H3N2 ವೈರಸ್‌ಗೆ ರಾಜ್ಯದಲ್ಲಿ ಮೊದಲ ಬಲಿ! ಕರ್ನಾಟಕದ ಹಾಸನದ ವ್ಯಕ್ತಿ ಸಾವು

Delhi : ದೇಶದಲ್ಲಿ H3N2 ವೈರಸ್‌ಗೆ (H3N2 virus) ಇಬ್ಬರು ಬಲಿಯಾಗಿದ್ದಾರೆ ಎಂದು ಸರಕಾರ ಇಂದು ತಿಳಿಸಿದೆ ಒಬ್ಬರು ಕರ್ನಾಟಕ (Karnataka) ಮತ್ತು ಇನ್ನೊಬ್ಬರು ಹರಿಯಾಣದ (Haryana) ವ್ಯಕ್ತಿ ಎಂದು ತಿಳಿದುಬಂದಿದೆ. ಕರ್ನಾಟಕದ ಹಾಸನದಲ್ಲಿ 82 ವರ್ಷದ ವ್ಯಕ್ತಿಯೊಬ್ಬರು (H3N2 virus) ದೇಶದಲ್ಲಿ ಎಚ್3ಎನ್2ನಿಂದ ಸಾವನ್ನಪ್ಪಿದ ಮೊದಲ ವ್ಯಕ್ತಿ ಎಂದು ತಿಳಿದುಬಂದಿದೆ.

ಹಿರೇಗೌಡ ಅವರನ್ನು ಫೆಬ್ರವರಿ 24 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮಾರ್ಚ್ 1 ರಂದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರು ಮಧುಮೇಹಿ (Diabetic) ಮತ್ತು ಅಧಿಕ ರಕ್ತದೊತ್ತಡದಿಂದ (blood pressure) ಬಳಲುತ್ತಿದ್ದರು ಎಂದು ವರದಿಯಾಗಿದೆ. ಹರಿಯಾಣದ ರೋಗಿಯು 56 ವರ್ಷದ ಶ್ವಾಸಕೋಶದ ಕ್ಯಾನ್ಸರ್ ರೋಗಿಯಾಗಿದ್ದು,

ಜನವರಿಯಲ್ಲಿ H3N2 ಗೆ ಪರೀಕ್ಷೆ ನಡೆಸಿದ್ದರು ಅದೇ ವೇಳೆ ವೈರಸ್ ಇರುವುದಾಗಿ ದೃಢಪಟ್ಟಿತ್ತು .

ಅವರು ಜಿಂದ್‌ನಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ನಿಧನರಾದರು ಎಂಬುದು ವರದಿಯಾಗಿದೆ.

ದೇಶದಲ್ಲಿ ಸುಮಾರು 90 ಎಚ್3ಎನ್2 ವೈರಸ್ ಪ್ರಕರಣಗಳು ವರದಿಯಾಗಿವೆ. ಎಂಟು ಎಚ್1ಎನ್1 ಪ್ರಕರಣಗಳೂ ಪತ್ತೆಯಾಗಿವೆ.

ಇದನ್ನೂ ಓದಿ : https://vijayatimes.com/outrage-against-rapido/


15 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಈ ರೋಗ ಪತ್ತೆಯಾಗಿದೆ. ಸದ್ಯ ದೇಶದಲ್ಲಿ ಕಳೆದ ಒಂದು ವಾರದಿಂದ ಸೋಂಕಿತ ಸಂಖ್ಯೆ ಶೇಕಡಾ 10-15 ರಷ್ಟು ಹೆಚ್ಚಳವಾಗಿದೆ.

ಎಚ್೩ಎನ್೨ ವೈರಸ್ ಇನ್ ಪ್ಲುಎಂಜಾ ಎ ವೈರಸ್ ನ ಉಪತಳಿಯಾಗಿದೆ. ಇನ್ನೂ 50 ವರ್ಷ ಮೇಲ್ಪಟ್ಟವರನ್ನು ಎಚ್೩ಎನ್೨ ವೈರಸ್ ಕಾಡುತ್ತಿದೆ.


ಮಾರ್ಚ್ ಅಂತ್ಯದ ವೇಳೆಗೆ ಪ್ರಕರಣಗಳು ಕಡಿಮೆಯಾಗುವ ನಿರೀಕ್ಷೆಯಿದೆ ಸೋಂಕುಗಳು ಮತ್ತು ಸಾವುಗಳ ಮೇಲೆ ನಿಗಾ ವಹಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ತಜ್ಞರ ಪ್ರಕಾರ, ಈ ವೈರಸ್ ಬೇಗ ಹರಡುತ್ತಿದೆ. ಕೆಮ್ಮುವಿಕೆ, ಸೀನುವಿಕೆ ಮತ್ತು ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದ ಮೂಲಕ ಹರಡುತ್ತದೆ.

ವಯಸ್ಕರು ಮತ್ತು ಮಕ್ಕಳಿಗೆ ಬಹಳ ಬೇಗ ಹರಡುವ ಸಾದ್ಯತೆ ಇದ್ದು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ : https://vijayatimes.com/amitsha-thought/


ರೋಗ ಲಕ್ಷಣ ಇರುವವರು ಸೀನುವಾಗ ಮತ್ತು ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಹೇಳಿದೆ.

ಹೊಸ ಎಚ್೩ಎನ್೨ ವೈರಸ್ ಬಂದ್ರೆ ಜ್ವರ, ಕೆಮ್ಮು, ವಾಕರಿಕೆ, ವಾಂತಿ, ಗಂಟಲು ನೋವು, ಸ್ನಾಯು ಸೆಳೆತ, ಅತಿಸಾರ, ಮೈಕೈ ನೋವು, ತಲೆ ನೋವು ಬಾಧಿಸಲಿದೆ.

ಈ ಎಲ್ಲಾ ರೋಗ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ತಕ್ಷಣ ವೈದ್ಯಾಧಿಕಾರಿಗಳನ್ನ ಬೇಟಿ ಮಾಡಿ. ಜೊತೆಗೆ ಅಂತರ ಕಾಯ್ದುಕೊಳ್ಳಿ, ಕಡ್ಡಾಯವಾಗಿ ಮಾಸ್ಕ ಧರಿಸಿ.

Exit mobile version