Bengaluru: ರಾಜ್ಯದ ಜನತೆ ಉಚಿತ ವಿದ್ಯುತ್ ಸಿಗಲಿದೆ ಎಂಬ ಖುಷಿಯಲ್ಲಿದ್ದರು. ಆದರೆ ಈ ಜೂನ್ ತಿಂಗಳಲ್ಲಿ ಬಂದ ವಿದ್ಯುತ್ (double electricity bill reason) ಬಿಲ್ ನೋಡಿ
ಜನರು ಅಕ್ಷರಶಃ ಶಾಕ್ ಆಗಿದ್ದಾರೆ ಅಷ್ಟೇ ಅಲ್ಲದೆ ಸಾರ್ವಜನಿಕ ವಲಯದಿಂದ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಏಕೆಂದರೆ ಇದುವರೆಗೆ ತಿಂಗಳಿಗೆ 500 ರಿಂದ 600 ರು.ವರೆಗೆ ಬರುತ್ತಿದ್ದ ಬಿಲ್ ಮೊತ್ತವು
ಈ ಬಾರಿ ಏಕಾಏಕಿ 1300 ರು. ಬಿಲ್ (double electricity bill reason) ಬಂದಿದೆ.

ಅಷ್ಟೇ ಅಲ್ಲದೆ ಇನ್ನು ಕೆಲವರಿಗೆ ತಿಂಗಳಿಗೆ ಸರಾಸರಿ 1000 ರು. ಬರುತ್ತಿದ್ದ ವಿದ್ಯುತ್ ಬಿಲ್ 2500 ರು.ವರೆಗೆ ಬಂದಿದೆ.ಜೊತೆಗೆ ಮಾಮೂಲಿ ಬಳಸುವ ಯೂನಿಟ್ಗಿಂತ
ಹೆಚ್ಚಿನ ಪ್ರಮಾ (Unit)ಣದ ಯೂನಿಟ್ ಬಳಕೆ ಮಾಡಿರುವುದು ಬಿಲ್ನಲ್ಲಿ ತೋರಿಸಲಾಗಿದೆ.ಇದರಿಂದ ಆಕ್ರೋಶಗೊಂಡ ಜನರು ಸರ್ಕಾರಕ್ಕೆ ಮತ್ತು ವಿದ್ಯುತ್ ಸರಬರಾಜು ಕಂಪನಿ
(ಎಸ್ಕಾಂ) ಗೆ (ESCOM) ಹಿಡಿಶಾಪ ಹಾಕತೊಡಗಿದ್ದಾರೆ.
ಇದೀಗ ಇದಕ್ಕೆ ತಾಂತ್ರಿಕ ದೋಷ ದ ಕಾರಣವನ್ನು ಎಸ್ಕಾಂಗಳು ನೀಡಿವೆ.
ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಬೆಸ್ಕಾಂ (BESCOM) ಅಧಿಕಾರಿಗಳು ಡಬಲ್ ಬಿಲ್ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಲ್ ನೀಡಲು ಬಳಸುವ ಸಾಫ್ಟ್ವೇರ್ನಲ್ಲಿ(Software) ಸಮಸ್ಯೆ
ಇದ್ದ ಕಾರಣ ಬಿಲ್ ತಪ್ಪಾಗಿ ನಮೂದಿಸಲಾಗಿದೆ. ಹಾಗಾಗಿ ದುಪ್ಪಟ್ಟು ಬಿಲ್ ಬಂದಿದೆ. ಜನರು ಉಪವಿಭಾಗಗಳಲ್ಲಿ ತಮ್ಮ ಸಂದೇಹಗಳನ್ನು ಪರಿಹರಿಸಬಹುದು. ತಾಂತ್ರಿಕ ದೋಷದಿಂದ ದುಪ್ಪಟ್ಟು ಬಿಲ್ ಬಂದಿದ್ದು,
ಇದನ್ನು ಓದಿ: ತೆರಿಗೆ ರಿಯಾಯಿತಿ ಕೋರಿ ಸಿಎಂಗೆ ಮನವಿ ಸಲ್ಲಿಸಿದ “ಡೇರ್ ಡೆವಿಲ್ ಮುಸ್ತಾಫಾ” ಚಿತ್ರತಂಡ
ಒಂದು ವೇಳೆ ಈಗಾಗಲೇ ಯಾರಾದರೂ ವಿದ್ಯುತ್ ಬಿಲ್ ಪಾವತಿ ಮಾಡಿದ್ದರೆ ಹೆಚ್ಚುವರಿ ಮೊತ್ತವನ್ನು ವಾಪಸ್ ಮಾಡಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಹಳ್ಳಿಯಿಂದ ಹಿಡಿದು ದೊಡ್ಡ ನಗರಗಳ ಗ್ರಾಹಕರಲ್ಲಿವಿದ್ಯುತ್ ಬಿಲ್ ಏರಿಕೆ ವಿರುದ್ಧ ಸಿಟ್ಟು, ಆಕ್ರೋಶ, ಟೀಕೆಗಳು ಕೇಳಿ ಬರುತ್ತಿವೆ.ಕೆಇಆರ್ಸಿ (KERC) ಹಾಗೂ ಹಿಂದಿನ ಸರ್ಕಾರ ದರ ಹೆಚ್ಚಳ ಮಾಡಿದ್ದು ನಮ್ಮ ಸರ್ಕಾರವಲ್ಲ
ಎಂದೆಲ್ಲ ಸಬೂಬು ಹೇಳುವ ಬದಲು ಮೊದಲು ವಿದ್ಯುತ್ ಬಿಲ್ ಕಡಿಮೆ ಮಾಡುವ ಬಗ್ಗೆ ಏನಾದರೂ ಪರಿಹಾರ ಕೊಡಬೇಕು ಏಕೆಂದರೆ ಈಗಾಗಲೇ ಜನರಿಗೆ ದಿನಸಿಯಿಂದ ಹಿಡಿದು ಪ್ರತಿಯೊಂದು ವಸ್ತುಗಳ
ಬೆಲೆ ಹೆಚ್ಚಳ ಉಂಟಾಗಿ ಜೀವನ ನಡೆಸುವುದು ಬಹಳ ಕಷ್ಟಕರವಾಗಿದೆ ಇಂತಹ ಸಂದರ್ಭದಲ್ಲಿ ಸರ್ಕಾರ ಜನರ ಮೇಲೆ ಬೀಳುತ್ತಿರುವ ಹೊರೆ ಕಡಿಮೆ ಮಾಡಲು ಯತ್ನಿಸಬೇಕು’ ಎಂಬ ಕೂಗು ಕೇಳಿಬಂದಿದೆ.
ರಶ್ಮಿತಾ ಅನೀಶ್