ಟೆಸ್ಲಾ ಸಿಎಒ ಎಲಾನ್ ಮಸ್ಕ್ (Elon Musk) ತೆಕ್ಕೆಗೆ ಹೋದ ಬಳಿಕ ಇದೀಗ ಟ್ವಿಟರ್ (Meta launches Threads app) ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಇದರ ನುಡವೆ ಮೈಕ್ರೋ ಬ್ಲಾಗಿಂಗ್
ಪ್ಲಾಟ್‌ಫಾರ್ಮ್ ಹೊಸ ಹೊಸ ನಿಯಮ ತಂದಿದ್ದಾರೆ ಆದ್ದರಿಂದ ತನ್ನ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿ ಟ್ವಿಟರ್ ತನ್ನ ಖಾತೆದಾರರನ್ನು ಕಳೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೆ ಪ್ರತಿ ನಿತ್ಯ ನಿಗದಿತ ಪೋಸ್ಟ್‌ಗಳ
ವೀಕ್ಷಣೆ ಮಾಡುವ ಮಿತಿಯನ್ನು ಮೊನ್ನೆಯಷ್ಟೆ ಟ್ವಿಟ್ಟರ್ (Meta launches Threads app) ಹೇರಿದೆ.

ಇದರಿಂದ ಅನೇಕರು ಆಕ್ರೋಶಗೊಂಡು ಇದರಿಂದ ಕೋಪಗೊಂಡು ಟ್ವಿಟ್ಟರ್ ಬಗ್ಗೆ ಟ್ವಿಟ್ಟರ್ನಲ್ಲಿಯೇ ಆಕ್ರೋಶ ಹೊರಹಾಕುತ್ತಿದ್ದಾರೆ.ಇದೀಗ ಮೆಟಾ (Meta) ಸಂಸ್ಥೆ ಇದರ ನಡುವೆ ಥೇಟ್ ಟ್ವಿಟ್ಟರ್
ಮಾದರಿಯ ಹೊಸ ಆ್ಯಪ್ ಒಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಮೆಟಾ ಸಂಸ್ಥೆಯ ಸಂವಾದಕ್ಕೆ ಅವಕಾಶವಿರುವ ”ಥ್ರೆಡ್ಸ್” (Threads)ಎಂಬ ನೂತನ ಅಪ್ಲಿಕೇಷನ್ ಆ್ಯಪ್(APP) ಆಗಿದೆ.
ಇದೇ ಗುರುವಾರ ಜುಲೈ 6 ರಂದು ಈ ಆ್ಯಪ್ ಬಿಡುಗಡೆ ಆಗಲಿದೆ.
ಇದನ್ನೂ ಓದಿ : ಭಾರತದಿಂದ ಬ್ಯಾಂಕಾಕ್‌ಗೆ ಶೀಘ್ರದಲ್ಲಿಯೇ ಹೆದ್ದಾರಿ : ಥೈಲ್ಯಾಂಡ್‌ಗೆ ಈ ಹೆದ್ದಾರಿ ಶಾರ್ಟ್‌ಕಟ್
ಇದು ಟ್ವಿಟ್ಟರ್‌ಗೆ ಪರ್ಯಾಯವಾಗಿರುವ ಹೊಸ ಆ್ಯಪ್ ಎನ್ನಲಾಗುತ್ತಿದೆ. ಇನ್ಸ್ಟಾಗ್ರಾಮ್ (Instagram) ಅಕೌಂಟ್ಗೆ ಲಿಂಕ್ ಮಾಡುವ ಮೂಲಕ ಥ್ರೆಡ್ಸ್ ಅನ್ನು ಬಳಕೆದಾರರು ಉಪಯೋಗಿಸಬಹುದು.
ಇನ್ಸ್ಟಾದ ಯೂಸರ್ ನೇಮ್ (User Name) ನಲ್ಲೇ ಥ್ರೆಟ್ಸ್ನಲ್ಲೂ ಕೂಡ ಮುಂದುವರೆಸಬಹುದು. ಆದರೆ, ಈ ಆ್ಯಪ್ ಬಗ್ಗೆ ಗೂಗಲ್ ಪ್ಲೇ ಸ್ಟೋರ್ನಲ್ಲಿ (Google Play Store) ಯಾವುದೇ ಮಾಹಿತಿಯಿಲ್ಲ.
ಆ್ಯಪಲ್ನ ಆ್ಯಪ್ ಸ್ಟೋರ್‌ನ (Apple APP Store)ಪಟ್ಟಿಯಲ್ಲಿ ಬದಲಾಗಿ ಇದು ಕಾಣಿಸಿಕೊಂಡಿದೆ.

ಟ್ವಿಟ್ಟರ್ ಮಾದರಿಯಲ್ಲೇ ಥ್ರೆಡ್ಸ್ ಎಂಬ ಆ್ಯಪ್ ಇರಲಿದೆ ಎನ್ನಲಾಗಿದೆ. ಅಂದರೆ ಇದರಲ್ಲಿ ಸಹ ನೀವು ಲೈಕ್ಸ್ (Likes), ಕಮೆಂಟ್ (Comment), ಶೇರ್ (Share), ಬರಹಗಳನ್ನು ಬರೆಯಬಹುದು. ಬೇರೆಯವರನ್ನು
ಫಾಲೋ ಕೂಡ ಮಾಡಬಹುದು. ಟ್ವೀಟ್, ರೀಟ್ವೀಟ್ (Retweet) ಎಂಬ ಆಯ್ಕೆ ಟ್ವಿಟ್ಟರ್‌ನಲ್ಲಿ ಇತ್ತು. ಇದೇ ಮಾದರಿಯಲ್ಲಿ ಬೇರೆ ಆಯ್ಕೆ ಥ್ರೆಡ್ಸ್ನಲ್ಲಿ ಇರಲಿದೆ. ವಿಶೇಷ ಕಾಲಂ ಟ್ರೆಂಡಿಂಗ್ ಸುದ್ದಿ ಬಗ್ಗೆ ಇರುವ ಸಾಧ್ಯತೆ ಇದೆ.
ಇದರಲ್ಲೂ ವೆರಿಫೈಡ್ ಬ್ಯಾಡ್ಜ್ (Verified Badge) ಬರಲಿದೆ ಎನ್ನಲಾಗಿದೆ.
ಇದನ್ನೂ ಓದಿ : ಸದ್ಯದಲ್ಲೇ ರದ್ದಾಗಲಿರುವ 2000 ರೂ ನೋಟುಗಳನ್ನು ಮನೆಗೇ ಬಂದು ಸ್ವೀಕರಿಸಲಿದೆ ಅಮೆಜಾನ್
ಟ್ವಿಟ್ಟರ್ ಬಳಕೆದಾರರು ಕಳೆದ ಎರಡು ದಿನಗಳಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನೂತನ ನಿಯಮಗಳನ್ನು ರೂಪಿಸಿ ಅನೇಕ ಆಯ್ಕೆಗಳಿಗೆ ಎಲಾನ್ ಮಸ್ಕ್ ಕಡಿವಾಣ ಹಾಕುತ್ತಿದ್ದಾರೆ ಎಂದು ಬಳಕೆದಾರರು
ದೂರುತ್ತಿದ್ದಾರೆ. ಒಂದು ದಿನಕ್ಕೆ ಟ್ವಿಟ್ಟರ್‌ನಲ್ಲಿ ಇಂತಿಷ್ಟೇ ಪೋಸ್ಟ್‌ಗಳನ್ನ ಓದಬಹುದು ಎಂಬ ಮಿತಿಯನ್ನು ಮೊನ್ನೆಯಷ್ಟೆ ಎಲಾನ್ ಮಸ್ಕ್ ವಿಧಿಸಿದ್ದರು. ಟ್ವಿಟ್ಟರ್ ಡೌನ್ ಆಗಿ ಇದರಿಂದ ತನ್ನ ಸೇವೆಯಲ್ಲಿ
ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಜನ ಅಸಮಾಧಾನ ಕೂಡ ಹೊರಹಾಕಿದ್ದರು.
ಅನೇಕರ ಕೆಂಗಣ್ಣಿಗೆ ಮಸ್ಕ್ ಅವರ ಈ ನಿರ್ಧಾರ ಗುರಿಯಾದ ಬಳಿಕ ಈ ನಿಯಮದಲ್ಲಿ ಮಸ್ಕ್ ಕೊಂಚ ಬದಲಾವಣೆ ಮಾಡಿದ್ದರು. ಕೆಲ ಪೋಸ್ಟ್‌ಗಳ ಮೂಲಕ ಕೆರಳಿಸುವ ಪ್ರಯತ್ನ ಮಾಡುತ್ತಿರುವುದು, ಅನಗತ್ಯ ಡೇಟಾ
ಬಳಕೆ ಮಾಡೋದನ್ನ ತಪ್ಪಿಸುವುದು ಸೇರಿದಂತೆ ಹಲವು ವಿಷಯಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಟ್ವಿಟ್ಟರ್ ಪ್ರತಿದಿನದ ಪೋಸ್ಟ್ ಓದಲು ಮಿತಿ ವಿಧಿಸಿತ್ತು. ಇದು ತಾತ್ಕಾಲಿಕ ಕ್ರಮವಾಗಿದೆ ಎಂಬ ಹೇಳಿಕೆ ನೀಡಿದ್ದರು.
ರಶ್ಮಿತಾ ಅನೀಶ್