ವಿಶೇಷ ಚೇತನರಿಗೆ ಹೆದ್ದಾರಿಗಳಲ್ಲಿ ಟೋಲ್ ಫ್ರೀ : ಇಲ್ಲಿದೆ ಮಾಹಿತಿ..

India: ವಿಶೇಷ ಚೇತನರಿಗೆ(Physically challenged ) ದೇಶಾದ್ಯಂತ (Freetoll for physically challenged) ಸಂಚರಿಸಲು ಝೀರೋ ಫಾಸ್ಟ್ ಟ್ಯಾಗ್ ಸೌಲಭ್ಯ ದೊರೆಯುತ್ತದೆ ಎಂಬ

ಸಂಗತಿಯೇ ಅನೇಕ ಜನರಿಗೆ ತಿಳಿದಿಲ್ಲ. ವಿಶೇಷ ಚೇತನರು ಚಾಲನಾ ಪರವಾನಗಿ ಹೊಂದಿದ್ದರೆ ಸಾಕು ದೇಶದಾದ್ಯಂತ ಟೋಲ್ಗಳಲ್ಲಿ ಫ್ರೀಯಾಗಿ ಸಂಚರಿಸಬಹುದು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

2023ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಹೆದ್ದಾರಿ( National Highway) ಪ್ರಾಧಿಕಾರ ಹೊರಡಿಸಿರುವ ಆದೇಶದನ್ವಯ ವಿಶೇಷ ಚೇತನರು ತಮ್ಮ ಸ್ವಂತ ಹೆಸರಿನಲ್ಲಿ ವಾಹನ ಖರೀದಿಸಿ, ಆರ್ಟಿಒದಲ್ಲಿ

(RTO) ನೋಂದಣಿ ಮಾಡಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಝೀರೋ ಫಾಸ್ಟ್ ಟ್ಯಾಗ್(Zero fast tag ) ಸೌಲಭ್ಯ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನಿಮ್ಮ ಅರ್ಜಿ ಪರಿಶೀಲನೆ

ನಡೆಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶುಲ್ಕ ವಿನಾಯಿತಿ ಸೌಲಭ್ಯವನ್ನು ವಿಶೇಷಚೇತನರಿಗೆ ನೀಡುತ್ತದೆ.

ಇನ್ನು 2023ರ ಫೆಬ್ರವರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಧಿಸಿರುವ ಷರತ್ತುಗಳ ಪ್ರಕಾರ, ವಿಶೇಷ ಚೇತನರು ಸ್ವತಃ ವಾಹನವನ್ನು ಹೊಂದಿರಬೇಕು, ಆ ವಾಹನ ಅವರ ಹೆಸರಿನಲ್ಲಿಯೇ ಆರ್ಟಿಒದಲ್ಲಿ

ನೋಂದಣಿ ಆಗಿರಬೇಕು. ಅವರೇ ವಾಹನವನ್ನು ಚಲಾವಣೆ ಮಾಡಬೇಕು ಎಂದು ಆದೇಶಿಸಿತ್ತು. ಆದರೆ ಈದೀಗ ಚಾಲನ ಪರವಾನಗಿ ಪಡೆದಿರುವ ಯಾರು ಬೇಕಾದರು ಈ ವಾಹನ ಚಾಲನೆ ಮಾಡಿದರೂ

ವಿನಾಯತಿ ಲಭಿಸುವಂತೆ (Freetoll for physically challenged) ಎಂದು ಆದೇಶಿಸಿದೆ.

ಏನೆಲ್ಲಾ ನಿಯಮಗಳು:
ಸಾಮಾನ್ಯವಾಗಿ ವಾಹನ ಖರೀದಿಯ ವೇಳೆ ಸರಕಾರ ಒಂದಷ್ಟು ಶುಲ್ಕ ಹಾಕಲಿದೆ. ಆದರೆ, ವಿಶೇಷ ಚೇತನರಿಗೆ ಇದರಲ್ಲೂ ವಿನಾಯಿತಿ ನೀಡಲಾಗಿದೆ. ಆದೇಶದ ಪ್ರಕಾರ ವಿಶೇಷ ಚೇತನರಿಗೆ

ಚಾಲನೆಗೆ ಅನುಕೂಲವಾಗುವಂತೆ ವಾಹನವನ್ನು ಮಾರ್ಪಾಡು ಮಾಡಬೇಕು. ಈ ವಾಹವನ್ನು ಸ್ಥಳೀಯ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಬೇಕು. ಬಳಿಕ ಆರ್ಟಿಒದಿಂದ ವಿಶೇಷ ಚೇತನರ

ನೋಂದಣಿ ರಿಜಿಸ್ಟ್ರಾರ್ ಅಡಾಪ್ಟೆಡ್ ವಾಹನ ಎಂದು ನಮೂದಿಸಲಾಗುತ್ತದೆ. ಈ ಆರ್ಸಿ ಪುಸ್ತಕವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆನ್ಲೈನ್ ಮೂಲಕ, ವಿಶೇಷ ಚೇತನರ ಕಾರ್ಡ್ ಸೇರಿಸಿ ಅರ್ಜಿ

ಸಲ್ಲಿಸಿದರೆ, ಪ್ರಾಧಿಕಾರಿ ಪರಿಶೀಲನೆ ಮಾಡಿ ಇವರಿಗೆ ಜಿರೋ ಫಾಸ್ಟ್ ಟ್ಯಾಂಗ್ ಕಳುಹಿಸಿಕೊಡುತ್ತದೆ. ಇದನ್ನು ವಾಹನದ ಮೇಲೆ ಅಂಟಿಸುವುದರಿಂದ ದೇಶದ ಪ್ರತಿ ಟೋಲ್ಗಳಲ್ಲಿ ಇವರಿಗೆ ಶುಲ್ಕದಿಂದ

ವಿನಾಯಿತಿ ದೊರಕುತ್ತದೆ.

ವಾಹನ ನೋಂದಣಿಗೆ ಶುಲ್ಕ: ಸಾಮಾನ್ಯರು ವಾಹನಕ್ಕೆ ಶೇಕಡಾ 28ರಷ್ಟು GST ಹಾಗೂ ಶೇಕಡಾ 1ರಷ್ಟು ಸೆಸ್ ವಿಧಿಸುತ್ತಲಾಗುತ್ತದೆ. ಆದರೆ ವಿಶೇಷ ಚೇತನರಿಗೆ ಶೇಕಡಾ 1ರಷ್ಟು ಸೆಸ್ನಿಂದ ವಿನಾಯಿತಿ

ಜೊತೆಗೆ ಶೇಕಡಾ 18ರಷ್ಟು GST ಪಾವತಿ ಮಾತ್ರ ಮಾಡಬೇಕಾಗುತ್ತದೆ. ಇದೊಂದಿಗೆ ರಸ್ತೆ ತೆರಿಗೆಯಲ್ಲೂ ವಿನಾಯಿತಿ ನೀಡಲಾಗುತ್ತದೆ.

ಇದನ್ನು ಓದಿ: ಇನ್ನೇಷ್ಟು ಜನ ಸಾಯಬೇಕು: ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ ಹೈಕೋರ್ಟ್

Exit mobile version