ಸರಾಸರಿ ದಾಟಿದ್ರೆ ವಿದ್ಯುತ್ ಬಿಲ್ ಕಟ್ಟಲೇಬೇಕು : ಇಂಧನ ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು: ಒಂದು ವರ್ಷದ ಸರಾಸರಿ ಯೂನಿಟ್ (Electricity bill new rules) ಮೇಲೆ ಶೇಕಡಾ 10ರಷ್ಟು ಉಚಿತ ವಿದ್ಯುತ್ ನೀಡಲಾಗುತ್ತದೆ. ಸರಾಸರಿ ವಿದ್ಯುತ್ ಬಳಕೆ ದಾಟಿದ್ರೆ ಎಲ್ಲರೂ ಕಡ್ಡಾಯವಾಗಿ ಬಿಲ್

ಕಟ್ಟಲೇ ಬೇಕೆಂದು ಇಂಧನ ಸಚಿವ ಕೆ.ಜೆ.ಜಾರ್ಜ್(KJ George) ಹೇಳಿದ್ದಾರೆ.

ಕಾಂಗ್ರೆಸ್(Congress) ಸರ್ಕಾರದ ಗೃಹಜ್ಯೋತಿ ಯೋಜನೆಯ ಕುರಿತ ಎಲ್ಲಾ ಗೊಂದಲಗಳಿಗೆ ತೆರೆಎಳೆಯಲು ಇಂಧನ ಸಚಿವ ಕೆಜೆ ಜಾರ್ಜ್ ಇಂದು ಸುದ್ದಿಗೋಷ್ಠಿ ನಡೆಸಿ, ಈ ಯೋಜನೆಯ ಲಾಭ ಪಡೆಯಲು ಜನರು ತಮ್ಮ

ಆಧಾರ್ ಕಾರ್ಡ್(Adhar Card) ಅನ್ನು ಆರ್ಆರ್(RR) ನಂಬರ್ಗೆ ಲಿಂಕ್ ಮಾಡಬೇಕು. ಬಾಡಿಗೆ ಮನೆಯವರಿಗೂ, ಸ್ವಂತ ಮನೆಯವರಿಗೂ ಈ ಯೋಜನೆ ಅನ್ವಯಿಸುತ್ತದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ :  ಕಾರ್ಡ್ ಇಲ್ಲದಿದ್ದಲ್ಲಿ ಇನ್ನು ಮುಂದೆ ಮೊಬೈಲ್​ನ ಯುಪಿಐ ಮೂಲಕವೇ ಎಟಿಎಂನಿಂದ ಹಣ ಪಡೆಯಬಹುದು…ಹೇಗೆ? ಇಲ್ಲಿದೆ ಮಾಹಿತಿ

ರಾಜ್ಯದಲ್ಲಿ 2 ಕೋಟಿ 14 ಲಕ್ಷ ಗ್ರಾಹಕರು 200 ಯೂನಿಟ್ ಒಳಗೆ ಬಳಕೆ ಮಾಡುತ್ತಿದ್ದು, ಇವರೆಲ್ಲರಿಗೂ ಉಚಿತ ವಿದ್ಯುತ್ ಲಭ್ಯವಾಗಲಿದೆ. ಇನ್ನು 2 ಲಕ್ಷ ಜನರು 200 ಯೂನಿಟ್ಗೂ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತಿದ್ದು, ಅವರು

ಸರಾಸರಿ ದಾಟಿದ್ರೆ ವಿದ್ಯುತ್ ಬಿಲ್ ಪಾವತಿಸಬೇಕು. ಜೂನ್ 15 ರಿಂದ ನೋಂದಣಿ ಆರಂಭವಾಗಿ, ಆಗಸ್ಟ್ 1 ರಿಂದ ಯೋಜನೆ ಜಾರಿಗೆ ಬರಲಿದೆ. 200 ಯೂನಿಟ್ ಒಳಗೆ ಇದ್ದರೂ ಹೆಚ್ಚುವರಿ ಟ್ಯಾಕ್ಸ್ ಅನ್ವಯ ಆಗುತ್ತದೆ.

ಹೆಚ್ಚುವರಿಯಾಗಿ ಯೂನಿಟ್ಗೆ 9% ಟ್ಯಾಕ್ಸ್ ಬೀಳುತ್ತದೆ. ಆದರೆ ಫಿಕ್ಸ್ಡ್ ಚಾರ್ಜ್ ಇರಲ್ಲ ಎಂದು ಮಾಹಿತಿ (Electricity bill new rules) ನೀಡಿದರು.

ನೋಂದಣಿ ಹೇಗೆ?
– ಆಧಾರ್, ಆರ್ಆರ್, ನಂಬರ್ಗಳನ್ನು ಲಿಂಕ್ ಮಾಡಬೇಕು.

– ಸ್ವಂತ ಮನೆ ಇಲ್ಲದವರು ಬಾಡಿಗೆ ಕರಾರು ಪತ್ರ ನೀಡಬೇಕು.

– ಬಾಡಿಗೆ ಕರಾರು ಪತ್ರ ನೋಟರಿ ಅಥವಾ ರಿಜಿಸ್ಟರ್ ಯಾವುದಾದರೂ ನಡೆಯುತ್ತದೆ.

– ಸೇವಾ ಸಿಂಧು ಪೋರ್ಟಲ್ನಲ್ಲಿ ಯೋಜನೆಗಾಗಿ ಅಪ್ಲೈ ಮಾಡಬೇಕು.

– ಕನೆಕ್ಷನ್ ಐಡಿ, ಸ್ವಂತ ಕನೆಕ್ಷನ್ ಇದ್ದರೆ ಹೆಚ್ಚುವರಿ ಮಾಹಿತಿ ಬೇಡ.

– ಸ್ವಯಂ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದು.

– ಸುಳ್ಳು ಮಾಹಿತಿ ನೀಡಿ ಯೋಜನೆಯ ಲಾಭ ಪಡೆದರೆ, ಅವರ ವಿರುದ್ದ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಯೋಜನೆಯನ್ನು ರದ್ದುಪಡಿಸಲಾಗುವುದು.

Exit mobile version