ಗುಜರಿಗೆ ಬೀಳಲಿವೆ 9 ಲಕ್ಷ ಸರ್ಕಾರಿ ಗಾಡಿಗಳು: ಕಾರಣ ಕೇಳಿದ್ರೆ ಶಾಕ್ ಆಗ್ತೀರಾ

Bengaluru : ಏಪ್ರಿಲ್ ಒಂದರಂದು ಗುಜರಿಗೆ ಬೀಳಲಿವೆ 9 ಲಕ್ಷ ಸರ್ಕಾರಿ ಗಾಡಿಗಳು. ಯಾಕೆ ಗೊತ್ತಾ? ಏಪ್ರಿಲ್‌ ಒಂದರಿಂದ ದೇಶದಲ್ಲಿ ಹೊಸ ವಾಹನ (government vehicles being scrapped) ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಲಿದೆ.

ಆ ನಿಯಮ ಯಾವುದು ಅಂದ್ರೆ 15 ವರ್ಷಕ್ಕಿಂತ ಹೆಚ್ಚು ಹಳೆಯದಾದ ವಾಹನಗಳು ರೋಡಿಗಿಳಿಯುವಂತಿಲ್ಲ.

ಇದರ ಪರಿಣಾಮವಾಗಿಯೇ 9 ಲಕ್ಷ ಸರ್ಕಾರಿ ವಾಹನಗಳನ್ನು(Government Vehicle) ಗುಜರಿಗೆ ಹಾಕಲಾಗುತ್ತಿದೆ.

ಹಳೆಯ ವಾಹನಗಳು ಉಗುಳುವ ವಿಷಕಾರಿ ಹೊಗೆ ಜನರಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ವಾಹನಗಳ ಹೊಗೆಯಿಂದ ಶ್ವಾಸಕೋಶದ ಕ್ಯಾನ್ಸರ್‌(Lung Cancer) ಕಾಮನ್ ಆಗಿದೆ.

ಮಕ್ಕಳಲ್ಲಿ ಶ್ವಾಸಕೋಶದ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅಲ್ಲದೆ ನಗರ ಪ್ರದೇಶಗಳಲ್ಲಿ ಟ್ರಾಫಿಕ್‌ ಜಾಮ್‌(Traffic Jam) ಬಗೆಹರಿಸಲಾಗದ ಸಮಸ್ಯೆಯಾಗಿದೆ.

ಜನ ತಮ್ಮ ಅತ್ಯಮೂಲ್ಯ ಸಮಯವನ್ನು ರಸ್ತೆಯಲ್ಲೇ ಕಳೆಯುವಂತಾಗಿದೆ. ಈ ಎಲ್ಲಾ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.

ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಆಪರೇಷನ್‌ ಕಮಲ ; ಕೇಸರಿ ಪಡೆ ಸೇರಿದ ಜೆಡಿಎಸ್-ಕಾಂಗ್ರೆಸ್‌ ನಾಯಕರು

ಹಾಗಾಗಿ ಎಫ್ರಿಲ್ 1 ರಿಂದ 15 ವರ್ಷ ಹಳೆಯದಾಗಿರುವ ಅಥವಾ ರಿಜೆಸ್ಟಿರೇಷನ್(Registration) ನವಿಕರಣ ಗೊಂಡಿರುವ ವಾಹನಗಳ ನೊಂದಣಿಯು ಮುಲಾಜಿಲ್ಲದೆ ರದ್ದಾಗಲಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧೀನದಲ್ಲಿರುವ 9 ಲಕ್ಷಕ್ಕೂ ಹೆಚ್ಚು ವಾಹನಗಳು ಏಪ್ರಿಲ್ 1ರಿಂದ ರಸ್ತೆಗಿಳಿಯುವಂತಿಲ್ಲ.

ಕರ್ನಾಟಕದಲ್ಲಿ ಅಂದಾಜು 40ಸಾವಿರ ದಿಂದ 50 ಸಾವಿರ ಸರ್ಕಾರಿ 15 ವರ್ಷ ಹಳೆಯದಾದ ವಾಹನಗಳಿವೆ.

ಗುಜರಿಗೆ ಹಾಕಲಾಗುವ ವಾಹನಗಳ ಬದಲಿಗೆ ವಾಯು ಮಾಲಿನ್ಯ ಉಂಟು ಮಾಡದ ಪರ್ಯಾಯ ಇಂಧನ ( ಸಿ ಏನ್ ಜಿ, ಬಯೋ ಎಲ್ ಏನ್ ಜಿ )

ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು(Electric Vehicle) ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.

ಖಾಸ ಗಿ ವಾಹನಗಳನ್ನು ಗುಜರಿಗೆ ಹಾಕುವ ನಿರ್ಧಾರವನ್ನು ಆಯಾ ರಾಜ್ಯಗಳಿಗೆ ಕೊಡಲಾಗಿದೆ.

15 ವರ್ಷ ತುಂಬಿರುವ ವಾಹನಗಳನ್ನು (government vehicles being scrapped) ಗುಜರಿಗೆ ಹಾಕುವ ಬಗ್ಗೆ ರಾಜ್ಯ ಸರ್ಕಾರ ಡಿಸೇಂಬರ್ 30 2022 ರಂದು ಅಧಿಸೂಚನೆ ಹೊರಡಿಸಿತ್ತು.

ಮೊದಲ ಹಂತವಾಗಿ ಖಾಸಗಿ ವಾಹನ ಗಳನ್ನು ಗುಜರಿಗೆ ಹಾಕುವ ಆಯ್ಕೆ ಮಾಲೀಕರಿಗೆ ಬಿಡಲಾಗಿದೆ.

ಮಾಲೀಕರು ಇಚ್ಚಿಸಿದರೆ ಮಾತ್ರ ತಮ್ಮ ವಾಹನವನ್ನು ಗುಜರಿಗೆ ಹಾಕಬಹುದು . ಆದರೆ ಮುಂದಿನ ದಿನಗಳಲ್ಲಿ ಕಡ್ಡಾಯಗೊಳಿಸಲು ತೀರ್ಮಾನಿಸಿದೆ.

ಗುಜರಿಗೆ ಹಾಕಲಾಗುವ ವಾಹನದಲ್ಲಿರುವ ಉಕ್ಕಿಗೆ ಕೆ ಜಿ ಲೆಕ್ಕದಲ್ಲಿ ಹಣ ಪಾವತಿಸಲಾಗುತ್ತದೆ. ಜೊತೆಗೆ ವಾಹನ ಮಾಲೀಕರಿಗೆ ಠೇವಣಿ ಪ್ರಮಾಣ ಪತ್ರ ವಿತರಿಸಲಾಗುತ್ತದೆ.


ಹೊಸ ವಾಹನ ಖರೀದಿಸುವಾಗ ಈ ಪ್ರಮಾಣ ಪತ್ರ ಆಧರಿಸಿ ಸಾರಿಗೇತರ ವಾಹನಕ್ಕೆ ಶೇ.25 ಹಾಗೂ ಸಾರಿಗೆ ವಾಹನಕ್ಕೆ ಶೇ.15 ತೆರಿಗೆ ವಿನಾಯಿತಿ ಇರಲಿದೆ.
Exit mobile version