ಕೋರಮಂಗಲ ಅಗ್ನಿ ದುರಂತ: ಫೋರಂಮಾಲ್‌ ಮುಂಭಾಗದ ಮಡ್‌ಪೈಪ್‌ ಕೆಫೆಯಲ್ಲಿ ಭಾರೀ ಸ್ಪೋಟ, ಸುಟ್ಟು ಕರಕಲಾದ ಮಹಡಿಗಳು

Bengaluru: ಕೋರಮಂಗಲದ ಫೋರಂ ಮಾಲ್‌ (Forum Mall) ಮುಂಭಾಗದ ಮಡ್‌ಪೈಪ್‌ ಕೆಫೆಯಲ್ಲಿ ಭಾರೀ ಸ್ಪೋಟ (fire accident in Koramangala) ಸಂಭವಿಸಿದ್ದು, ಪ್ರಾಣ

ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಪ್ರೇಮ್ ಎಂಬ ವ್ಯಕ್ತಿ ಜಿಗಿದಿದ್ದಾರೆ. ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ (Nimhans Hospital) ದಾಖಲಿಸಲಾಗಿದ್ದು, ಅದೃಷ್ಟವಶಾತ್ ಯಾವುದೇ

ಜೀವಹಾನಿ (fire accident in Koramangala) ಸಂಭವಿಸಿಲ್ಲ.

ಈ ಘಟನೆ ನಡೆದದ್ದು ಮಧ್ಯಾಹ್ನ ಸಮಯವಾದ್ದರಿಂದ ಹೆಚ್ಚಿನ ಸಿಬ್ಬಂದಿಗಳು ಇರಲಿಲ್ಲ. ಕೆಫೆಯಲ್ಲಿ ಯಾರೂ ಗ್ರಾಹಕರೂ ಇಲ್ಲ ಎಂಬುದು ತಿಳಿದು ಬಂದಿದೆ. ನೆಕ್ಸಾ ಶೋರೂಂ (Nexa Showroom)

ಕಾರುಗಳಿಗೆ ಹಾನಿಯಾಗಿದೆ. ಬೆಂಕಿ ಹೊತ್ತಿ ಉರಿಯುತ್ತಿದ್ದ ವೇಳೆ ಕೆಫೆ ಸಿಬ್ಬಂದಿ ಪ್ರೇಮ್‌ ಎಂಬುವವರು ನಾಲ್ಕನೇ ಮಹಡಿಯಿಂದ ಏಕಾಏಕಿ ಜೀವ ಉಳಿಸಿಕೊಳ್ಳಲು ಕೆಳಗೆ ಧುಮುಕಿದ್ದಾರೆ. ಕೈಕಾಲಿಗೆ

ಏಟಾಗಿರುವ ಹಿನ್ನೆಲೆ ತಕ್ಷಣ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅಡುಗೆ ಅನಿಲದ ಸಿಲಿಂಡರ್‌ಗಳು ಸ್ಪೋಟ
ದಟ್ಟ ಹೊಗೆ ಆವರಿಸಿದ ಕೆಲ ಹೊತ್ತಲ್ಲೇ ಕಟ್ಟಡದ ಮಹಡಿಯಲ್ಲಿ ಭಾರೀ ಪ್ರಮಾಣದ ಸದ್ದಿನೊಂದಿಗೆ ಅಡುಗೆ ಅನಿಲದ 4 ಸಿಲಿಂಡರ್‌ಗಳು (Cylinder) ಸ್ಫೋಟಗೊಂಡಿದ್ದು, ತಕ್ಷಣವೇ ಸ್ಥಳಕ್ಕಾಗಮಿಸಿದ

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹುಕ್ಕಾ ಬಾರ್ ಸಂಜೆ ನಂತರ ಶುರುವಾಗಿರುವುದರಿಂದ ಸಿಬ್ಬಂದಿಗಳು ಮಾತ್ರ ಇದ್ದು, ಯಾವುದೇ ಗ್ರಾಹಕರು ಇರಲಿಲ್ಲ.

ಜೊತೆಗೆ ಅದೇ ಕಟ್ಟಡದ ಮಹಡಿಯಲ್ಲಿದ್ದ ಕಲ್ಟ್ ಫಿಟ್ (Cultfit) ಖಾಲಿ ಇತ್ತು. ಶೋ ರೂಂ ಹಾಗೂ ಅಕಾಡೆಮಿಯಲ್ಲಿದ್ದ ಸಿಬ್ಬಂದಿಗಳು ಹೊರಗೆ ಓಡಿ ಬಂದಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ

ಎಂಬ ಮಾಹಿತಿ ತಿಳಿದು ಬಂದಿದೆ.

ಇದನ್ನು ಓದಿ: ರಾಗಿಗುಡ್ಡದ ಹಿಂದೂ ಸಮುದಾಯದವರಿಗೆ ಸಾಂತ್ವನ ಹೇಳಲು ಹೊರಟಿದ್ದವನ ಬಂಧನ: ಪ್ರಮೋದ್‌ ಮುತಾಲಿಕ್‌ ಆಕ್ರೋಶ

Exit mobile version