15% ಜನರಿಗಾಗಿ 85% ನಾಗರಿಕರ ಮೂಲಭೂತ ಹಕ್ಕು ಉಲ್ಲಂಘನೆ ; ಹಲಾಲ್ ಕುರಿತು ಸುಪ್ರೀಂನಲ್ಲಿ ಅರ್ಜಿ!

halal

ಸಂವಿಧಾನದ 14 ಮತ್ತು 15ನೇ ವಿಧಿಯ ಪ್ರಕಾರ ಹಲಾಲ್ ಉತ್ಪನ್ನಗಳ(Halal Products) ಮಾರಾಟ ಸಂವಿಧಾನ ವಿರೋಧಿ ಕೃತ್ಯವಾಗಿದೆ. ಈ ದೇಶದ ಶೇ.15ರಷ್ಟು ಜನರ ನಂಬಿಕೆಗಳನ್ನು ಶೇ.85ರಷ್ಟು ಜನರ ಮೇಲೆ ಹೇರುವುದು ಸಂವಿಧಾನ ವಿರೋಧಿಯಾಗಿದೆ.

ಹೀಗಾಗಿ ದೇಶಾದ್ಯಂತ ಹಲಾಲ್ ಉತ್ಪನ್ನಗಳನ್ನು ನಿಷೇಧ ಮಾಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಕೆಯಾಗಿದೆ. ದೇಶದಲ್ಲಿ ಹಲಾಲ್ ಉತ್ಪನ್ನಗಳ ಮೂಲಕ 85%ರಷ್ಟು ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. 1974ರಲ್ಲಿ ಹಲಾಲ್ ಪ್ರಮಾಣೀಕರಣ ವ್ಯವಸ್ಥೆ ಆರಂಭವಾಯಿತು. ಆದರೆ ಈ ಪ್ರಮಾಣೀಕರಣ ವ್ಯವಸ್ಥೆಗೆ ಯಾವುದೇ ಸರ್ಕಾರಿ ಮಾನ್ಯತೆ ಇಲ್ಲ. ಪ್ರಾರಂಭದಲ್ಲಿ ಮಾಂಸಕ್ಕೆ ಮಾತ್ರ ಹಲಾಲ್ ಪ್ರಮಾಣಪತ್ರ ನೀಡಲಾಗುತ್ತಿತ್ತು.

ಇದೀಗ ಫಾರ್ಮಾಸ್ಯುಟಿಕಲ್ಸ್, ಕಾಸ್ಮೆಟಿಕ್ಸ್, ಆರೋಗ್ಯ, ವೈದ್ಯಕೀಯ ಉಪಕರಣ, ರೆಸ್ಟೋರೆಂಟ್, ಟೂರಿಸಂ, ಸರಕು ಸಾಗಣಿಕೆ, ಮಾದ್ಯಮ, ಮಾರ್ಕೆಟಿಂಗ್ ಸೇರಿದಂತೆ ಬಹುತೇಕ ಕ್ಷೇತ್ರಗಳಿಗೆ ಹಲಾಲ್ ಕಾಲಿಟ್ಟಿದೆ. ಹೀಗಾಗಿ ಇದನ್ನು ನಿಷೇಧಿಸಬೇಕೆಂದು ಕೋರಿ ವಕೀಲ ವಿಭೋರ್ ಆನಂದ್ ಎಂಬುವವರು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಇಸ್ಲಾಮಿನ ಪ್ರಕಾರ ಹಲಾಲ್ ಎಂದರೆ ಕಾನೂನುಬದ್ದವಾದ ಅಥವಾ ಪ್ರಮಾಣೀಕರಿಸಲಾದ ಎಂಬ ಅರ್ಥ ಕೊಡುತ್ತದೆ. ಆದರೆ ಭಾರತದಲ್ಲಿ ಆಹಾರೋತ್ಪನ್ನಗಳಿಗೆ ಪ್ರಮಾಣಪತ್ರ ನೀಡಲು ಆಹಾರ ಸುರಕ್ಷತಾ ಪ್ರಾಧಿಕಾರ ಇದೆ.

ಇದು ಸರ್ಕಾರದ ಮಾನ್ಯತೆ ಹೊಂದಿರುವ ಸಂಸ್ಥೆಯಾಗಿದೆ. ಹೀಗಿರುವಾಗ ಕೇವಲ ಒಂದು ಧರ್ಮಕ್ಕೆ ಸಿಮೀತವಾಗಿರುವ ವ್ಯವಸ್ಥೆಯನ್ನು ದೇಶದ 85%ರಷ್ಟು ಜನರ ಮೇಲೆ ಹೇರುವುದು ಸಂವಿಧಾನ ವಿರೋಧಿಯಾಗಿದೆ. ಒಂದು ಧರ್ಮದ ನಂಬಿಕೆಯನ್ನು ದೇಶದ ಎಲ್ಲ ಜನರ ಮೇಲೆ ಹೇರುವುದು ಸಂವಿಧಾನದ 14 ಮತ್ತು 15ನೇ ವಿಧಿಯ ಉಲ್ಲಂಘನೆಯಾಗುತ್ತದೆ.

ಹೀಗಾಗಿ ಎಲ್ಲ ಕಂಪನಿಗಳಿಗೆ ಹಲಾಲ್ ಪ್ರಮಾಣೀಕೃತ ಆಹಾರೋತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಮತ್ತು ಹಲಾಲ್ ಪ್ರಮಾಣೀಕರಣ ವ್ಯವಸ್ಥೆಯನ್ನು ನಿಷೇಧಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Exit mobile version