ಮಲಬದ್ಧತೆಯನ್ನು ತಪ್ಪಿಸಲು ಈ ಆಹಾರವನ್ನು ನಿಯಮಿತವಾಗಿ ಸೇವಿಸಿ: ರಿಸಲ್ಟ್‌ ನೋಡಿ ಅಚ್ಚರಿ ಪಡ್ತೀರಾ !

Health tips : ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ(Constipation) ಸಮಸ್ಯೆ ಅನೇಕರಿಗೆ ಬಹಳ ಸಾಮಾನ್ಯ ಸಮಸ್ಯೆಯಾಗಿ ಕಾಡುತ್ತಿದೆ. ಮಲಬದ್ಧತೆ ಸಮಸ್ಯೆಯಿಂದ ಮುಕ್ತರಾಗಲು (foods for constipation problem) ಇಲ್ಲಿದೆ ಕೆಲವು ಉಪಯುಕ್ತ ಮಾಹಿತಿ ತಪ್ಪದೇ ಅನುಸರಿಸಿ.


ಮಲಬದ್ಧತೆ ಸಮಸ್ಯೆಯನ್ನು ತಪ್ಪಿಸಲು ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ! ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಪ್ರತ್ಯೇಕವಾಗಿ ಈ ಆಹಾರಗಳನ್ನು ಸೇರಿಸಿಕೊಳ್ಳುವುದು ಉತ್ತಮ. ಮಲಬದ್ಧತೆ ಮತ್ತು ಇತರ ಜೀರ್ಣಕ್ರಿಯೆಯ(Digestion) ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಈ ಆಹಾರಗಳು ಪರಿಣಾಮಕಾರಿಯಾಗಿದೆ.

ಕಿವಿ ಹಣ್ಣು(kiwi fruit) : ಕಿವಿ ಹಣ್ಣು ಮಲಬದ್ಧತೆ ಸಮಸ್ಯೆಗೆ ಹೇಳಿ ಮಾಡಿಸಿದ ಔಷಧಿ ಎಂದೇ ಹೇಳಬಹುದು. ಕಿವಿ ಹಣ್ಣಿನಲ್ಲಿ ಫೈಬರ್(Fiber) ಅಂಶ ಅಧಿಕವಾಗಿದ್ದು, ಇದು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಕಿವಿ ಹಣ್ಣಿನಲ್ಲಿರುವ ಆಕ್ಟಿನಿಡಿನ್ ಎಂಬ ಕಿಣ್ವವು ಕರುಳಿನ ಚಲನಶೀಲತೆಯ ಮೇಲೆ ಗಮನಹರಿಸುತ್ತದೆ.

ನೀವು ಕಚ್ಚಾ ಕಿವೀಸ್ ಅನ್ನು ಸೇವಿಸಬಹುದು. ಕಿವಿ ಹಣ್ಣನ್ನು ಸಲಾಡ್‌ನಲ್ಲಿ (foods for constipation problem) ಸೇರಿಸಿಕೊಳ್ಳಬಹುದು, ಸ್ಮೂಥಿಗಳ ರೂಪದಲ್ಲಿ ಕೂಡ ಸೇವಿಸಬಹುದು.

ಸೇಬು(apple) : ಸೇಬು ಹಣ್ಣಿನಲ್ಲಿ ಸಹ ಬಹಳಷ್ಟು ಫೈಬರ್ ಅಂಶ ಅಡಗಿದೆ. ಸೇಬುಗಳು ಕರಗಬಲ್ಲ ಫೈಬರ್ ಅನ್ನು ಹೊಂದಿರುತ್ತವೆ.

ಹೆಚ್ಚಾಗಿ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಫೈಬರ್ ಅಂಶ ಅಗತ್ಯವಾಗಿರುತ್ತದೆ.

ಸೇಬನ್ನು ಸೇವಿಸುವುದು ಕೂಡ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖವಾಗಿದೆ.

ಸಿಹಿ ಆಲೂಗಡ್ಡೆ(sweet pototo) : ಸಿಹಿ ಆಲೂಗಡ್ಡೆಯಲ್ಲಿ ಫೈಬರ್‌ನ ಸಮೃದ್ಧ ಮೂಲವು ಕಂಡುಬರುತ್ತದೆ. ಆದ್ರೆ, ಹೆಚ್ಚಿನ ಜನರು ಸಿಹಿ ಆಲೂಗಡ್ಡೆ ಸೇವಿಸಲು ಹಿಂದೇಟು ಹಾಕುತ್ತಾರೆ.

ಸಿಹಿ ಆಲೂಗಡ್ಡೆ ಮಲಬದ್ಧತೆ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಹೆಚ್ಚು ಸಹಾಯಕಾರಿಯಾಗಿದೆ. ಇದರಲ್ಲಿರುವ ಕರಗದ ಫೈಬರ್ ಕರುಳಿನ ಚಲನೆಗೆ ಹೆಚ್ಚು ಸಹಾಯ ಮಾಡುತ್ತದೆ.

ಚಿಯಾ ಬೀಜಗಳು(chia seeds) : ಹೆಚ್ಚಿನ ಫೈಬರ್ ಅಂಶ ಹೊಂದಿರುವ ಆಹಾರಗಳಲ್ಲಿ ಚಿಯಾ ಬೀಜಗಳು ಕೂಡ ಒಂದಾಗಿದೆ. ಚಿಯಾ ಬೀಜಗಳನ್ನು ನೀರಿನೊಂದಿಗೆ ನೆನಸಿ,

ಕುಡಿಯುವುದರಿಂದ ಮಲ ವಿಸರ್ಜನೆ ಮಾಡುವಾಗ ನೋವು ಉಂಟಾಗದೆ, ಸರಾಗವಾಗಿ ವಿಸರ್ಜನೆ ಮಾಡಲು ಸಹಾಯ ಮಾಡುತ್ತದೆ.

ಚಿಯಾ ಬೀಜಗಳನ್ನು ನೀರಿನಲ್ಲಿ ನೆನಸಿದಾಗ ಅದು 12 ಪಟ್ಟು ಹೆಚ್ಚು ಹೀರಿಕೊಳ್ಳುತ್ತವೆ ಮತ್ತು ಫೈಬರ್ ಅಂಶವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ಚಿಯಾ ಬೀಜಗಳನ್ನು ಪ್ರತಿದಿನ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಸೇವಿಸುವುದು ಉತ್ತಮ.

ಸಿಟ್ರಸ್ ಹಣ್ಣುಗಳು : ಸಿಟ್ರಸ್ ಹಣ್ಣುಗಳಲ್ಲಿ ಕಂಡುಬರುವ ಕರಗುವ ಫೈಬರ್, ವಿಶೇಷವಾಗಿ ಹಣ್ಣಿನ ಸಿಪ್ಪೆಯಲ್ಲಿ ಹೇರಳವಾಗಿದೆ. ಇದು ಮಲಬದ್ಧತೆಯನ್ನು ಸರಾಗಗೊಳಿಸುತ್ತದೆ.

ಸಿಟ್ರಸ್ ಹಣ್ಣುಗಳು ನರಿಂಗೆನಿನ್ ಎಂಬ ಫ್ಲಾವನಾಲ್ ಅಂಶವನ್ನು ಸಹ ಹೊಂದಿರುತ್ತವೆ, ನಿಮ್ಮ ದೈನಂದಿನ ಆಹಾರದಲ್ಲಿ ನಿಂಬೆಹಣ್ಣು,

ಕಿತ್ತಳೆ ಹಣ್ಣು ಸೇರಿದಂತೆ ವಿಟಮಿನ್‌ ಸಿ ಹೊಂದಿರುವ ಇತರೆ ಹಣ್ಣುಗಳನ್ನು ಸೇರಿಸಿಕೊಳ್ಳುವುದು ಉತ್ತಮ.

Exit mobile version