ಗವಿಮಠಕ್ಕೆ ಹರಿದು ಬರುತ್ತಿದೆ ದೇಣಿಗೆ, ಸರ್ಕಾರದಿಂದಲೂ 10 ಕೋಟಿ ಘೋಷಣೆ

Gavi siddeshwara Mata

ಕೊಪ್ಪಳದ (Koppala) ಗವಿಸಿದ್ದೇಶ್ವರ ಮಠಕ್ಕೆ (Gavi siddeshwara Mutt gets 10 cr) ಲಕ್ಷಾಂತರ ಭಕ್ತರು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ. ಗವಿಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಕಾರ್ಯಕ್ಕೆ ಭಕ್ತರ ಮನಮಿಡಿದಿದೆ.


ಕೊಪ್ಪಳದ ಗವಿಸಿದ್ದೇಶ್ವರ ಮಠದ ಆವರಣದಲ್ಲಿ ಐದು ಸಾವಿರ ವಿದ್ಯಾರ್ಥಿಗಳಿಗಾಗಿ(Gavi siddeshwara Mutt gets 10 cr) ವಸತಿ ನಿಲಯ ಮತ್ತು ಪ್ರಸಾದ ನಿಲಯ ನಿರ್ಮಿಸಲು ಶ್ರೀಗಳು ಪಣತೊಟ್ಟಿದ್ದಾರೆ.

https://vijayatimes.com/miss-india-2022-winner-sini-shetty/

ವಸತಿ ನಿಲಯದ ಸಮಸ್ಯೆಯಿಂದ ಅನೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ ಎಂಬುದು ವಿದ್ಯಾರ್ಥಿಗಳಿಗೆ ಬಹುಮುಖ್ಯವಾಗಿದ್ದು, ನನ್ನ ಜೋಳಿಗೆಯಲ್ಲಿ ಶಕ್ತಿ ಇರುವಷ್ಟು ಅವರಿಗಾಗಿ ಕೆಲಸ ಮಾಡುತ್ತೇನೆ ಎಂದು ಶ್ರೀಗಳು ಹೇಳಿದ್ದಾರೆ.

ಹೀಗಾಗಿ ಗವಿಮಠದಲ್ಲಿ ವಸತಿ ನಿಲಯ ನಿರ್ಮಿಸಲು ಅನೇಕ ಭಕ್ತರು ತಮ್ಮ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ.


ಕೊಪ್ಪಳ ಮಾತ್ರವಲ್ಲದೇ ರಾಜ್ಯದ ಬೇರೆ ಜಿಲ್ಲೆಗಳಿಂದಲೂ ಅನೇಕರು ದೇಣಿಗೆ ನೀಡುತ್ತಿದ್ದಾರೆ. ಉತ್ತರ ಕರ್ನಾಟಕದ ಅನೇಕ ಗ್ರಾಮಗಳಲ್ಲಿ ಜನರು ಸ್ವಯಂಪ್ರೇರಿತರಾಗಿ ದೇಣಿಗೆ ಸಂಗ್ರಹಿಸಿ, ಮಠಕ್ಕೆ ನೀಡುತ್ತಿದ್ದಾರೆ.

ಗವಿಮಠದ ಹಳೆಯ ವಿದ್ಯಾರ್ಥಿಗಳು ಕೂಡಾ ತಮ್ಮ ಕೈಜೋಡಿಸಿದ್ದಾರೆ. ಅನೇಕ ಸಂಘ-ಸಂಸ್ಥೆಗಳು ಕೂಡಾ ಮಠದ ಉತ್ತಮ ಕಾರ್ಯಕ್ಕೆ ನೆರವು ನೀಡುತ್ತಿವೆ.

https://youtu.be/OfYo9EOEIJ4

ಕೆಲ ದಿನಗಳ ಹಿಂದೆ ವಸತಿನಿಲಯಕ್ಕೆ ಭೂಮಿ ಪೂಜೆ ಸಲ್ಲಿಸುವ ವೇಳೆ, “ಮಕ್ಕಳು ವಿದ್ಯಾವಂತರಾಗಬೇಕು ಎಂಬುದು ಗವಿಮಠದ ಸಂಕಲ್ಪವಾಗಿದೆ. ಹೀಗಾಗಿ ನಾವು ಜೋಳಿಗೆ ಹಿಡಿಯುವೆ” ಎಂದು ಅಭಿನವ ಗವಿಸಿದ್ದೇಶ್ವರ ಶ್ರೀಗಳು ಕಣ್ಣಿರುಡುತ್ತಾ, ಭಾವುಕರಾಗಿ ಹೇಳಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್(Viral) ಆಗಿತ್ತು. ಇನ್ನು ಕೊಪ್ಪಳದ ಶಾಸಕರು ಮತ್ತು ಸಂಸದರ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಗವಿಮಠದ ಕಾರ್ಯಕ್ಕೆ ಅನುದಾನ ನೀಡಬೇಕೆಂದು ಮನವಿ ಮಾಡಿದ್ದರು.

ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕೂಡಲೇ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದ್ದಾರೆ.
Exit mobile version