ಹೈದರಾಬಾದ್ E-ಬೈಕ್ ಶೋರೂಮ್‌ನಲ್ಲಿ ಬೆಂಕಿ ಕಾಣಿಸಿಕೊಂಡು 8 ಜನರ ಸಾವು ; ಬೈಕ್ ಜಾರ್ಜಿಂಗ್ ಬೆಂಕಿಗೆ ಕಾರಣ ಎಂಬ ಶಂಕೆ!

Hyderabad : ಸೋಮವಾರ(Monday) ರಾತ್ರಿ ಸಿಕಂದರಾಬಾದ್‌ನ(Sinkhandarbad) ಎಲೆಕ್ಟ್ರಿಕ್ ವೆಹಿಕಲ್ ಶೋರೂಮ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಎಂಟು ಜನರು ಸಾವನ್ನಪ್ಪಿದ್ದಾರೆ.

ಘಟನೆಯ ಸಮಯದಲ್ಲಿ ಕನಿಷ್ಠ 25 ಜನರು ಕಟ್ಟಡದಲ್ಲಿ ಸಿಲುಕಿಕೊಂಡಿದ್ದು, ಅವರಲ್ಲಿ ಕೆಲವರು ತಮ್ಮ ಕಿಟಕಿಗಳಿಂದ ಪ್ರಾಣ ಉಳಿಸಿಕೊಳ್ಳಲು ಜಿಗಿದಿದ್ದಾರೆ ಮತ್ತು ಕೆಲವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ ಎನ್ನಲಾಗಿದೆ. ರಾತ್ರಿ 10 ಗಂಟೆ ಸುಮಾರಿಗೆ ಇ-ಬೈಕ್ ಶೋರೂಂನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಕಟ್ಟಡವನ್ನು ಆವರಿಸಿ ಶೋರೂಂ ಮೇಲಿರುವ ಹೋಟೆಲ್‌ಗೂ ವ್ಯಾಪಿಸಿದೆ.

ಕಟ್ಟಡದ ನೆಲಮಾಳಿಗೆ ಮತ್ತು ನೆಲಮಹಡಿಯಲ್ಲಿದ್ದ ವಿದ್ಯುತ್ ದ್ವಿಚಕ್ರ ವಾಹನಗಳ ಶೋರೂಂನಿಂದ ಬೆಂಕಿ ಕಾಣಿಸಿಕೊಂಡಿದ್ದು, ವಾಣಿಜ್ಯ ಕಟ್ಟಡದ ಮೊದಲ ಮಹಡಿಯಿಂದ ಇತರ ಮಹಡಿಗಳಿಗೆ ಜ್ವಾಲೆ ಹಾರಿದೆ. ಬೆಂಕಿಯಿಂದ ಪಾರಾಗಲು ಕೆಲವರು ಹೋಟೆಲ್‌ನ ಕಿಟಕಿಯಿಂದ ಜಿಗಿಯಲು ಯತ್ನಿಸಿದರು ಎನ್ನಲಾಗಿದೆ.

https://youtu.be/CG46eo19uLg

GEMOPAI ಬ್ರಾಂಡ್‌ನ ಸುಮಾರು 35-40 ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜಿಂಗ್ ಘಟಕಗಳೊಂದಿಗೆ ಕಟ್ಟಡದ ನೆಲಮಾಳಿಗೆಯಲ್ಲಿ ನಿಲ್ಲಿಸಲಾಗಿದೆ. ನೆಲಮಹಡಿಯಲ್ಲಿ ನಿಲ್ಲಿಸಿದ್ದ ಇ-ಬೈಕ್‌ಗಳನ್ನು ಚಾರ್ಜ್‌ನಲ್ಲಿ ಇರಿಸಲಾಗಿದ್ದು, ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಅಗ್ನಿಶಾಮಕ(Fire Station) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬಹುಮಹಡಿ ಕಟ್ಟಡದಲ್ಲಿ ಸಿಲುಕಿದ್ದ ಏಳು ಜನರನ್ನು ರಕ್ಷಿಸಿದ್ದಾರೆ ಮತ್ತು ಶೀಘ್ರವೇ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದಾರೆ. ಪೊಲೀಸರು ನೀಡಿರುವ ವರದಿ ಅನುಸಾರ,

ಬೆಂಕಿಗೆ ಶಾರ್ಟ್ ಸರ್ಕ್ಯೂಟ್ ಅಥವಾ ಸೆಲ್ಲಾರ್‌ನಲ್ಲಿ ಅಥವಾ ಸ್ಕೂಟರ್ ಶೋರೂಂ ಇರುವ ಮೊದಲ ಮಹಡಿಯಲ್ಲಿ ಬ್ಯಾಟರಿಗಳು ಚಾರ್ಜ್ ಆಗಿದ್ದರಿಂದ ನಿಖರವಾದ ಕಾರಣಗಳು ಅಗ್ನಿಶಾಮಕ ಇಲಾಖೆಯ ತನಿಖೆಯ ಬಳಿಕ ತಿಳಿಯಲಿದೆ. ಹೋಟೆಲ್‌ನಲ್ಲಿ ಎಲ್ಲಾ ನಾಲ್ಕು ಮಹಡಿಗಳಲ್ಲಿ 23 ಕೊಠಡಿಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : https://vijayatimes.com/nithish-kumar-jdu-gets-shock/

ಬೆಂಕಿ ಹೊತ್ತಿಕೊಂಡ ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ತೆಲಂಗಾಣ ಸಚಿವ ಕೆ.ಟಿ ರಾಮರಾವ್ ಅವರು ಜೀವಹಾನಿಗೆ ಸಂತಾಪ ಸೂಚಿಸಿದರು ಮತ್ತು ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರವಾಗಿ ಪರಿಹಾರವನ್ನು ಘೋಷಿಸಿದ್ದಾರೆ.

Exit mobile version