ಫ್ರಾನ್ಸ್ ಹಿಂಸಾಚಾರ : ಸಂಘರ್ಷಕ್ಕೆ ಕಾರಣವಾಯ್ತಾ ಮೃತನ ಧರ್ಮ..?!

Paris: ಯೂರೋಪಿನ ಪ್ರಮುಖ ಆರ್ಥಿಕ ಶಕ್ತಿಯಾಗಿರುವ ಮತ್ತು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಫ್ರಾನ್ಸ್ನಲ್ಲಿ ನಡೆಯುತ್ತಿರುವ ಹಿಂಸಾಚಾರ (France violence) ತೀವ್ರ ಸ್ವರೂಪ ಪಡೆದುಕೊಂಡಿದೆ. ಕಳೆದ ಐದು ದಿನಗಳಿಂದ

ನಡೆಯುತ್ತಿರುವ ಗಲಭೆ ನಿಯಂತ್ರಣಕ್ಕೆ ಫ್ರಾನ್ಸ್ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ನಡುವೆ ಹಿಂಸಾಚಾರಕ್ಕೆ ಪೊಲೀಸರ ಗುಂಡೇಟಿಗೆ ಬಲಿಯಾದ ಯುವಕನ ಧರ್ಮವೇ ಕಾರಣವಾಯ್ತಾ ಎಂಬ ಚರ್ಚೆ ಶುರುವಾಗಿದೆ.

ಫ್ರಾನ್ಸ್ ಅಶಾಂತಿಗೆ ಕಾರಣವಾದ (France violence) ಘಟನೆ


ಪ್ಯಾರಿಸ್ ನಗರಕ್ಕೆ ಬಂದಿದ್ದ ನಹೆಲ್ ಎಂಬ 17 ವರ್ಷದ ಅರೆಬಿಯನ್ ಮುಸ್ಲಿಂ ಯುವಕ ಮಂಗಳವಾರ ಬೆಳಗ್ಗೆ ನೆಲ್ಸನ್ ಪ್ಯಾರಿಸ್ ನಗರದ ಮಂಡೇಲಾ ಸ್ಕ್ವೇರ್ ಬಳಿಯ ಟ್ರಾಫಿಕ್ ಸ್ಟಾಪ್ನಲ್ಲಿ ಯದ್ವತದ್ವಾ

ಇದನ್ನು ಓದಿ: ಎನ್ಸಿಪಿ ಇಬ್ಬಾಗ : ವಿಪಕ್ಷಗಳ ಓಟಕ್ಕೆ ಬಿತ್ತು ಮೊದಲ ಹೊಡೆತ

ಕಾರನ್ನು ಓಡಿಸುತ್ತಿದ್ದಾಗ ಪಾದಚಾರಿಗಳ ಮೇಲೆ ಕಾರು ಹರಿಸುತ್ತಾನೆ ಎಂಬ ಕಾರಣಕ್ಕಾಗಿ ಅತ್ಯಂತ ಸಮೀಪದಿಂದ ಪೊಲೀಸ್ ಅಧಿಕಾರಿ ಆತ ಮೇಲೆ ಗುಂಡು ಹಾರಿಸಿದ್ದಾನೆ. ಪೊಲೀಸ್

ಅಧಿಕಾರಿ ಹಾರಿಸಿದ ಗುಂಡಿನ ದಾಳಿಯಲ್ಲಿ ನಹೆಲ್ ಪ್ರಾಣ ಕಳೆದುಕೊಂಡಿದ್ದಾನೆ.

ಇನ್ನು ಬೆಳಿಗ್ಗೆ 7:55 ಕ್ಕೆ ಬಸ್ ಲೇನ್ನಲ್ಲಿ ನೆಹಾಲ್ ಯದ್ವಾತದ್ವಾ ಕಾರನ್ನು ಅನ್ನು ಓಡಿಸುತ್ತಿರುವುದನ್ನು ಫ್ರೆಂಚ್ ಪೊಲೀಸರು ಗುರುತಿಸಿದ್ದಾರೆ. ಅವನ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ.

ಆದರೆ, ನಹೆಲ್ ಕಾರು ನಿಲ್ಲಿಸದ ಕಾರಣ ಆತ ಪಾದಚಾರಿಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತಾನೆಂದು ಭಾವಿಸಿ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ್ದಾರೆ. ಎದೆಗೆ ಗುಂಡು ತಗುಲಿ ನೆಹಲ್

ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ನಹೆಲ್ ಮುಸ್ಲಿಂ ಸಮುದಾಯದಕ್ಕೆ ಸೇರಿರುವ ಕಾರಣದಿಂದಲೇ ಆತನನ್ನು ಹತ್ಯೆ ಮಾಡಲಾಗಿದೆ.

ಫ್ರಾನ್ಸ್ನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಪೊಲೀಸ್ ರು ತಾರತಮ್ಯದ ನೀತಿ ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದಾರೆ.

ಇನ್ನು ಈ ಹಿಂಸಾಚಾರದ ಹಿಂದೆ ಕೆಲ ವಿದೇಶಿ ಶಕ್ತಿಗಳ ಕೈವಾಡವಿರುವ ಶಂಕೆಯನ್ನು ಫ್ರಾನ್ಸ್ ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದೊಂದು ವ್ಯವಸ್ಥಿತ ಪಿತೂರಿ ಇರುವಂತೆ ತೋರುತ್ತಿದೆ ಎನ್ನಲಾಗಿದೆ.

ಫ್ರಾನ್ಸ್ಗೆ ಬಂದಿರುವ ಇತರೆ ದೇಶಗಳ ವಲಸಗರಿಂದಲೇ ಈ ಹಿಂಸಾಚಾರ ಸೃಷ್ಟಿಯಾಗಿದೆ ಎನ್ನಲಾಗಿದೆ. ಇನ್ನು ಇದುವರೆಗೂ ಒಟ್ಟು 1,000 ಕ್ಕಿಂತ ಹೆಚ್ಚು ಜನರ ಬಂಧನವಾಗಿದೆ ಎಂದು ವರದಿಯಾಗಿದೆ.

ಫ್ರಾನ್ಸ್ನ ಗಲಭೆ ಪೀಡಿತ ಪ್ರದೇಶಗಳಲ್ಲಿ ಸುಮಾರು 45 ಸಾವಿರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

Exit mobile version