Bangalore: ಕೇಂದ್ರ ಸರ್ಕಾರದ DRDOನ ಸೆಂಟರ್ ಫಾರ್ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ & ರೋಬೋಟಿಕ್ಸ್ (DRDO Jobs for Engineers), ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್
ಆರ್ಗನೈಜೇಶನ್ ನಲ್ಲಿ ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ (DRDO Jobs for Engineers) ಅರ್ಜಿ ಆಹ್ವಾನಿಸಿದೆ.

ವಯೋಮಿತಿ: ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜುಲೈ (July) 29, 2023ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳು- 3 ವರ್ಷ. SC/ST ಅಭ್ಯರ್ಥಿಗಳು- 5 ವರ್ಷ
ವಿದ್ಯಾರ್ಹತೆ: ಅಧಿಸೂಚನೆ ಪ್ರಕಾರ, ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಕಡ್ಡಾಯವಾಗಿ ಪದವಿ, ಸ್ನಾತಕೋತ್ತರ ಪದವಿ, ಬಿಇ/ಬಿ.ಟೆಕ್(BE/B.tech), ಎಂಇ/ ಎಂ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.
ಸ್ಥಳ: ಸೆಂಟರ್ ಫಾರ್ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ (Intelligence) & ರೋಬೋಟಿಕ್ಸ್, ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್ ಆರ್ಗನೈಜೇಶನ್ ನೇಮಕಾತಿ ಅಧಿಸೂಚನೆ ಪ್ರಕಾರ,
ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಇದು ಶಾಶ್ವತವಾಗಿ ಬೆಂಗಳೂರು ಕೇಂದ್ರದಲ್ಲೇ ಉದ್ಯೋಗಕ್ಕೆ ಅವಕಾಶವಿರುತ್ತದೆ.
ಇದನ್ನು ಓದಿ: 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ದೇವಸ್ಥಾನಗಳಲ್ಲಿ ನೇರ ದರ್ಶನ
ವೇತನ:
ಸೆಂಟರ್ ಫಾರ್ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ & ರೋಬೋಟಿಕ್ಸ್, ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್ ಆರ್ಗನೈಜೇಶನ್ ನೇಮಕಾತಿ ಅಧಿಸೂಚನೆ ಪ್ರಕಾರ, ಜೂನಿಯರ್ ರಿಸರ್ಚ್
ಫೆಲೋಗಳಿಗೆ ತಿಂಗಳಿಗೆ 31,000 ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ: ಮೊದಲು ಲಿಖಿತ ಪರೀಕ್ಷೆ ನಂತರ ಸಂದರ್ಶನ
ಸಂದರ್ಶನ ನಡೆಯುವ ಸ್ಥಳ: ಸೆಂಟರ್ ಫಾರ್ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ & ರೋಬೋಟಿಕ್ಸ್ , ಸಿ.ವಿ.ರಾಮನ್ ನಗರ (C.V.Raman Nagar) , ಬೆಂಗಳೂರು.

ಅರ್ಜಿ ಹಾಕೋದು ಹೇಗೆ?
ಸೆಂಟರ್ ಫಾರ್ ಆರ್ಟಿಫಿಸಿಯಲ್ ಇಂಟೆಲಿಜೆನ್ಸ್ & ರೋಬೋಟಿಕ್ಸ್, ಡಿಫೆನ್ಸ್ ರಿಸರ್ಚ್ & ಡೆವಲಪ್ಮೆಂಟ್ ಆರ್ಗನೈಜೇಶನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಭರ್ತಿ ಮಾಡಿದ
ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ jrf.recruitment.blore@gmail.com ಗೆ ಜುಲೈ 21 ರೊಳಗೆ ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ನೋಟಿಫಿಕೇಶನ್ (Notification) ಬಿಡುಗಡೆಯಾದ ದಿನಾಂಕ: 20/06/2023
ಇ-ಮೇಲ್ (E-mail) ಕಳುಹಿಸಲು ಕೊನೆಯ ದಿನ: ಜುಲೈ 11, 2023
ಸಂದರ್ಶನ ನಡೆಯುವ ದಿನ: ಜುಲೈ 29, 2023