ಭಾರತದಲ್ಲಿರುವ ವಿಶಿಷ್ಟ ಅಂಚೆ ಕಚೇರಿಗಳು ; ತೇಲುವ ಅಂಚೆ ಕಚೇರಿಯ ಬಗ್ಗೆ ಕೇಳಿದ್ದೀರಾ?

Kashmir : ನಮ್ಮ ದೇಶವು 1,55,015 ಅಂಚೆ ಕಚೇರಿಗಳಿರುವ(Post Office) ವಿಶ್ವದ ಅತ್ಯಂತ ದೊಡ್ಡ ಅಂಚೆ ಜಾಲವನ್ನು ಹೊಂದಿದೆ. ಭಾರತದ ಒಂದು ಸಣ್ಣ ಅಂಚೆ ಕಚೇರಿಯು ಸಹ ಅಂದಾಜು 7,175 ಜನರಿಗೆ ಸೇವೆಯನ್ನು ಸಲ್ಲಿಸುತ್ತದೆ.

ಆದರೆ ಇತ್ತೀಚಿನ ಅಧುನಿಕ ತಂತ್ರಜ್ಞಾನಗಳ ಹಾವಳಿಯಲ್ಲಿ (Floating Post Office In India) ಅಂಚೆ ಕಛೇರಿಗಳಿಗೆ ಹೋಗುವವರ ಸಂಖ್ಯೆಯೇ ಕಡಿಮೆಯಾಗಿರುವುದು ನಮಗೆಲ್ಲ ತಿಳಿದಿದೆ.

ಇಂತಹ ಸಂದರ್ಭದಲ್ಲಿ ಕೂಡ, ನಮ್ಮಲ್ಲಿ ಕೆಲವು ವಿಶೇಷವಾದ ಮತ್ತು ವಿಲಕ್ಷಣವಾದ ಅಂಚೆ ಕಚೇರಿಗಳಿವೆ. ಹೌದು, ಜಗತ್ತಿನ ಅತ್ಯಂತ ದೊಡ್ಡ ಅಂಚೆ ಸಂಪರ್ಕವಾದ ಭಾರತಲ್ಲಿ ಕೆಲವು ಅಸಾಮಾನ್ಯ ಜಾಗಗಳಲ್ಲಿ ಅಂಚೆ ಕಚೇರಿಗಳಿವೆ.

ಹಿಮಾಚಲ ಪ್ರದೇಶದ (Himachal Pradesh) ಹಿಕ್ಕಿಂನಲ್ಲಿ ಜಗತ್ತಿನ ಅತ್ಯಂತ ಎತ್ತರದ ಸ್ಥಳದಲ್ಲಿರುವ ಅಂಚೆ ಕಚೇರಿಯಿದೆ, ಇದು ಜಗತ್ತಿನ ಅತ್ಯಂತ ಎತ್ತರದ ಮತದಾನ (Voting) ಕೇಂದ್ರವೂ ಆಗಿದೆ.

ಇದು ಸುಮಾರು 15,400 ಅಡಿ ಎತ್ತರದಲ್ಲಿದೆ. ದಾಲ್ ಸರೋವರವು ಕಾಶ್ಮೀರದಲ್ಲಿರುವ ಅತ್ಯಂತ ದೊಡ್ಡ ಸರೋವರ.

ಈ ಸರೋವರದ ಅಂಚಿನಲ್ಲಿ ನೆಲೆಸಿರುವ ಜನರ ಸೇವೆಗಾಗಿ ಭಾರತದ ಅಂಚೆ ಇಲಾಖೆಯು 2011ರಲ್ಲಿ ಒಂದು ತೇಲುವ ಅಂಚೆ ಕಚೇರಿಯನ್ನು ಸ್ಥಾಪಿಸಿತು.

ಇದನ್ನೂ ಓದಿ : https://vijayatimes.com/chethan-ahimsa-statement/

ಇದು ಹಡಗಿನಲ್ಲಿಯೇ ಕಾರ್ಯನಿರ್ವಹಿಸುತ್ತದೆ, ಮತ್ತು ಜನರ ಮನೆಗಳ ಬಳಿಗೆ ಸಾಗುತ್ತದೆ. ಹೌದು, ಇಂತಹ ಅಚ್ಚರಿ ತರುವ ಪೋಸ್ಟ್‌ ಆಫೀಸ್ ಕಾಶ್ಮೀರದ(Kashmir) ಶ್ರೀನಗರದಲ್ಲಿದೆ(Srinagar).

ನಮ್ಮ ದೇಶದ ಮುಕುಟ ಮಣಿ ಕಾಶ್ಮೀರ ಪ್ರಕೃತಿ ಸೌಂದರ್ಯಕ್ಕೂ ಹೆಸರುವಾಸಿ.

ಇಲ್ಲಿನ ಅದ್ಭುತ ಪರಿಸರ ಎಂತಹವರನ್ನೂ ಸೆಳೆದು ಬಿಡುತ್ತದೆ. ಇಂತಹ ಸ್ವರ್ಗದಂತಹ ಪರಿಸರದಲ್ಲಿ ತೇಲುವ ಪೋಸ್ಟ್‌ ಆಫೀಸ್ ಇದೆ, ಇದು ಭಾರತದಷ್ಟೇ ಅಲ್ಲ, ವಿಶ್ವದಲ್ಲೇ ಪ್ರಥಮ ತೇಲುವ ಅಂಚೆ ಕಚೇರಿ.

ದಾಲ್ ಸರೋವರದಲ್ಲಿ ಇಂತಹ ಅಪೂರ್ವ ತೇಲುವ ಪೋಸ್ಟ್‌ ಆಫೀಸ್ ಇದೆ.

https://fb.watch/g0SRORpO99/ ರಸ್ತೆ ಮಧ್ಯೆ ತೆಗೆದ ಗುಂಡಿಯನ್ನು ಮುಚ್ಚದ ಅಧಿಕಾರಿಗಳು ; ಸಾರ್ವಜನಿಕರ ಆಕ್ರೋಶ

2011ರಲ್ಲಿ ಓಮರ್ ಅಬ್ದುಲ್ಲಾ ಜಮ್ಮು ಕಾಶ್ಮೀರದ ಸಿಎಂ ಆಗಿದ್ದ ಸಂದರ್ಭದಲ್ಲಿ ಈ ತೇಲುವ ಪೋಸ್ಟ್‌ ಆಫೀಸನ್ನು(Floating Post Office In India) ಉದ್ಘಾಟಿಸಿದ್ದರು.

ಆಗಿನ ಕೇಂದ್ರ ಸಚಿವ ಸಚಿನ್ ಪೈಲಟ್ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಅಂಚೆ ಕಚೇರಿಯಿಂದ ಸ್ಥಳೀಯರಿಗೆ ತುಂಬಾ ಲಾಭವಾಗುತ್ತಿದೆ, ಜೊತೆಗೆ ಪ್ರವಾಸಿಗರು ಕೂಡಾ ದಿನನಿತ್ಯ ಇಲ್ಲಿಗೆ ಭೇಟಿ ಕೊಡುತ್ತಾರೆ.

ಜೊತೆಗೆ, ಇಲ್ಲಿಂದಲೇ ತಮ್ಮ ಪ್ರೀತಿಪಾತ್ರರಿಗೆ ಪತ್ರವನ್ನು ಕಳುಹಿಸಿ ಖುಷಿ ಪಡುತ್ತಾರೆ.

ಕಾಶ್ಮೀರದ ದಾಲ್ ಸರೋವರದಲ್ಲಿ ತೇಲುವ ಅಂಚೆ ಕಚೇರಿಯ ಜೊತೆಗೆ ಶ್ರೀನಗರದ ಪ್ರಸಿದ್ಧ ದೋಣಿ ಮನೆಗಳನ್ನು ಎಂದರೆ ಹೌಸ್ ಬೋಟ್ಸ್ ಗಳನ್ನು ಹೋಲುವ ಅಂಚೆ ಚೀಟಿಗಳ ಸಂಗ್ರಹಾಲಯವೂ ಇದೆ.

ಇದನ್ನೂ ಓದಿ : https://vijayatimes.com/cricketer-shami-gets-threat-call/

ಎಪ್ಪತ್ತರ ದಶಕದಲ್ಲಿ ಕೆಲವು ರಾಜಸ್ಥಾನದ ಪಟ್ಟಣಗಳನ್ನು ಚಲಿಸುವ ಒಂಟೆ ಅಂಚೆ ಕಚೇರಿಯ ಮೂಲಕ ಸಂಪರ್ಕಿಸಲಾಗುತ್ತಿತ್ತು. ಇದೇ ರೀತಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಚಲಿಸುವ ಹೇಸರಗತ್ತೆಯ(Zebra) ಅಂಚೆ ಕಚೇರಿಗಳಿದ್ದವು.
Exit mobile version