss-mohan-bhagwat-visit-to-bengaluru/

ಇಷ್ಟು ಪ್ರಸಿದ್ಧವಾದ ಅಪ್ಲಿಕೇಶನ್ ಅನ್ನು ನಿರ್ಮಿಸಿದ ಕೆವಿನ್ ಹಾಗೂ ಮೈಕ್ ಅವರ ಸತತ ಪರಿಶ್ರಮಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Exit mobile version