ಹಾವೇರಿ,ಚಾಮರಾಜನಗರ,ಅಥಣಿ,ಚಾಮುಂಡೇಶ್ವರಿ ಜಿಲ್ಲೆಯ ಚುನಾವಣಾ ಫಲಿತಾಂಶದ ತಕ್ಷಣದ ಅಪ್​ಡೇಟ್ಇಲ್ಲಿದೆ

Bengaluru : 2023 ಕರ್ನಾಟಕ ವಿಧಾನಸಭಾ ಚುನಾವಣೆಯ (2023 Karnataka assembly election) ಮತ ಎಣಿಕೆಯು ಅತ್ಯಂತ ಭರದಿಂದ ನಡೆಯುತ್ತಿದೆ. ರಾಜ್ಯದ ಪ್ರತಿಯೊಂದು ಕ್ಷೇತ್ರದ ಫಲಿತಾಂಶವೂ ಅತ್ಯಂತ ಮಹತ್ವದ್ದೆನಿಸಿದೆ. ಅತ್ಯಂತ ಪ್ರಮುಖವಾದ ಕ್ಷೇತ್ರಗಳ ಕುತೂಹಲಕರವಾದ ಫಲಿತಾಂಶದ ಮಾಹಿತಿ ಇಲ್ಲಿ ನಿಮಗೆ ಸಿಗಲಿದೆ.

ನಿಮ್ಮ ಜಿಲ್ಲೆಯ ಹಾಗೂ ನಿಮ್ಮ ಕ್ಷೇತ್ರದ ಕ್ಷಣ ಕ್ಷಣದ ಮಾಹಿತಿಯನ್ನು ಸಹ ನೀವು ಇಲ್ಲಿ ತಿಳಿದುಕೊಳ್ಳಬಹುದು.

ಚಾಮುಂಡೇಶ್ವರಿಯಲ್ಲಿ ಜಿ.ಟಿ.ದೇವೇಗೌಡ ರವರದ್ದೇ ಹವಾ!

ಮೈಸೂರು ಜಿಲ್ಲೆಯ (Mysore district) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈಗಾಗಲೇ ನಡೆದ ಎರಡನೇ ಸುತ್ತಿನಲ್ಲಿ ಜಿ.ಟಿ.ದೇವೇಗೌಡ 6678 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಜೆಡಿಎಸ್ ಪಕ್ಷವು 12249, ಕಾಂಗ್ರೆಸ್ ‌5571, ಬಿಜೆಪಿ 1386 ಮತ ಪಡೆದಿವೆ.

ಹಾವೇರಿಯ ಈ ಕ್ಷಣದ ಅಪ್​ಡೇಟ್ ಹೀಗಿದೆ :

ಹಾವೇರಿ ಜಿಲ್ಲೆಯಲ್ಲಿ (Haveri district) ಮೂರನೆ ಸುತ್ತಿನ ಮತ ಎಣಿಕೆ ಈಗಾಗಲೇ ಮುಕ್ತಾಯಗೊಂಡಿದೆ . ಬಿಜೆಪಿ 15256 ಹಾಗೂ ಕಾಂಗ್ರೆಸ್ 12120 ಮತ ಗಳಿಸಿವೆ. ಒಟ್ಟು 3136 ಮತಗಳಿಂದ ಬಿಜೆಪಿ (BJP) ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ಕ್ಷೇತ್ರದಲ್ಲಿ ಈಗಾಗಲೇ ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಇದುವರೆಗೆ ಬಿಜೆಪಿ 13041, ಕಾಂಗ್ರೆಸ್ 16102 ಒಟ್ಟು ಮತ ಗಳಿಸಿವೆ. 3061 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಲೀಡ್ ಗಳಿಸಿದ್ದಾರೆ.

ಇದನ್ನೂ ಓದಿ : https://vijayatimes.com/congress-leading-by-110-seats/

ಅಥಣಿಯಲ್ಲಿ ಸವದಿಗೆ ಭರ್ಜರಿ ಮುನ್ನಡೆ

ಬೆಳಗಾವಿ ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರ ಅಥಣಿಯಲ್ಲಿ ಎರಡನೇ ಸುತ್ತಿನ ಮತ‌ ಎಣಿಕೆಯಲ್ಲಿ ಈಗಾಗಲೇ 5374 ಮತಗಳಿಂದ ಲಕ್ಷ್ಮಣ್ ಸವದಿ (Laxman Savadi) ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾದ ಮಹೇಶ್ ಕುಮಟಳ್ಳಿ – 5763, ಮತ್ತು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ – 11137 ಮತ ಗಳಿಸಿದ್ದಾರೆ.

ಚಾಮರಾಜನಗರದಲ್ಲಿ ಸೋಮಣ್ಣಗೆ ಭಾರೀ ಹಿನ್ನಡೆ!

ಚಾಮರಾಜನಗರ ಕ್ಷೇತ್ರದಲ್ಲಿ ಈಗಾಗಲೇ ನಡೆದ ಎರಡನೇ ಸುತ್ತಿನಲ್ಲಿ ಕಾಂಗ್ರೆಸ್ ಬಹು ಮುನ್ನಡೆ ಗಳಿಸಿದ್ದು ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಭಾರೀ ಹಿನ್ನಡೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸಿ. ಪುಟ್ಟಶೆಟ್ಟಿ 1253 ಮತಗಳಿಂದ ಮುನ್ನಡೆ ಗಳಿಸಿದ್ದಾರೆ.

ಇದನ್ನೂ ಓದಿ : https://vijayatimes.com/congress-crossed-100-seats/

ಮಧುಗಿರಿಯಲ್ಲಿ ಕಾಂಗ್ರೆಸ್ ಮುನ್ನಡೆ :

ತುಮಕೂರು ಜಿಲ್ಲೆಯ (Tumkur district) ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ 2840 ಮತಗಳಿಂದ ಕಾಂಗ್ರೆಸ್ (Congress) ಅಭ್ಯರ್ಥಿ ಕೆ.ಎನ್.ರಾಜಣ್ಣ (K. N. Rajanna) ಮುನ್ನಡೆ ಗಳಿಸಿದ್ದಾರೆ. ಕಾಂಗ್ರೆಸ್ – 9876, ಜೆಡಿಎಸ್- 6928, ಬಿಜೆಪಿ- 1430 ಮತಗಳನ್ನು ಪಡೆದಿವೆ.

ಹಾವೇರಿ ಜಿಲ್ಲೆಯ (Haveri district) ಹಿರೆಕೇರೂರಲ್ಲಿ ನಡೆದ ನಾಲ್ಕು ಸುತ್ತಿನಲ್ಲಿ 5342 ಮತಗಳಿಂದ ಕಾಂಗ್ರೆಸ್ ಲೀಡ್ ಪಡೆದಿವೆ.21038 ಮತಗಳನ್ನು ಕಾಂಗ್ರೆಸ್ ಪಡೆದಿದೆ. 15690 ಮತಗಳನ್ನು ಬಿಜೆಪಿ ಪಡೆದಿದೆ.

Exit mobile version