ವಾಷಿಂಗ್ಟನ್: ಹೊಸ ಕೃತಕ ಬುದ್ಧಿಮತ್ತೆಯ (Artificial Intelligence) ಸ್ಟಾರ್ಟ್ ಅಪ್ ‘ಎಕ್ಸ್ಎಐ’ (xAI) ಅನ್ನು ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಪ್ರಾರಂಭಿಸಿದ್ದಾರೆ. ಇದೀಗ ಮಸ್ಕ್ ಎಐ (AI) ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ಓಪನ್ ಎಐನ (OpenAI) ಚಾಟ್ ಜಿಪಿಟಿಗೆ (ChatGPT) ಸೆಡ್ಡು ಹೊಡೆಯಲು ಇದೀಗ ಮುಂದಾಗಿದ್ದಾರೆ.

ಈಗಾಗಲೇ ಟ್ವಿಟ್ಟರ್‌ನ(Twitter) ಮಾಲೀಕನಾಗಿರುವ, ಎಲೆಕ್ಟ್ರಿಕ್ ಕಾರು(Electric car) ತಯಾರಿಕಾ ಕಂಪನಿ ಟೆಸ್ಲಾ(Tesla), ಮತ್ತು ರಾಕೆಟ್ ಉಡಾವಣಾ ಕಂಪನಿ ಸ್ಪೇಸ್‌ಎಕ್ಸ್‌ನ ಸಿಇಒ(CEO) ಆಗಿರುವ ಮಸ್ಕ್ ಈಗ ಎಐ ಲೋಕದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.
ಎಐ ಅಭಿವೃದ್ಧಿಯನ್ನು ನಿಲ್ಲಿಸಬೇಕು. ಈ ವಲಯದಲ್ಲಿ ನಿಯಂತ್ರಣದ ಅಗತ್ಯವಿದೆ. ಇದು ನಾಗರಿಕತೆಯ ವಿನಾಶಕ್ಕೆ ಕಾರಣವಾಗಬಹುದು, ಹಾಗೂ ಇದರಿಂದ ದೊಡ್ಡ ಅಪಾಯದ ಸಾಧ್ಯತೆಯಿದೆ ಎಂದು ಈ ಹಿಂದೆ ಮಸ್ಕ್ ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರು.
ಆದ್ರೆ ಈಗ ತನ್ನದೇ ಎಐ ಕಂಪನಿಯನ್ನು ಪ್ರಾರಂಭ ಮಾಡಿರುವ ಮಸ್ಕ್, ಸುರಕ್ಷಿತ ರೀತಿಯಲ್ಲಿ ಎಐ ಅನ್ನು ನಿರ್ಮಿಸುವ ತನ್ನ ಯೋಜನೆಯನ್ನು ವಿವರಿಸಿದ್ದಾರೆ. ಎಐಗೆ ನೈತಿಕತೆಯನ್ನು ಪ್ರೋಗ್ರಾಮಿಂಗ್(Programming) ಮಡುವ ಬದಲು ಹೆಚ್ಚಿನ ಕುತೂಹಲಕಾರಿ ಅಂಶವನ್ನು ಅವರು ಎಕ್ಸ್ಎಐಯಲ್ಲಿ ರಚಿಸಲು ಪ್ರಯತ್ನಿಸುತ್ತಿರುವುದಾಗಿ ಸ್ಪಷ್ಟ ಪಡಿಸಿದ್ದಾರೆ.

ಇನ್ನು ಕೇವಲ 5-6 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ ಅಥವಾ ಮನುಷ್ಯರಿಗಿಂತಲೂ ಚುರುಕಾದ ಸೂಪರ್ ಇಂಟೆಲಿಜೆನ್ಸ್ ಬರಲಿದೆ ಎಂದು ಮಸ್ಕ್ ಭವಿಷ್ಯ ನುಡಿದಿದ್ದಾರೆ. 2015ರಲ್ಲಿ ಮಸ್ಕ್ ಈ ಹಿಂದೆ ಓಪನ್ ಎಐನ ಸಹ ಸಂಸ್ಥಾಪಕರಾಗಿದ್ದರು. ಆದರೆ ಅವರು ಕಂಪನಿಯ ಆಡಳಿತ ಮಂಡಳಿಯಿಂದ 2018ರಲ್ಲಿ ಹೊರಬಂದು ಇದೀಗ ಮೈಕ್ರೊಸಾಫ್ಟ್ ಓಪನ್ ಎಐನಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
ರಶ್ಮಿತಾ ಅನೀಶ್